Kantara Prequel: ಕೋಟಿ ಕೋಟಿ ಕೊಟ್ಟು ʼಕಾಂತಾರ -1ʼ ಡಿಜಿಟಲ್ ಹಕ್ಕನ್ನು ಖರೀದಿಸಿದ ಪ್ರೈಮ್
ದೇಶದ ಅತೀದೊಡ್ಡ ಫ್ರಾಂಚೈಸಿ ಸಿನಿಮಾವಾಗಲಿದೆ ʼಕಾಂತಾರʼ
Team Udayavani, May 11, 2024, 12:36 PM IST
ಬೆಂಗಳೂರು: 2022 ರಲ್ಲಿ ತೆರಕಂಡಿದ್ದ ರಿಷಬ್ ಶೆಟ್ಟಿ ಅವರ ʼಕಾಂತಾರʼ ಸ್ಯಾಂಡಲ್ ವುಡ್ ದೊಡ್ಡಹಿಟ್ ಆಗಿ ಪರಭಾಷೆಗೂ ಡಬ್ ಆಗಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಈ ಸಿನಿಮಾದ ಬಳಿಕ ಪ್ರೀಕ್ವೆಲ್ ಬಗ್ಗೆ ಈಗ ಪ್ರೇಕ್ಷಕರ ಕುತೂಹಲ ಹೆಚ್ಚಾಗಿದೆ.
ಅಂದಾಜು 20 ಕೋಟಿ ಬಜೆಟ್ ನಲ್ಲಿ ನಿರ್ಮಾಣವಾದ ʼಕಾಂತಾರʼ ವರ್ಲ್ಡ್ ವೈಡ್ 400 ಕೋಟಿ ಗಳಿಕೆ ಕಾಣುವ ಮೂಲಕ ಕನ್ನಡ ಚಿತ್ರರಂಗದಲ್ಲಿ ʼಕೆಜಿಎಫ್ʼ ಬಳಿಕ ಪ್ಯಾನ್ ಇಂಡಿಯಾದಲ್ಲಿ ಸದ್ದು ಮಾಡಿದ ಮತ್ತೊಂದು ಚಿತ್ರವಾಗಿ ಹೊರಹೊಮ್ಮಿತ್ತು.
‘ಕಾಂತಾರ ಚಾಪ್ಟರ್ -1ʼ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿವೆ. ಈಗಾಗಲೇ ಸಿನಿಮಾದ ಚಿತ್ರೀಕರಣಕ್ಕೆ ಸಾಕಷ್ಟು ತಯಾರಿ ನಡೆಸಲಾಗಿದೆ. ಕುಂದಾಪುರದ ಹಳ್ಳಿಯೊಂದರಲ್ಲಿ ದೊಡ್ಡ ಸೆಟ್ ಗಳನ್ನು ಹಾಕಲಾಗಿದ್ದು, ಚಿತ್ರೀಕರಣ ಆರಂಭಕ್ಕೆ ದಿನಗಣನೆ ಶುರುವಾಗಿದೆ.
ಈಗಾಗಲೇ ʼಕಾಂತಾರ ಪ್ರೀಕ್ವೆಲ್ʼ ಸಿನಿಮಾದ ಡಿಜಿಟಲ್ ಸ್ಟ್ರೀಮ್ ಬಗ್ಗೆ ಸುದ್ದಿಯಾಗಿದೆ. ಅಮೇಜಾನ್ ಪ್ರೈಮ್ ಸಿನಿಮಾದ ಡಿಜಿಟಲ್ ರೈಟ್ಸ್ ನ್ನು ಖರೀದಿಸಿದೆ. ಇದೇ ವರ್ಷದ ಆರಂಭದಲ್ಲಿ ಅಮೇಜಾನ್ ಪ್ರೈಮ್ ʼಕಾಂತಾರ ಚಾಪ್ಟರ್ -1ʼ ಘೋಷಿಸಿತ್ತು.
‘ಕಾಂತಾರ ಪ್ರೀಕ್ವೆಲ್ʼ ಸಿನಿಮಾದ ಪೋಸ್ಟ್ ಥಿಯೇಟ್ರಿಕಲ್ ಡಿಜಿಟಲ್ ರೈಟ್ಸ್ ಬರೋಬ್ಬರಿ 125 ಕೋಟಿ ರೂಪಾಯಿಗೆ ಪ್ರೈಮ್ಗೆ ಮಾರಾಟವಾಗಿದ ಎಂದು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಸೇರಿ ಎಲ್ಲಾ ಭಾಷೆಯ ಡಿಜಿಟಲ್ ರೈಟ್ಸ್ ಪ್ರೈಮ್ ಗೆ ಮಾರಾಟವಾಗಿದೆ. ʼಕಾಂತಾರ -1ʼ ಬಿಗ್ ಬಜೆಟ್ ಚಿತ್ರವಾಗಿರುವುದಿಲ್ಲ, ಆದರೆ ಇದೊಂದು ಹೈ ಕಾನ್ಸೆಪ್ಟ್ ಸಿನಿಮಾವಾಗಿರಲಿದೆ ಎಂದು ವರದಿ ತಿಳಿಸಿದೆ.
ಥಿಯೇಟ್ರಿಕಲ್ ನಂತರದ ಡಿಜಿಟಲ್ ಹಕ್ಕುಗಳು ಚಲನಚಿತ್ರದ ಬಜೆಟ್ಗಿಂತ ಹೆಚ್ಚಿದೆ.
‘ಕಾಂತಾರʼ ಸಿನಿಮಾವನ್ನು ದೇಶದ ಅತಿದೊಡ್ಡ ಫ್ರಾಂಚೈಸಿಗಳಲ್ಲಿ ಒಂದನ್ನಾಗಿ ಮಾಡಲು ಚಿತ್ರತಂಡ ಯೋಜಿಸಿದೆ. ʼಕಾಂತಾರ ಚಾಪ್ಟರ್ -1ʼ ರ ಬಳಿಕ ಮುಂದೆ ಕೂಡ ಇದರ ಮುಂದುವರೆದ ಭಾಗಗಳು ಬರಲಿವೆ. ʼಕಾಂತಾರ ಪ್ರೀಕ್ವೆಲ್ʼ ಬಳಿಕ ಅದರ ಲಾಭದ ಬಳಿಕವಷ್ಟೇ ಸಿನಿಮಾದ ಮುಂದಿನ ಭಾಗಗಳ ಬಗ್ಗೆ ನಿರ್ಧಾರವಾಗಲಿದೆ ಎಂದು ವರದಿ ತಿಳಿಸಿದೆ.
ʼಕಾಂತಾರ ಚಾಪ್ಟರ್ -1ʼ ಇದೇ ವರ್ಷದಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.