![1-vijayendra](https://www.udayavani.com/wp-content/uploads/2024/07/1-vijayendra-415x277.jpg)
Arrested: ಮಹಿಳೆಗೆ ಲೈಂಗಿಕ ದೌರ್ಜನ್ಯ; ಪಬ್ಲಿಕ್ ಪಾಸಿಕ್ಯೂಟರ್ ಸೆರೆ
Team Udayavani, May 11, 2024, 11:39 AM IST
![Arrested: ಮಹಿಳೆಗೆ ಲೈಂಗಿಕ ದೌರ್ಜನ್ಯ; ಪಬ್ಲಿಕ್ ಪಾಸಿಕ್ಯೂಟರ್ ಸೆರೆ](https://www.udayavani.com/wp-content/uploads/2024/05/5-8-620x372.jpg)
ಬೆಂಗಳೂರು: ಪ್ರಕರಣವೊಂದರ ಆದೇಶ ಪ್ರತಿ ಕೊಡುವುದಾಗಿ ಕಕ್ಷಿದಾರ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟಿರುವ ಆರೋಪದಡಿ ಸರ್ಕಾರಿ ಅಭಿಯೋಜಕನನ್ನು ಕಾಟನ್ಪೇಟೆ ಪೊಲೀಸರು ಬಂಧಿಸಿದ್ದಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀರಾಮ್ ಬಂಧಿತ ಆರೋಪಿ.
ದೂರುದಾರ ಮಹಿಳೆ ನೀಡಿದ್ದ ಪ್ರಕರಣವೊಂದರಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆ ಮಹಿಳೆ ಜಾಮೀನು ರದ್ದು ಕೋರಿ ಅರ್ಜಿ ಸಲ್ಲಿಸಲು ಆದೇಶ ಪ್ರತಿಯನ್ನು ಶ್ರೀರಾಮ್ ಬಳಿ ಕೇಳಿದ್ದಳು. ಮೆಜೆಸ್ಟಿಕ್ ಬಳಿ ಇರುವ ಹೋಟೆಲ್ ಸಮೀಪ ಪ್ರಾಸಿಕ್ಯೂಟರ್ ಆದೇಶ ಪ್ರತಿ ಕೊಡುವುದಾಗಿ ಹೇಳಿದ್ದ ಎನ್ನಲಾಗಿದೆ. ಮಹಿಳೆ ಆತ ಹೇಳಿದ ಜಾಗಕ್ಕೆ ಹೋದಾಗ, ಆತ ಕಾಟನ್ಪೇಟೆ ಲಾಡ್ಜ್ವೊಂದಕ್ಕೆ ಬರುವಂತೆ ಸೂಚಿಸಿದ್ದ. ಅಲ್ಲಿಗೆ ಮಹಿಳೆ ತೆರಳಿದಾಗ ಆತ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ.
ಪಬ್ಲಿಕ್ ಪ್ರಾಸಿಕ್ಯೂಟರ್ ವರ್ತನೆಗೆ ಪ್ರತಿರೋಧ ತೋರಿದ ಮಹಿಳೆಯು ಕೂಡಲೇ ಪತಿಗೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಳು. ಈ ವೇಳೆ ಮಹಿಳೆಯ ಪತಿ ಹಾಗೂ ಸ್ನೇಹಿತರು ಅಲ್ಲಿಗೆ ಬಂದು ಶ್ರೀರಾಮ್ನನ್ನು ಕಾಟನ್ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಾಟನ್ ಪೇಟೆ ಪೊಲೀಸರು ಆರೋಪಿ ಶ್ರೀರಾಮ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಟಾಪ್ ನ್ಯೂಸ್
![1-vijayendra](https://www.udayavani.com/wp-content/uploads/2024/07/1-vijayendra-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Tragic: ಸೊಸೆ ಮನೆ ಬಿಟ್ಟು ಹೋಗಿದ್ದಕ್ಕೆ ಅತ್ತೆ, ಮಾವ ನೇಣಿಗೆ ಶರಣು](https://www.udayavani.com/wp-content/uploads/2024/07/6-2-150x90.jpg)
Tragic: ಸೊಸೆ ಮನೆ ಬಿಟ್ಟು ಹೋಗಿದ್ದಕ್ಕೆ ಅತ್ತೆ, ಮಾವ ನೇಣಿಗೆ ಶರಣು
![Assault Case: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ](https://www.udayavani.com/wp-content/uploads/2024/07/5-2-150x90.jpg)
Assault Case: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ
![Arrested: ಕಂಪನಿಗಳ ಹೆಸರಿನಲ್ಲಿ ಬಟ್ಟೆ ಮಾರಾಟ; ಆರೋಪಿ ಬಂಧನ](https://www.udayavani.com/wp-content/uploads/2024/07/4-2-150x90.jpg)
Arrested: ಕಂಪನಿಗಳ ಹೆಸರಿನಲ್ಲಿ ಬಟ್ಟೆ ಮಾರಾಟ; ಆರೋಪಿ ಬಂಧನ
![3](https://www.udayavani.com/wp-content/uploads/2024/07/3-3-150x90.jpg)
Supplier: ಬೇಗ ಊಟ ತನ್ನಿ ಎಂದಿದ್ದಕ್ಕೆ ಆಶ್ಲೀಲ ಸನ್ನೆ ತೋರಿದ ಸಪ್ಲ್ಯೈಯರ್; ವೈರಲ್
![ನಾಪತ್ತೆಯಾಗಿದ್ದ ಕಾನ್ಸ್ಟೇಬಲ್ ಪತ್ತೆಗಾಗಿ 250 ಸಿಸಿ ಕ್ಯಾಮೆರಾ ಶೋಧಿಸಿದ್ದ ಪೊಲೀಸರು](https://www.udayavani.com/wp-content/uploads/2024/07/2-2-150x90.jpg)
ನಾಪತ್ತೆಯಾಗಿದ್ದ ಕಾನ್ಸ್ಟೇಬಲ್ ಪತ್ತೆಗಾಗಿ 250 ಸಿಸಿ ಕ್ಯಾಮೆರಾ ಶೋಧಿಸಿದ್ದ ಪೊಲೀಸರು
MUST WATCH
ಹೊಸ ಸೇರ್ಪಡೆ
![1-vijayendra](https://www.udayavani.com/wp-content/uploads/2024/07/1-vijayendra-150x100.jpg)
CM ಸಿದ್ದರಾಮಯ್ಯ ಮನೆ ಮುತ್ತಿಗೆಗೆ ಯತ್ನ; ಬಿಜೆಪಿ ಪ್ರಮುಖ ನಾಯಕರು ವಶಕ್ಕೆ
![vijayapura](https://www.udayavani.com/wp-content/uploads/2024/07/vijayapura-2-150x90.jpg)
Vijayapura; ಕೃಷ್ಣಾ ನದಿ ತೆಪ್ಪ ದುರಂತ: ಮೂವರ ಶವಪತ್ತೆ, ಇಬ್ಬರಿಗಾಗಿ ಶೋಧ
![1-raju](https://www.udayavani.com/wp-content/uploads/2024/07/1-raju-150x85.jpg)
Vijayapura: ವೀರಯೋಧ ಹವಾಲ್ದಾರ್ ರಾಜು ಕರ್ಜಗಿ ಪಾರ್ಥಿವ ಶರೀರ ತವರಿಗೆ ಆಗಮನ
![1-PTI](https://www.udayavani.com/wp-content/uploads/2024/07/1-PTI-150x91.jpg)
Mumbai ಬೀದಿಗಳನ್ನು ವ್ಯಾಪಾರಿಗಳು ವಶಪಡಿಸಿಕೊಂಡಿದ್ದು ಪಾದಚಾರಿಗಳಿಗೆ ಸ್ಥಳವಿಲ್ಲ: ಹೈಕೋರ್ಟ್
![1-asddasdsa](https://www.udayavani.com/wp-content/uploads/2024/07/1-asddasdsa-1-150x100.jpg)
Hurricane; ಯಾವುದೇ ವಿಳಂಬಗಳಾಗದಿದ್ದಲ್ಲಿ ನಾಳೆ ಬೆಳಗ್ಗೆ ದಿಲ್ಲಿಗೆ ಟೀಮ್ ಇಂಡಿಯಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.