SSLC Result ಬಡತನದಲ್ಲೇ ಅರಳಿದ ಬಹುಮುಖಿ ಪ್ರತಿಭೆ; ಕಷ್ಟ ಕಾರ್ಪಣ್ಯಗಳ ನಡುವೆ ಧನ್ಯಾ ಸಾಧನೆ
Team Udayavani, May 12, 2024, 7:35 AM IST
ಕುಂದಾಪುರ: ಯಾವುದೇ ರೀತಿಯ ಸೌಲಭ್ಯಗಳು ಇಲ್ಲ. ಬದುಕಿನಲ್ಲಿ ಕಷ್ಟ, ನೋವು, ಬಡತನವಷ್ಟೇ ಇದ್ದರೂ ಕಲಿಕೆಗೆ ಅವು ಅಡ್ಡಿಯಾಗವು ಎನ್ನುವುದಕ್ಕೆ ಹಕ್ಲಾಡಿಯ ಕೆಎಸ್‌ಎಸ್ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಧನ್ಯಾ ಉದಾಹರಣೆ.
ಬಗ್ವಾಡಿಯ ರಾಘವೇಂದ್ರ ಹಾಗೂ ಗಿರಿಜಾ ದಂಪತಿಯ ಪುತ್ರಿಯಾಗಿರುವ ಈಕೆ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ನಿತ್ಯದ ಕಷ್ಟ- ಕಾರ್ಪಣ್ಯಗಳನ್ನು ಮೆಟ್ಟಿ ನಿಂತು, 594 ಅಂಕಗಳನ್ನು ಗಳಿಸಿ ಬೀಗಿದ್ದಾರೆ. ಜತೆಗೆ ಪಠ್ಯವಷ್ಟೇ ಅಲ್ಲ; ಪಠ್ಯೇತರ ಚಟುವಟಿಕೆಗಳಲ್ಲೂ ಧನ್ಯಾ ಸದಾ ಮುಂದು.
ಹಕ್ಲಾಡಿಯ ಈ ಪ್ರೌಢಶಾಲೆಗೆ ನಿತ್ಯವೂ ಧನ್ಯಾ ನಾಲ್ಕು ಕಿ.ಮೀ ನಡೆದುಕೊಂಡು ಬರಬೇಕು. ಅದಕ್ಕಾಗಿ ಬೆಳಗ್ಗೆ 7 ಗಂಟೆಗೆ ಮನೆಯಿಂದ ಹೊರಡಬೇಕಿತ್ತು. ಸಂಜೆಯೂ ಮನೆ ಸೇರುವುದೂ ತಡವಾಗಿಯೇ. ಅದಕ್ಕಾಗಿ ನಿತ್ಯವೂ ಬೆಳಗ್ಗೆ 4 ಗಂಟೆಗೆ ಎದ್ದು, 6.30 ರವರೆಗೆ ಓದಿ, ಆಮೇಲೆ ಶಾಲೆಗೆ ಹೊರಡುತ್ತಿದ್ದರು. ರಾತ್ರಿಯೂ 10.30 ವರೆಗೆ ಓದಿ ನಂತರ ನಿದ್ದೆ. ಈ ನಿರಂತರ ಓದು ಪರೀಕ್ಷೆ ಸಂದರ್ಭದಲ್ಲಿ ನೆರವಾಯಿತು ಎನ್ನುತ್ತಾರೆ ಧನ್ಯ.
ಬಹುಮುಖ ಪ್ರತಿಭೆ
ಧನ್ಯ ಕಲಿಕೆಯಲ್ಲಿ ಮಾತ್ರವಲ್ಲ, ನಾಟಕ, ಯಕ್ಷಗಾನದಲ್ಲೂ ತನ್ನನ್ನು ತಾನು ತೊಡಗಿಸಿಕೊಂಡಿದ್ದು, ಬಹುಮುಖ ಪ್ರತಿಭೆ. ಕಳೆದ ವರ್ಷ ಮಕ್ಕಳ ನಾಟಕದಲ್ಲಿ ರಾಜ್ಯ ಪ್ರಶಸ್ತಿ ಪಡೆದ ಮಾಯಮುಖ ನಾಟಕದಲ್ಲಿ ಗಾಯಕಿಯಾಗಿ ಮಿಂಚಿದ್ದರು. ಪುಸ್ತಕ ಓದುವಿಕೆ, ಡೈರಿ ಬರೆಯುವುದು ಅವರ ಹವ್ಯಾಸ.
ಓದಿ, ಅಧಿಕಾರಿಯಾಗುವಾಸೆ
ಉತ್ತಮ ಅಂಕ ಪಡೆದಿರುವ ಧನ್ಯಾಗೆ ಇನ್ನಷ್ಟು ಉತ್ತಮವಾಗಿ ಓದಿ, ದಕ್ಷ ಅಧಿಕಾರಿಯಾಗಬೇಕು ಅನ್ನುವ ಆಸೆಯಿದೆ. ಆದರೆ ತಂದೆ ಹಾಗೂ ತಾಯಿ ಇಬ್ಬರೂ ಕೂಲಿ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಿಸುತ್ತಿದ್ದು, ಸಹೃದಯಿ ದಾನಿಗಳು ಯಾರಾದರೂ ಸಿಕ್ಕರೆ ಈಕೆಯ ಕನಸಿಗೆ ಇನ್ನಷ್ಟು ರೆಕ್ಕೆಗಳು ಬಂದಂತಾಗಲಿದೆ.
ಬ್ಯಾಂಕ್ ಖಾತೆ ಸಂಖ್ಯೆ : 02682200051069
ಖಾತೆದಾರರ ಹೆಸರು : ಧನ್ಯ ಬ್ಯಾಂಕ್ ಹೆಸರು : ಕೆನರಾ ಬ್ಯಾಂಕ್
ಐಎಫ್ಎಸ್‌ಸಿ ಕೋಡ್: ಇNRಆ0010268
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.