UV Fusion: ಸಮಯಪ್ರಜ್ಞೆಯಿಂದ ಬದುಕಿದ ಬಡಜೀವ!


Team Udayavani, May 11, 2024, 11:49 AM IST

8-uv-fusion

ಎಂದಿನಂತೆ ಕಾಲೇಜು ಮುಗಿಸಿ ರೈಲಿಗೆ ತಡವಾಯಿತೆಂದು ಆತುರಾತುರವಾಗಿ ರೈಲು ನಿಲ್ದಾಣದೆಡೆಗೆ ಹೆಜ್ಜೆಹಾಕುತ್ತಿದ್ದೆ. ಪುಣ್ಯಕ್ಕೆ, ಆ ದಿನ ನಾನು ಪ್ರಯಾಣ ಮಾಡುವ ರೈಲು ತಡವಾಗಿ ಹೊರಟದ್ದರಿಂದ ರೈಲು ತಪ್ಪಲಿಲ್ಲ.

ರೈಲಿನಲ್ಲಿ ಒಟ್ಟಿಗೆ ಪ್ರಯಾಣ ಮಾಡುವ ಗೆಳೆಯ ಕಿಟಕಿ ಬದಿಯ ಸೀಟನ್ನು ಕಾಯ್ದಿರಿಸಿದ್ದರಿಂದ ಅಲ್ಲೇ ಕುಳಿತೆ. ರೈಲು ಹೊರಡಲು ಅನುವಾಯಿತು. ಓಡಿ ಬಂದದ್ದರಿಂದ ಬೆವರಿದ್ದ ಮುಖಕ್ಕೆ ತಣ್ಣನೆಯ ಗಾಳಿ ಆಹ್ಲಾದಕರವೆನಿಸಿತ್ತು.

2 ಘಂಟೆಗಳ ಪ್ರಯಾಣದ ಅನಂತರ ಬೇಕಲಕೋಟೆ ರೈಲು ನಿಲ್ದಾಣಕ್ಕೆ ರೈಲು ತಲುಪಿತು. ತಂಗಾಳಿಗೆ ಸುಮಧುರ ಹಾಡೂ ಜೊತೆಯಾದದ್ದರಿಂದ, ಬೇಕಲಕೋಟೆಗೆ ತಲುಪಿದ್ದೇ ತಿಳಿಯಲಿಲ್ಲ. ಎಂದಿನಂತೆ ರೈಲಿನಿಂದ ಇಳಿದು ಗೆಳೆಯ ನೊಂದಿಗೆ ಹರಟೆ ಹೊಡೆಯುತ್ತಾ ಮುಂದೆ ಸಾಗುತ್ತಿದ್ದಾಗ, ಒಬ್ಬ ವ್ಯಕ್ತಿ ತಾನಿದ್ದ ಬೋಗಿಯಿಂದ ಮತ್ತೂಂದು ಬೋಗಿಗೆ ಹತ್ತಲೆಂದು ಇಳಿದ. ಆದರೆ ಕೂಡಲೆ ಬೋಗಿಗೆ ಹತ್ತದೇ ನಿಧಾನ ಮಾಡಿದ್ದರಿಂದ ರೈಲು ಹೊರಟಿತು.

ಓಡಿಕೊಂಡು ಹತ್ತಲು ಮುಂದಾದ. ಆದರೆ ಓಡುವ ಬರದಲ್ಲಿ ಆಯತಪ್ಪಿ ರೈಲಿನ ಟ್ರಾಕ್‌ ಮೇಲೆ ಬೀಳುವಪರಿಸ್ಥಿತಿ ಬಂತು. ಆಗ ರೈಲಿನಲ್ಲಿದ್ದ ಇತರ ಪ್ರಯಾಣಿಕರು ಸಮಯ ಪ್ರಜ್ಞೆ ಮೆರೆದು ತುರ್ತು ಸರಪಳಿ ಎಳೆದರು. ರೈಲು ತಕ್ಷಣವೇ ನಿಂತಿತು. ಎಲ್ಲರೂ ಅವನತ್ತ ಓಡಿ ಬಂದರು. ನಾನೂ ಗೆಳೆಯನೊಂದಿಗೆ ಓಡಿಹೋದೆ. ಆ ವ್ಯಕ್ತಿ ಅಷ್ಟರಲ್ಲಾಗಲೇ ಪ್ರಾಣಭಯದಿಂದ ಹೆದರಿಹೋಗಿದ್ದ. ಅಲ್ಲಿ ನೆರೆದವರು ಆಗಲೇಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಮಾತಿನ ಮಳೆಗೆರೆಯ ಲಾರಂಭಿಸಿದ್ದರು. ಇದರಿಂದ ಆತ ಮತ್ತಷ್ಟು ಕಂಗಾಲಾಗಿದ್ದ. ಅದೃಷ್ಟವಶಾತ್‌ ಪ್ರಯಾಣಿಕರ ಸಮಯ ಪ್ರಜ್ಞೆಯಿಂದ ಅವನ ಜೀವ ಉಳಿದದ್ದು ಮಾತ್ರ ಸುಳ್ಳಲ್ಲ.

ಇಂತಹ ತುರ್ತು ಸಂದರ್ಭಗಳಲ್ಲಿ ಸುಖಾಸುಮ್ಮನೆ ಬೇರೆಯವರನ್ನು ದೂರುವುದಕ್ಕಿಂತ ಕಾರ್ಯ ರೂಪಕ್ಕೆ ಇಳಿಯುವುದು ಅತ್ಯಂತ ಜರೂರಾಗಿರುತ್ತದೆ, ಎಂಬುದನ್ನು ಅರಿಯಬೇಕಿದೆ. ಹಾಗೆಂದು ಆತ ಬೋಗಿ ಹತ್ತುವಾಗ ತಡ ಮಾಡಿದ್ದು ಸರಿಯೆಂದು ಅರ್ಥವಲ್ಲ. ಆತನದ್ದೂ ತಪ್ಪಿದೆ ಇಲ್ಲಿ. ಆದರೆ ಆ ಸಮಯದಲ್ಲಿ ಜೀವ ಉಳಿಸಿದ ಆ ಪುಣ್ಯಾತ್ಮನ ಕಾರ್ಯವನ್ನು ನಿಜಕ್ಕೂ ಮೆಚ್ಚುವಂತಹದ್ದು. ಇಲ್ಲವಾಗಿದ್ದಲ್ಲಿ ಕಣ್ಣಮುಂದೆಯೇ ಆ ವ್ಯಕ್ತಿಯ ಪ್ರಾಣಪಕ್ಷಿ ಹಾರಿಹೋಗುತ್ತಿತ್ತು.

- ಶ್ರೀಜಿತ್‌

ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು

ಟಾಪ್ ನ್ಯೂಸ್

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

Maha Kumbh 2025: ನಾಗಾ ಸಾಧುಗಳಿಗೂ…ಅಘೋರಿಗಳಿಗೂ ಇರುವ ವ್ಯತ್ಯಾಸವೇನು? ಆಹಾರ ಪದ್ಧತಿ ಹೇಗೆ

1-dee

Maha Kumbh; 7 ಕೋಟಿ ರುದ್ರಾಕ್ಷಿಗಳಿಂದ 12 ಜ್ಯೋತಿರ್ ಲಿಂಗಗಳ ರಚನೆ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ

Gudibande: ಬುದ್ದಿವಾದ ಹೇಳಿದ್ದೆ ತಪ್ಪಾಯ್ತು… ವಿದ್ಯುತ್ ಹರಿಸಿ ವ್ಯಕ್ತಿಯ ಕೊಲೆ ಯತ್ನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Bharatanatyam: ನಾಟ್ಯಗಳ ರಾಣಿ ಭರತನಾಟ್ಯ

12-uv-fusion

Education: ಮಾನವನ ಸುಸ್ಥಿರತೆಗೆ ಶಿಕ್ಷಣ ಮೂಲ ಮಂತ್ರ

11-betel-leaf-1

Betel leaf: ಮೈಸೂರ ಚಿಗುರೆಲೆ

9-uv-fusion

Old Age Home: ಶಿಕ್ಷ‌ಣ ವೃದ್ಧಾಶ್ರಮ ಹೆಚ್ಚಿಸದಿರಲಿ!

Motherhood: ತಾಯ್ತನದ ಪ್ರೀತಿ..

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

rohit

BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು

kohli

Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ

MB-Patil-Mi

ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್‌

puttige-8-

Puthige Matha: ವಿಶ್ವ ಗೀತಾ ಪರ್ಯಾಯಕ್ಕೆ‌ ಇಂದಿಗೆ ವರ್ಷ ಪೂರ್ಣ

police crime

Saif Ali Khan ಪ್ರಕರಣ: ಶಂಕಿತ ಆರೋಪಿ ಛತ್ತೀಸ್‌ಘಡದಲ್ಲಿ ರೈಲ್ವೆ ಪೊಲೀಸರ ಬಲೆಗೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.