Report; ಹೆಚ್ಚು ಸಂಸ್ಕರಿಸಿದ ಆಹಾರ ತಿಂದರೆ ಬೇಗ ಸಾವು!
Team Udayavani, May 12, 2024, 6:40 AM IST
ನ್ಯೂಯಾರ್ಕ್: ಅತಿಯಾಗಿ ಸಂಸ್ಕರಿಸಿದ ಆಹಾರ (ಅಲ್ಟ್ರಾ ಪ್ರಾಸೆಸ್ಡ್ ಫುಡ್)ಗಳ ಸೇವನೆಯಿಂದ ಸಾವು ಬೇಗ ಸಂಭವಿಸಬಹುದು ಎಂದು ಹಾರ್ವರ್ಡ್‌ನ ಅಧ್ಯಯನ ಸಂಸ್ಥೆಯ ಅಧ್ಯಯನ ವರದಿ ತಿಳಿಸಿದೆ. ಇದಕ್ಕಾಗಿ 30 ವರ್ಷಗಳ ಕಾಲ ಅಧ್ಯಯನ ನಡೆಸಿದ್ದು, 1.14 ಲಕ್ಷ ಜನರನ್ನು ಅಧ್ಯಯನದಲ್ಲಿ ಭಾಗಿಯಾಗಿಸಲಾಗಿದೆ ಎಂದು ವರದಿ ತಿಳಿಸಿದೆ.
ಅತಿಯಾಗಿ ಸಂಸ್ಕರಿಸಿದ ಆಹಾರದಲ್ಲಿ ಕೊಬ್ಬಿನ ಪ್ರಮಾಣ ಅಧಿಕವಾಗಿದ್ದು, ಇವುಗಳಲ್ಲಿ ಪೋಷಕಾಂಶಗಳು ಮತ್ತು ನಾರಿನ ಅಂಶ ಕಡಿಮೆ ಇರುತ್ತದೆ. ಹೀಗಾಗಿ ಇವುಗಳ ಅತಿಯಾದ ಸೇವನೆಯಿಂದ ಸಾವು ಬೇಗ ಸಂಭವಿಸಬಹುದು ಎಂದು ವರದಿ ಹೇಳಿದೆ. ಈಟ್ ರೆಡಿ ಮೀಟ್, ಕೋಳಿ ಮತ್ತು ಸಾಗರೀಕ ಆಹಾರಗಳನ್ನು ಅತಿಯಾಗಿ ಸಂಸ್ಕರಿಸಲಾಗುತ್ತದೆ. ಇದಲ್ಲದೇ ಶುಗರೀ ಪಾನೀಯಗಳು, ಡೈರಿ ಮೂಲದ ಆಹಾರಗಳು ಇದರ ಅಡಿಯಲ್ಲೇ ಬರುತ್ತವೆ ಎಂದು ವರದಿ ತಿಳಿಸಿದೆ.
ಅತಿಯಾಗಿ ಸಂಸ್ಕರಿಸಿದ ಮಾಂಸ ತಿನ್ನುವ ಜನ ಬೇಗ ಸಾಯುವ ಪ್ರಮಾಣ ಶೇ.13ರಷ್ಟಿದ್ದರೆ, ಕೃತಕ ಸಕ್ಕರೆ ಬಳಸಿ ತಯಾರಿಸಲಾದ ಸಿಹಿ ತಿನಿಸುಗಳನ್ನು ತಿನ್ನುವವರು ಸಾಯುವ ಪ್ರಮಾಣ ಶೇ.9ರಷ್ಟಿದೆ ಎಂದು ವರದಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.