Puttur:”ಸಾಯಿ’ ಎನ್ನುತ್ತಾ ಪುತ್ರನನ್ನು ಕೊಂದಳಾ ತಾಯಿ?
ಆತ್ಮಹತ್ಯೆ ಕಥೆ ಕಟ್ಟಿ ಸಿಕ್ಕಿ ಬಿದ್ದ ಹೆತ್ತಮ್ಮ
Team Udayavani, May 12, 2024, 6:55 AM IST
ಪುತ್ತೂರು: ಕುಡಿದ ಮತ್ತಿನಲ್ಲಿ ಅಕ್ಕಪಕ್ಕದ ಮನೆಗಳಿಗೆ ಹೋಗಿ ಗಲಾಟೆ ಮಾಡುತ್ತಿದ್ದ ಪುತ್ರನ ಕಿರುಕುಳವನ್ನು ಸಹಿಸಲಾಗದೇ “ಸಾಯಿ’ ಎನ್ನುತ್ತಾ ಸಂಕೋಲೆ ಬಿಗಿದು ತಾಯಿಯೇ ಕೊಂದು ಬಿಟ್ಟಳಾ ಅನ್ನುವ ಅನುಮಾನಕ್ಕೆ ಕೊಲೆ ಆರೋಪದಲ್ಲಿ ಬಂಧಿತ ಆರೋಪಿ ತಾಯಿ ನೀಡಿದ ಹೇಳಿಕೆ ಪುಷ್ಟಿ ನೀಡಿದೆ.
ಬೆಟ್ಟಂಪಾಡಿ ಕಾನುಮೂಲೆ ನಿವಾಸಿ ದಿ| ಕೊರಗಪ್ಪ ಶೆಟ್ಟರ ಪುತ್ರ ಚೇತನ್(33) ಅವರನ್ನು ಕೊಲೆ ಮಾಡಿರುವ ಆರೋಪದಲ್ಲಿ ಯುವಕನ ತಾಯಿ ಉಮಾವತಿ ಶೆಟ್ಟಿ ಹಾಗೂ ನೆರೆಮನೆಯ ಯೂಸುಫ್‌ನನ್ನು ಬಂಧಿಸಲಾಗಿದೆ. ಮೇ 10ರಂದು ಮುಂಜಾನೆ ಘಟನೆ ಸಂಭವಿಸಿದ್ದು, ಬಂಧಿತರಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಉಸಿರುಗಟ್ಟಿ ಸಾವು?
ಮದ್ಯವ್ಯಸನಿಯಾಗಿದ್ದ ಚೇತನ್ ಮೇ 9ರಂದು ತಡರಾತ್ರಿ ನೆರೆಮನೆಯ ಯೂಸುಫ್ ಅವರ ಮನೆಗೆ ಹೋಗಿದ್ದು, ಮೇ 10 ರಂದು ಮುಂಜಾನೆ 5 ಗಂಟೆಗೆ ಯೂಸುಫ್ ಅವರು ಚೇತನ್‌ನ ತಾಯಿಗೆ ಕರೆ ಮಾಡಿ, ಚೇತನ್ ಗಲಾಟೆ ಮಾಡುತ್ತಿದ್ದ ಬಗ್ಗೆ ತಿಳಿಸಿದ್ದರು. ಉಮಾವತಿ ಅವರು ಯೂಸುಫ್‌ನ ಸಹಾಯ ಪಡೆದು ಸಂಕೋಲೆ ಬಿಗಿದು ಚೇತನ್‌ನನ್ನು ಎಳೆದುಕೊಂಡು ಬಂದಿದ್ದು, ಈ ವೇಳೆ ಉಸಿರುಗಟ್ಟಿ ಆತ ಮೃತಪಟ್ಟಿದ್ದಾನೆ ಎಂದು ಅನುಮಾನಿಸಲಾಗಿತ್ತು.
ಸಂಕೋಲೆ ಬಿಗಿದು ಕೊಂದರಾ?
ಪ್ರಕರಣ ಬಗ್ಗೆ ಪೊಲೀಸರ ವಿಚಾರಣೆ ವೇಳೆ ಉಮಾವತಿ ಶೆಟ್ಟಿ ನೀಡಿದ ಹೇಳಿಕೆಯನ್ನು ಗಮನಿಸಿದರೆ ಆತನ ಕಿರುಕುಳ ಸಹಿಸಲಾಗದೆ ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆ ಎಂಬ ಅನುಮಾನ ಮೂಡುತ್ತಿದೆ. ಯೂಸುಫ್ ಅವರ ಮನೆಯಿಂದ ಚೇತನ್‌ನನ್ನು ಸಂಕೋಲೆ ಬಿಗಿದು ಎಳೆದುಕೊಂಡು ಮನೆಗೆ ತಂದ ಬಳಿಕ ಕೊಲೆ ನಡೆಸಲಾಗಿದೆ ಎನ್ನಲಾಗಿದೆ. “ನೀನು ನನಗೆ ಎಷ್ಟು ತೊಂದರೆ ನೀಡುತ್ತೀಯಾ, ನಿನ್ನಿಂದ ಅಕ್ಕಪಕ್ಕದ ಮನೆಯವರಿಗೂ ತೊಂದರೆ ಆಗುತ್ತಿದೆ. ನೀನು ಬದುಕಿದರೆ ನನಗೆ ಕಷ್ಟ, ನೀನು ಸಾಯಿ’ ಎಂದು ಉಮಾವತಿ ಸರಪಳಿಯನ್ನು ಯೂಸುಫ್ ಕೈಗಿತ್ತು ಚೇತನ್ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ ವೇಳೆ ಯೂಸುಫ್ ಸರಪಳಿಯನ್ನು ಆತನ ಕುತ್ತಿಗೆಗೆ ಹಾಕಿ ಜೋರಾಗಿ ಎಳೆದ ಕಾರಣ ಆತ ಮೃತಪಟ್ಟಿದ್ದಾನೆ. ಕೊಲೆ ಮಾಡಿರುವುದು ಬೇರೆಯವರಿಗೆ ತಿಳಿಯು ವುದು ಬೇಡ ಎಂದು ನೆರೆಮನೆಯವರನ್ನು ಕರೆದು ಅವರಲ್ಲಿ ಸುಳ್ಳು ಹೇಳಿ ಆ್ಯಂಬುಲೆನ್ಸ್ ತರಿಸಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆತ್ಮಹತ್ಯೆ ಎಂದು ಬಿಂಬಿಸಲು ಸುಳ್ಳು ದೂರು ನೀಡಿದ್ದೆ ಎಂದು ಉಮಾವತಿ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾರೆ ಎನ್ನಲಾಗಿದೆ.
ಆತ್ಮಹತ್ಯೆ ಸುಳ್ಳು ಎಂದ ಗಾಯ!
ಚೇತನ್ ಸರಪಳಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಆರಂಭದಲ್ಲಿ ಮೃತನ ತಾಯಿ ಉಮಾವತಿ ಪೊಲೀಸರಿಗೆ ದೂರು ನೀಡಿದ್ದರು. ಚೇತನ್ 5 ವರ್ಷಗಳಿಂದ ವಿಪರೀತ ಮದ್ಯ ಸೇವಿಸುತ್ತಿದ್ದ. ಸೆಂಟ್ರಿಂಗ್ ಕೆಲಸಕ್ಕೆ ಹೋಗುತ್ತಿದ್ದ ಆತ ಮೇ 9ರಂದು ವಿಪರೀತ ಮದ್ಯ ಸೇವಿಸಿ ಮನೆಗೆ ಬಂದಿದ್ದ. ಗಲಾಟೆ ಮಾಡುತ್ತಿದ್ದ ಆತನಿಗೆ ಬುದ್ದಿ ಹೇಳಿ ನಾವು ಮಲಗಿದ್ದೆವು. ಮೇ 10ರಂದು ಬೆಳಗ್ಗೆ 5 ಗಂಟೆಗೆ ಮನೆಯ ಕೊಟ್ಟಿಗೆ ಬಳಿ ಶಬ್ದ ಬಂದುದರಿಂದ ಹೋಗಿ ನೋಡಿದಾಗ ನಾಯಿಗೆ ಕಟ್ಟುವ ಸರಪಳಿಯನ್ನು ಚೇತನ್ ಕುತ್ತಿಗೆಗೆ ಸುತ್ತಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದು ಕಂಡು ಬಂದಿದೆ. ದೇಹದಲ್ಲಿ ಯಾವುದೇ ಚಲನವಲನಗಳು ಇಲ್ಲದೇ ಇದ್ದ ಕಾರಣ ನೆರೆಮನೆಯವರ ಸಹಕಾರದಿಂದ ಆಸ್ಪತ್ರೆಗೆ ಸಾಗಿಸಲಾಗಿತ್ತು. ಜೀವನದಲ್ಲಿ ಜುಗುಪ್ಸೆ ಹೊಂದಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಆತನ ಸಾವಿನಲ್ಲಿ ಯಾವುದೇ ಸಂಶಯವಿರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು.
ಉಮಾವತಿ ನೀಡಿದ್ದ ಮಾಹಿತಿ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಬಳಿಕದ ಪ್ರಕ್ರಿಯೆಗಳನ್ನು ನಡೆಸುತ್ತಿದ್ದ ಪೊಲೀಸರಿಗೆ ಚೇತನ್ ಮೃತದೇಹದ ಕುತ್ತಿಗೆ, ಬೆನ್ನು,ಸೊಂಟ, ಎಡಕಾಲು ಮತ್ತು ತೋಳು, ಬಲ ಭುಜದ ಮೇಲೆ ಗಾಯಗಳು ಇರುವುದು ಕಂಡು ಬಂತು. ಅನುಮಾನ ಬಂದು ತಾಯಿಯನ್ನು ತೀವ್ರ ರೀತಿಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shimoga; ತೇಜೋವಧೆ ಮಾಡಲು ನನ್ನ ಹೆಸರಲ್ಲಿ ಕಳಪೆ ಸ್ವೀಟ್ ಹಂಚಿಕೆ; ಡಾ.ಸರ್ಜಿ
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Shocking: ಹೆರಿಗೆ ವೇಳೆ ಹೃದಯಾಘಾತ: ಮಹಿಳೆ ಮೃತ್ಯು, ಮಗುವನ್ನು ಉಳಿಸುವ ಯತ್ನವೂ ವಿಫಲವಾಯಿತು
Rohit Sharma; ಮುಗಿಯಿತಾ ರೋಹಿತ್ ಕ್ರಿಕೆಟ್ ವೃತ್ತಿಜೀವನ? ಗಂಭೀರ ಕೋಪಕ್ಕೆ ಕಾರಣವೇನು?
Channapatna; ನ್ಯೂಇಯರ್ ಪಾರ್ಟಿ ಮಾಡಲು ಹೋದವನ ಕೊಲೆ ಮಾಡಿದ ಬಾವಿಗೆ ಎಸೆದರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.