World Hand Hygiene Day: ಸ್ವಚ್ಛ ಕೈಗಳ ಶಕ್ತಿ: ಕೈಗಳ ನೈರ್ಮಲ್ಯಕ್ಕೆ ಮಾರ್ಗದರ್ಶಿ


Team Udayavani, May 12, 2024, 2:58 PM IST

7-hand-hygien-day

ಮೇ 5: ವಿಶ್ವ ಹಸ್ತ ನೈರ್ಮಲ್ಯ ದಿನ

ಅಪಾಯಕಾರಿ ಸೂಕ್ಷ್ಮಜೀವಿಗಳು ಮತ್ತು ಬ್ಯಾಕ್ಟೀರಿಯಾಗಳ ಪ್ರಸಾರವನ್ನು ತಡೆಯುವಲ್ಲಿ ಕೈಗಳನ್ನು ಸಮರ್ಪಕವಾಗಿ ಮತ್ತು ನಿಯಮಿತವಾಗಿ ತೊಳೆದುಕೊಳ್ಳುವ ಕ್ರಿಯೆಯು ಬಹಳ ಪ್ರಾಮುಖ್ಯವಾದುದಾಗಿದೆ.

ಕೈಗಳ ನೈರ್ಮಲ್ಯ ಯಾಕೆ ಮುಖ್ಯ?

ಪ್ರತಿದಿನ, ದಿನದುದ್ದಕ್ಕೂ ನಾವು ಅಸಂಖ್ಯಾತ ವಸ್ತುಗಳನ್ನು ಮತ್ತು ಮೇಲ್ಮೈಗಳನ್ನು ಸ್ಪರ್ಶಿಸುತ್ತೇವೆ. ಈ ಮೂಲಕ ಬ್ಯಾಕ್ಟೀರಿಯಾಗಳು, ವೈರಸ್‌ಗಳು ಮತ್ತು ಇತರ ರೋಗಕಾರಕ ಸೂಕ್ಷ್ಮಜೀವಿಗಳು ನಮಗೆ ಅರಿವಿಲ್ಲದಂತೆಯೇ ನಮ್ಮ ಕೈಗಳನ್ನು ಸೇರುತ್ತವೆ. ಬಾಗಿಲುಗಳ ಹಿಡಿಕೆಗಳಿಂದ ತೊಡಗಿ ಸ್ಮಾರ್ಟ್‌ಫೋನ್‌ ಗಳ ವರೆಗೆ, ಮೆಟ್ಟಿಲುಗಳ ಹಿಡಿಕೆಗಳಿಂದ ಹಿಡಿದು ಕಂಪ್ಯೂಟರ್‌ ಕೀಬೋರ್ಡ್‌ವರೆಗೆ ನಮ್ಮ ಕೈಗಳು ಪದೇಪದೆ ಸಂಭಾವ್ಯ ಅಪಾಯಕಾರಿ ಸೂಕ್ಷ್ಮಜೀವಿಗಳ ಸಂಪರ್ಕಕ್ಕೆ ಬರುತ್ತಿರುತ್ತವೆ.

ನಾವು ಕೈಗಳನ್ನು ತೊಳೆಯದೆಯೇ ನಮ್ಮ ಮುಖವನ್ನು ಸ್ಪರ್ಶಿಸಿದಾಗ, ಆಹಾರ ಸೇವಿಸಿದಾಗ ಅಥವಾ ಆಹಾರವನ್ನು ತಯಾರಿಸಿದಾಗ ಈ ಸೂಕ್ಷ್ಮಜೀವಿಗಳು ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಇದರಿಂದ ಶೀತ, ಶೀತಜ್ವರ ಮತ್ತು ಜೀರ್ಣಾಂಗವ್ಯೂಹಕ್ಕೆ ಸಂಬಂಧಿಸಿದ ಸೋಂಕು (ಬೇಧಿ ಮತ್ತು ವಾಂತಿ) ಗಳಂತಹ ಅನಾರೋಗ್ಯಗಳು ಮತ್ತು ಸೋಂಕುಗಳು ನಮಗೆ ಉಂಟಾಗುವ ಸಾಧ್ಯತೆಗಳು ಇರುತ್ತವೆ. ಇದಲ್ಲದೆ ಈ ಸೋಂಕುಕಾರಕ ಸೂಕ್ಷ್ಮಜೀವಿಗಳನ್ನು ನಾವು ಇತರರಿಗೂ ಪ್ರಸಾರ ಮಾಡುವ ಸಾಧ್ಯತೆ ಇರುತ್ತದೆ. ಇದರಿಂದ ವೃದ್ಧರು, ಮಕ್ಕಳು ಮತ್ತು ರೋಗ ನಿರೋಧಕ ಶಕ್ತಿ ದುರ್ಬಲಗೊಂಡಿರುವ ವ್ಯಕ್ತಿಗಳಂತಹ ಜನರನ್ನು ಅಪಾಯಕ್ಕೆ ಸಿಲುಕಿಸು ಸಾಧ್ಯತೆಗಳು ಇರುತ್ತವೆ.

ಸರಿಯಾದ ಕೈತೊಳೆಯುವ ವಿಧಾನ

ನಿಮ್ಮ ಕೈಗಳನ್ನು ಸರಿಯಾಗಿ ಮತ್ತು ಸ್ವಚ್ಛವಾಗಿ ತೊಳೆದುಕೊಳ್ಳುವುದಕ್ಕಾಗಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.­

  • ಶುದ್ಧವಾದ ಹರಿಯುವ ನೀರಿನಿಂದ ಕೈಗಳನ್ನು ತೋಯಿಸಿಕೊಳ್ಳಿ.
  • ­ಸಾಬೂನು ಹಚ್ಚಿ. ನಿಮ್ಮ ಕೈಗಳ ಮೇಲ್ಭಾಗ ಮತ್ತು ಕೆಳಭಾಗ, ಬೆರಳ ಸಂಧಿ- ಹೀಗೆ ಎಲ್ಲ ಕಡೆಯೂ ಸಾಬೂನು ಹರಡುವಂತೆ ಹಚ್ಚಿಕೊಳ್ಳಿ. ­
  • ಎರಡೂ ಕೈಗಳನ್ನು ಸರಿಯಾಗಿ ಉಜ್ಜಿರಿ. ಕೈಗಳ ಹಿಂಭಾಗ, ಮುಂಭಾಗ, ಬೆರಳುಗಳ ಸಂಧಿ, ಉಗುರುಗಳ ಎಡೆ – ಎಲ್ಲ ಕಡೆಯೂ ಸಾಬೂನು ನೊರೆ ನೊರೆಯಾಗುವಂತೆ ರಭಸವಾಗಿ, ಸರಿಯಾಗಿ ಉಜ್ಜಿಕೊಳ್ಳಿ. ಈ ಬಿರುಸಾದ ಉಜ್ಜುವಿಕೆಯಿಂದ ಕೊಳೆ, ಜಿಡ್ಡು ಮತ್ತು ಸೂಕ್ಷ್ಮಜೀವಿಗಳು ನಿಮ್ಮ ಕೈಗಳ ಚರ್ಮದಿಂದ ಕಿತ್ತುಹೋಗುತ್ತವೆ. ­
  • ಕನಿಷ್ಠ 20 ಸೆಕೆಂಡುಗಳ ಕಾಲ ಹೀಗೆ ಉಜ್ಜಿಕೊಳ್ಳಿ. ­
  • ಶುದ್ದ, ಹರಿಯುವ ನೀರಿನಲ್ಲಿ ಕೈಗಳನ್ನು ಶುಚಿಯಾಗಿ ತೊಳೆದುಕೊಳ್ಳಿ.
  • ಶುಭ್ರವಾದ ಬಟ್ಟೆ ಅಥವಾ ಏರ್‌ ಡ್ರಯರ್‌ನಿಂದ ಕೈಗಳನ್ನು ಒಣಗಿಸಿಕೊಳ್ಳಿ. ಒಣಕೈಗಳಿಗಿಂದ ಸುಲಭವಾಗಿ ಒದ್ದೆಯಾದ ಕೈಗಳ ಮೂಲಕ ಸೂಕ್ಷ್ಮಜೀವಿಗಳು ಪ್ರಸಾರವಾಗುತ್ತವೆ.

ಕೈಗಳನ್ನು ಯಾವಾಗ ತೊಳೆದುಕೊಳ್ಳಬೇಕು? ­

  • ಆಹಾರ ತಯಾರಿಸುವುದಕ್ಕೆ ಮುನ್ನ, ತಯಾರಿಸುವಾಗ ಮತ್ತು ತಯಾರಿಸಿದ ಬಳಿಕ ­
  • ಆಹಾರ ಸೇವಿಸುವುದಕ್ಕೆ ಮುನ್ನ ­
  • ಶೌಚಾಲಯವನ್ನು ಉಪಯೋಗಿಸಿದ ಬಳಿಕ ­
  • ಕೆಮ್ಮಿದ, ಸೀನಿದ ಅಥವಾ ಮೂಗಿನಿಂದ ಸಿಂಬಳ ತೆಗೆದ ಬಳಿಕ ­
  • ಪ್ರಾಣಿಪಕ್ಷಿಗಳನ್ನು ಸ್ಪರ್ಶಿಸಿದ ಬಳಿಕ ಮತ್ತು ಪ್ರಾಣಿಗಳ ತ್ಯಾಜ್ಯವನ್ನು ನಿರ್ವಹಿಸಿದ ಬಳಿಕ ­
  • ತ್ಯಾಜ್ಯವನ್ನು ಮುಟ್ಟಿದ ಬಳಿಕ ­
  • ಅನಾರೋಗ್ಯ ಹೊಂದಿರುವವರನ್ನು ಸ್ಪರ್ಶಿಸಿದ ಬಳಿಕ

ಸಮುದಾಯದಲ್ಲಿ ಕೈಗಳ ನೈರ್ಮಲ್ಯಕ್ಕೆ ಪ್ರೋತ್ಸಾಹ

ಕೈಗಳ ನೈರ್ಮಲ್ಯ ವರ್ಧನೆ ವ್ಯಕ್ತಿಗತ ಹೊಣೆಗಾರಿಕೆ ಮಾತ್ರವಷ್ಟೇ ಅಲ್ಲ; ಇದು ಪ್ರತಿಯೊಬ್ಬರಿಗೂ ಆರೋಗ್ಯ ಲಾಭ ತಂದುಕೊಡುವ ಸಾಮೂಹಿಕ, ಸಾಮುದಾಯಿಕ ಹೊಣೆಗಾರಿಕೆಯಾಗಿದೆ. ಶಾಲೆಗಳು, ಉದ್ಯೋಗ ಸ್ಥಳಗಳು, ಆರೋಗ್ಯ ಸೇವಾ ಕೇಂದ್ರಗಳು ಮತ್ತು ಸಾರ್ವಜನಿಕ ಸ್ಥಳಗಳು ಕೈಗಳ ನೈರ್ಮಲ್ಯ ಕಾಪಾಡಿಕೊಳ್ಳುವುದಕ್ಕೆ ಈ ಕೆಳಗಿನಂತೆ ಪ್ರಮುಖ ಪಾತ್ರ ವಹಿಸಬಹುದಾಗಿದೆ: ­

  • ಸಾಬೂನು ಮತ್ತು ಶುದ್ಧನೀರಿನ ಸಹಿತ ಕೈ ತೊಳೆಯುವ ಸೌಲಭ್ಯವನ್ನು ಸುಲಭವಾಗಿ ಲಭ್ಯವಾಗುವಂತೆ ಒದಗಿಸುವುದು. ­
  • ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವ ವಿಧಾನಗಳನ್ನು ಸೂಚಿಸುವ ಭಿತ್ತಿಪತ್ರಗಳು ಮತ್ತು ಸಂಕೇತಗಳನ್ನು ಪ್ರದರ್ಶಿಸುವುದು. ­
  • ಸಿಬಂದಿ, ವಿದ್ಯಾರ್ಥಿಗಳು ಮತ್ತು ಸಂದರ್ಶಕರಿಗೆ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವ ವಿಧಾನ ಮತ್ತು ಅದರ ಪ್ರಾಮುಖ್ಯಗಳ ಕುರಿತು ತಿಳಿವಳಿಕೆ ಒದಗಿಸುವುದು.

ನಾವೆಲ್ಲರೂ ಜತೆಗೂಡಿ ಸಾಧಿಸಬಹುದು: ಅಪಾಯಕಾರಿ ಸೋಂಕುರೋಗಗಳ ಪ್ರಸಾರವನ್ನು ಗಮನಾರ್ಹವಾಗಿ ತಡೆಗಟ್ಟುವಲ್ಲಿ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವುದು ಒಂದು ಸರಳ ಮತ್ತು ಸುಲಭವಾದ ಆದರೆ ಅಷ್ಟೇ ಪರಿಣಾಮಕಾರಿ ಮತ್ತು ಮುಖ್ಯವಾದ ಕ್ರಮವಾಗಿದೆ. ಶುದ್ಧ ನೀರು ಮತ್ತು ಸಾಬೂನು ಉಪಯೋಗಿಸಿ ಕೈಗಳನ್ನು ಸರಿಯಾಗಿ ತೊಳೆದುಕೊಳ್ಳುವ ಮೂಲಕ ನಾವು ನಮ್ಮನ್ನು, ನಮ್ಮ ಪ್ರೀತಿಪಾತ್ರರನ್ನು ಮತ್ತು ನಾವಿರುವ ಸಮುದಾಯಗಳನ್ನು ಅನೇಕ ಅಪಾಯಕಾರಿ ಕಾಯಿಲೆಗಳಿಂದ ಸಂರಕ್ಷಿಸಿಕೊಳ್ಳಬಹುದಾಗಿದೆ ಹಾಗೂ ಆರೋಗ್ಯಯುತ, ಸುರಕ್ಷಿತ ಜಗತ್ತಿನ ನಿರ್ಮಾಣಕ್ಕೆ ಕೊಡುಗೆ ನೀಡಬಹುದಾಗಿದೆ.

ಡಾ| ವಿಜೇತಾ ಶೆಣೈ ಬೆಳ್ಳೆ,

ಅಸೋಸಿಯೇಟ್‌ ಪ್ರೊಫೆಸರ್‌,

ಬಯೊಕೆಮೆಸ್ಟ್ರಿ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಇನ್‌ಫೆಕ್ಷಿಯಸ್‌ ಡಿಸೀಸಸ್‌ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Tragedy: ಯುವಕನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ…  ಆರನೇ ಮಹಡಿಯಿಂದ ಬಿದ್ದು ಮೃತಪಟ್ಟ

Tragedy: ಯುವಕನಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ… ಆರನೇ ಮಹಡಿಯಿಂದ ಬಿದ್ದು ಮೃತ್ಯು

Bengaluru Crime: ಹವಾ ತೋರಿಸಲು ಹೋಗಿ ಹೆಣವಾದ!

Bengaluru Crime: ಹವಾ ತೋರಿಸಲು ಹೋಗಿ ಹೆಣವಾದ!

Arrested: ನಕಲಿ ಎ.ಕೆ.47 ಗನ್‌ ಬಳಸಿದ್ದ ರೀಲ್‌ ಶೋಕಿಲಾಲ ಬಂಧನ

Arrested: ನಕಲಿ ಎ.ಕೆ.47 ಗನ್‌ ಬಳಸಿದ್ದ ರೀಲ್‌ ಶೋಕಿಲಾಲ ಬಂಧನ

ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್

ರಾಜ್ಯದ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ ಎಂದು ಸಂಬಳ, ಭತ್ಯೆ ತ್ಯಜಿಸಿದ DCM ಪವನ್ ಕಲ್ಯಾಣ್

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು

Shivamogga: ಬಟ್ಟೆ ಮಾರುಕಟ್ಟೆಯಲ್ಲಿ ಬೆಂಕಿ ಅವಘಡ; 8ಕ್ಕೂ ಅಧಿಕ ಅಂಗಡಿಗಳು ಸುಟ್ಟು ಕರಕಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-health

PCOD (ಪಾಲಿಸಿಸ್ಟಿಕ್‌ ಅಂಡಾಶಯದ ಕಾಯಿಲೆ) ಸಮಸ್ಯೆ ಮತ್ತು ನಿರ್ವಹಣೆ

6-health

AUB: ಗರ್ಭಕೋಶದ ಅಸಹಜ ರಕ್ತಸ್ರಾವ; ಅಬ್ನಾರ್ಮಲ್‌ ಯುಟರೈನ್‌ ಬ್ಲೀಡಿಂಗ್‌ (ಎಯುಬಿ)

2-Health

Menstrual Cycle: ಹೆರಿಗೆಯ ಬಳಿಕ ಮಹಿಳೆಯ ಋತುಚಕ್ರ ಪೂರ್ವಸ್ಥಿತಿ ಸ್ಥಾಪನೆ

7-health

Health: ಅಸ್ತಮಾ ಮತ್ತು ಮೂಢನಂಬಿಕೆಗಳು

4-yoga

Yoga Practice: ಆರೋಗ್ಯಕರ ಜೀವನಕ್ಕಾಗಿ ಆಹಾರ ಪದ್ಧತಿ ಮತ್ತು ಯೋಗಾಭ್ಯಾಸ

MUST WATCH

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

udayavani youtube

Congress ಪಾರ್ಟಿಯ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ ಬಸವರಾಜ ಬೊಮ್ಮಾಯಿ

udayavani youtube

ರುಚಿ ರುಚಿ ಮನೆ ತಿಂಡಿ ಬೇಕು ಅನ್ನೋರು ವಿವಿ ಪುರಂಗೆ ಹೋಗಲೇಬೇಕು

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

ಹೊಸ ಸೇರ್ಪಡೆ

Kidnap Case: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್‌; ಯುವಕನ ವಿರುದ್ಧ ಎಫ್ಐಆರ್‌

Kidnap Case: ಕಾಲೇಜು ವಿದ್ಯಾರ್ಥಿನಿ ಕಿಡ್ನಾಪ್‌; ಯುವಕನ ವಿರುದ್ಧ ಎಫ್ಐಆರ್‌

BBMP: ಪಾಲಿಕೆಯಲ್ಲಿ ಬಹುಕೋಟಿ ಅವ್ಯವಹಾರ; ಅಧಿಕಾರಿಗಳ ತನಿಖೆಗೆ ಆಯುಕ್ತರ ಸಮ್ಮತಿ

BBMP: ಪಾಲಿಕೆಯಲ್ಲಿ ಬಹುಕೋಟಿ ಅವ್ಯವಹಾರ; ಅಧಿಕಾರಿಗಳ ತನಿಖೆಗೆ ಆಯುಕ್ತರ ಸಮ್ಮತಿ

Missing Case: ನಾಪತ್ತೆಯಾಗಿದ್ದ ಕಾನ್‌ಸ್ಟೇಬಲ್ ಮೃತದೇಹ ಶಂಕಾಸ್ಪದವಾಗಿ ಪತ್ತೆ

Missing Case: ನಾಪತ್ತೆಯಾಗಿದ್ದ ಕಾನ್‌ಸ್ಟೇಬಲ್ ಮೃತದೇಹ ಶಂಕಾಸ್ಪದವಾಗಿ ಪತ್ತೆ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Baramasagara: ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾದ ಯುವತಿ… ಕಾರಣ ನಿಗೂಢ

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Ullal: ಟಿಪ್ಪರ್‌ ಅಪಘಾತ; ಗಾಯಾಳು ಸ್ಕೂಟರ್‌ ಸವಾರ ಚಿಕಿತ್ಸೆ ಫಲಕಾರಿಯಾಗದೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.