Baratang‌ Island: ಬಾರಾತಂಗ್‌ ಎಂಬ ಬೆರಗು

ಇದು ಅಂಡಮಾನ್‌ ದ್ವೀಪ ಸಮೂಹದ ಅಚ್ಚರಿ

Team Udayavani, May 12, 2024, 5:04 PM IST

17

ಬಾರಾತಂಗ್‌ ಎಂಬ ಬೆರಗು

ಅಂಡಮಾನ್‌ ದ್ವೀಪ ಸಮೂಹ ಪ್ರವಾಸಿಗರ ನೆಚ್ಚಿನ ತಾಣ. ಬಿಳಿ ಮರಳ ರಾಶಿಯನ್ನೇ ಹೊದ್ದ ತಿಳಿ ನೀಲ ನೀರ ಕಡಲ ತೀರಗಳು, ವರ್ಣರಂಜಿತ ಹವಳದ ಬಂಡೆಗಳು, ಹಚ್ಚ ಹಸಿರಿನ ಸಮೃದ್ಧ ಉಷ್ಣವಲಯದ ಮಳೆ ಕಾಡುಗಳು, ಮ್ಯಾಂಗ್ರೋವ್‌ ತೊರೆಗಳು, ಜಾರವಾ, ಸೆಂಟಿನಲ್ಸ್ ನಂತಹ ಬುಡಕಟ್ಟು ಜನಗಳು, ಬಣ್ಣ ಬಣ್ಣದ ಮೀನುಗಳನ್ನೊಳಗೊಂಡ ವೈವಿಧ್ಯಮಯ ಸಮುದ್ರ ಜೀವಿಗಳು, ಇತಿಹಾಸದ ಕರಾಳ ಅಧ್ಯಾಯವನ್ನು ನೆನಪಿಸುವ ಸೆಲ್ಯೂಲರ್‌ ಜೈಲು, ವಸ್ತು ಸಂಗ್ರಹಾಲಯ, ಸ್ಕೂಬಾ ಡೈವಿಂಗ್‌ನಂತಹ ಸಾಹಸಮಯ ಕ್ರೀಡೆಗಳು… ಹೀಗೆ ನೈಸರ್ಗಿಕ ಸೌಂದರ್ಯ, ಸಾಂಸ್ಕೃತಿಕ ವೈವಿಧ್ಯತೆ ಮತ್ತು ಐತಿಹಾಸಿಕ ಪ್ರಾಮುಖ್ಯತೆ ಹೊಂದಿದ ವೈವಿಧ್ಯಮಯ ಭೂ ದೃಶ್ಯಗಳನ್ನು ಹೊಂದಿದ ವಿಶಿಷ್ಟ ದ್ವೀಪ ಅಂಡಮಾನ್‌. ಇದು 200ಕ್ಕೂ ಹೆಚ್ಚು ದ್ವೀಪಗಳನ್ನೊಳಗೊಂಡ ಬಂಗಾಳ ಕೊಲ್ಲಿ ಮತ್ತು ಹಿಂದೂ ಮಹಾಸಾಗರದ ಮಧ್ಯೆ ಇರುವ, ಕೇಂದ್ರಾಡಳಿತಕ್ಕೆ ಒಳಪಟ್ಟ ಭೂ ಪ್ರದೇಶ. ಈ ದ್ವೀಪ ಸಮೂಹದಲ್ಲಿ ಕೇವಲ 38 ದ್ವೀಪಗಳಲ್ಲಿ ಮಾತ್ರ ಜನವಸತಿ ಇದೆ. ಇವತ್ತಿಗೂ ನಾಗರಿಕ ಜಗತ್ತಿನ ಗೊಡವೆಯಿಲ್ಲದೇ ಬದುಕುತ್ತಿರುವ, ನಾಗರಿಕ ಬದುಕಿನ ಸಂಪರ್ಕಕ್ಕೂ ಬಾರದ ಜಾರವಾ ಮತ್ತು ಸೆಂಟಿನಲ್ಸ್ ಬುಡಕಟ್ಟು ಜನಾಂಗದವರ ಆವಾಸ ಸ್ಥಾನವೂ ಹೌದು. ಈ ಜನಾಂಗಗಳಿಗೆ ಯಾವುದೇ ತೊಂದರೆ ಆಗದಂತೆ ಸರಕಾರ ರಕ್ಷಣೆಯನ್ನೂ ನೀಡುತ್ತಿದೆ. ಸೆಂಟಿನಲ್ಸ್‌ ಬುಡಕಟ್ಟು ಜನ ವಾಸವಿರುವ ದ್ವೀಪಗಳಿಗೆ ಮನುಷ್ಯರ ಪ್ರವೇಶವನ್ನು ಈಗಲೂ ನಿಷೇಧಿಸಲಾಗಿದೆ.

ಹಲವು ನಿಬಂಧನೆಗಳಿವೆ!

ಅಂಡಮಾನ್‌ ಪ್ರವಾಸಕ್ಕೆ ಬಂದವರು ಭೇಟಿ ನೀಡಲೇಬೇಕಾದ ದ್ವೀಪ ಬಾರಾತಂಗ್‌. ಸೊಂಪಾದ ಕಾಡುಗಳು, ನಿಗೂಢ ಸುಣ್ಣದ ಗುಹೆಗಳು, ಮಣ್ಣಿನ ಜ್ವಾಲಾಮುಖೀಗಳು, ಕಾಂಡ್ಲಾ ವನಗಳು, ನೀರ ತೊರೆಗಳು, ಗಿಳಿ ದ್ವೀಪ… ಹೀಗೆ ಒಂದೊಂದನ್ನೇ ಪ್ರವಾಸಿಗರ ಮುಂದೆ ತೆರೆದಿಡುತ್ತಾ ಹೋಗುವ ಅದ್ಭುತ ಯಾನ. ರಾಜಧಾನಿ ಪೋರ್ಟ್‌ ಬ್ಲೇರ್‌ನಿಂದ 110 ಕಿಲೋಮೀಟರ್‌ ದೂರದಲ್ಲಿರುವ ಈ ದ್ವೀಪಕ್ಕೆ ರಸ್ತೆ ಪ್ರಯಾಣ ಅಥವಾ ದೋಣಿ ಪ್ರಯಾಣ ಈ ಎರಡರಲ್ಲಿ ಯಾವುದಾದರೊಂದನ್ನು ಬಳಸಿಕೊಳ್ಳಬಹುದು. ರಸ್ತೆ ಪ್ರಯಾಣ “ಜಾರವಾ ಬುಡಕಟ್ಟು ಜನಾಂಗದ ಮೀಸಲು ಅರಣ್ಯ’ದ ಮಧ್ಯೆಯೇ ಸಾಗಬೇಕಾಗಿರುವದರಿಂದ ಕೆಲವು ಕಾನೂನುಗಳನ್ನು ಪಾಲಿಸಬೇಕಾಗುತ್ತದೆ. ಅರಣ್ಯ ಇಲಾಖೆಯ ಅನುಮತಿಯೂ ಬೇಕಾಗುತ್ತದೆ. ಪೋರ್ಟ್‌ ಬ್ಲೇರ್‌ನಿಂದ 40 ಕಿಲೋಮೀಟರ್‌ ದೂರದಲ್ಲಿರುವ ಜಿರಕಟಾಂಗ್‌ ಫಾರೆಸ್ಟ್ ಚೆಕ್‌ಪೋಸ್ಟ್ ಬೆಳಗ್ಗೆ 6 ಗಂಟೆಯಿಂದ 9 ಗಂಟೆಯವರೆಗೆ ಬಾರಾತಂಗ್‌ ಪ್ರವೇಶಿಸಲು ಅನುಮತಿ ನೀಡುತ್ತದೆ. ಹಾಗಾಗಿ, ಪೋರ್ಟ್‌ ಬ್ಲೇರ್‌ನಿಂದ ಬೆಳಗ್ಗೆ 3.30ಕ್ಕೆ ಪ್ರಯಾಣ ಆರಂಭಿಸಬೇಕಾಗುತ್ತದೆ. ಇಲ್ಲಿಂದ ಮುಂದೆ ಇರುವುದೇ “ಜಾರವಾ ಬುಡಕಟ್ಟು ಜನಾಂಗದ ಮೀಸಲು ಅರಣ್ಯ’. ರಸ್ತೆ ಅಕ್ಕ-ಪಕ್ಕಗಳಲ್ಲಿ ಕೆಲವೊಮ್ಮೆ ಕನಿಷ್ಠ ಬಟ್ಟೆಯನ್ನೂ ಧರಿಸದ, ಬಿಲ್ಲುಬಾಣಗಳನ್ನು ಹಿಡಿದ ಜಾರವಾ ಬುಡಕಟ್ಟು ಜನಗಳನ್ನು ನೋಡಬಹುದು. ಆದರೆ, ಈ ಮಾರ್ಗದಲ್ಲಿ ವಾಹನಗಳನ್ನು ನಿಲ್ಲಿಸುವಂತಿಲ್ಲ. ಅವರನ್ನು ಮಾತನಾಡಿಸುವಂತಿಲ್ಲ. ಅಥವಾ ಅವರಿಗೆ ಯಾವದೇ ರೀತಿಯ ಆಹಾರವೇ ಮುಂತಾದ ಆಮಿಷಗಳನ್ನು ನೀಡುವಂತಿಲ್ಲ. ಮೊಬೈಲ್‌, ಕ್ಯಾಮರಾಗಳಿಂದ ಅವರ ಫೋಟೋಗಳನ್ನು ಕ್ಲಿಕ್ಕಿಸುವಂತಿಲ್ಲ. ಇವೆಲ್ಲವುಗಳ ಮೇಲೆ ಕಟ್ಟುನಿಟ್ಟಾಗಿ ನಿಷೇಧ ಹೇರಲಾಗಿದೆ ಮತ್ತು ಉಲ್ಲಂ ಸುವುದು ಶಿಕ್ಷಾರ್ಹ ಅಪರಾಧ. ಬುಡಕಟ್ಟು ಮೀಸಲು ಪ್ರದೇಶವನ್ನು ದಾಟುವಾಗ ಎಲ್ಲಾ ವಾಹನಗಳಿಗೆ ಗಂಟೆಗೆ 40 ಕಿ.ಮೀ. ವೇಗದ ನಿರ್ಬಂಧವೂ ಇದೆ. ಮೊದಲೆಲ್ಲಾ ಈ ರಸ್ತೆ ಮುಖಾಂತರ ಹಾದು ಹೋಗುವ ಪ್ರಯಾಣಿಕರ ಮೇಲೆ ಈ ಜನ ದಾಳಿ ಇಡುತ್ತಿದ್ದರಂತೆ. ಆದರೆ ಈಗ ಕಡಿಮೆಯಾಗಿದೆ. ಈಗಲೂ ಇಲ್ಲಿ ವಾಹನಗಳಿಗೆ ಭದ್ರತಾ ವ್ಯವಸ್ಥೆ ಕಲ್ಪಿಸುತ್ತಾರೆ.

ಸುಣ್ಣದ ಗುಹೆ ಎಂಬ ಅದ್ಭುತ…

ಜಿರಕಟಾಂಗ್‌ನಿಂದ 50 ಕಿ.ಮೀ. ಸಾಗಿದ ನಂತರ ಸಿಗುವುದೇ ನಿಲಂಬೂರ್‌ ಜೆಟ್ಟಿ. ಅಲ್ಲಿಂದ ಮುಂದೆ ದೋಣಿ ಪ್ರಯಾಣ. ಹತ್ತು ಆಸನಗಳ ಫೈಬರ್‌ ದೋಣಿ ನಮ್ಮನ್ನು ಬಾರಾತಂಗ್‌ ದ್ವೀಪದ ಸುಣ್ಣದ ಗುಹೆಗಳ ಕಡೆಗೆ ಕರೆದೊಯ್ಯುತ್ತದೆ. ಈ ಗುಹೆಗಳನ್ನು ತಲುಪಲು 1.2 ಕಿಲೋಮೀಟರ್‌ ಚಾರಣ ಮಾಡಬೇಕು. ಈ ಗುಹೆಗಳು ಅಂಡಮಾನ್‌ ದ್ವೀಪದಲ್ಲಿನ ಅತ್ಯುತ್ತಮ ಮತ್ತು ವಿಶಿಷ್ಟವಾದ ಪ್ರವಾಸೀ ಆಕರ್ಷಣೆಗಳಲ್ಲೊಂದು. ಶತ-ಶತಮಾನಗಳಿಂದ ನೆಲೆನಿಂತ ಈ ಸುಣ್ಣದ ಗುಹೆಗಳು ನೈಸರ್ಗಿಕವಾಗಿ ರೂಪುಗೊಂಡ ಪ್ರಕೃತಿಯ ಸ್ವಂತ ವಾಸ್ತು ಶಿಲ್ಪ. ಇದೊಂದು ವಿಸ್ಮಯದಾಯಕ ನೈಸರ್ಗಿಕ ಅದ್ಭುತವೇ ಸರಿ. ಕ್ಯಾಲ್ಸಿಯಂ ಕಾಬೋìನೇಟ್‌ನಿಂದ ನಿರ್ಮಿತವಾದ ಈ ಗುಹೆಗಳ ಗೋಡೆಗಳು ಗೊಂಚಲು ಗೊಂಚಲಾಗಿ ಚಾವಣಿಯಿಂದ ತೂಗಾಡುವ ಬೃಹತ್‌ ರಚನೆಗಳಿಂದ ಕೂಡಿದ್ದು, ಗುಹೆಯೊಳಗೆ ಓಡಾಡುವಾಗ ಅದರ ಸೀಲಿಂಗ್‌ನಿಂದ ನೀರು ನಿರಂತರವಾಗಿ ತಲೆಯ ಮೇಲೆ ತೊಟ್ಟಿಕ್ಕುತ್ತಿರುತ್ತದೆ.

ಗಿಳಿಗಳ ದ್ವೀಪವೂ ಇಲ್ಲುಂಟು!

ಬಾರಾತಂಗ್‌ನ ಅಂಕುಡೊಂಕಾದ ಮ್ಯಾಂಗ್ರೋವ್‌ ತೊರೆಗಳಲ್ಲಿ ಸ್ಪೀಡ್‌ ಬೋಟ್‌ಗಳಲ್ಲಿ ಪ್ರಯಾಣಿಸುವುದು ಇನ್ನೊಂದು ಪ್ರವಾಸೀ ಆಕರ್ಷಣೆ. ಈ ತೊರೆಗಳನ್ನು ಹಾದು ಹೋಗುವಾಗ ಉಪ್ಪು ನೀರಿನ ಮೊಸಳೆಗಳು, ವಿವಿಧ ಜಾತಿಯ ಪಕ್ಷಿಗಳನ್ನು ವೀಕ್ಷಿಸಬಹುದು. ಬಾರಾತಂಗ್‌ ಜೆಟ್ಟಿಯಿಂದ ಕೆಲವೇ ನಿಮಿಷಗಳ ಸವಾರಿಯಲ್ಲಿ ಸಮುದ್ರ ಮಧ್ಯದಲ್ಲಿರುವ ಮೇಜಿನ ಆಕಾರದ ಗಿಳಿ ದ್ವೀಪಕ್ಕೆ ಭೆಟ್ಟಿ ಕೊಡಬಹುದು. ಇಲ್ಲಿ ಅಸಂಖ್ಯಾತ ಜಾತಿಯ ಗಿಳಿಗಳನ್ನು ನೋಡಬಹುದು.

ಮಣ್ಣಿನ ಜ್ವಾಲಾಮುಖಿ!

ಬಾರಾತಂಗ್‌ನ ಇನ್ನೊಂದು ಆಕರ್ಷಣೆ ಮಣ್ಣಿನ ಜ್ವಾಲಾಮುಖೀಗಳು. 2004ರಲ್ಲಿ ಸಮುದ್ರದಲ್ಲಿನ ಭೂಕಂಪನದಿಂದಾಗಿ ಈ ಮಣ್ಣಿನಲ್ಲಿ ಜ್ವಾಲಾಮುಖೀಗಳು ಉದ್ಭವಿ ಸಿವೆ. ಇದನ್ನು ಮಡ್‌ ಡೋಮ್‌ ಎಂದೂ ಕರೆಯಲಾಗುತ್ತದೆ. ಕೆಸರು ಮಣ್ಣು, ನೀರು ಮತ್ತು ಅನಿಲಗಳ ಸ್ಫೋಟದಿಂದ ಇವು ರೂಪುಗೊಂಡಿವೆ. ವಿಶೇಷವೇನೆಂದರೆ ಮಣ್ಣಿನ ಜ್ವಾಲಾಮುಖೀಗಳು ಸ್ಫೋಟಗೊಂಡಾಗ ಅವು ಉಳಿದ ಜ್ವಾಲಾಮುಖೀ ಗಳಂತೆ ಲಾವಾವನ್ನು ಉಗುಳುವುದಿಲ್ಲ ಬದಲಿಗೆ ಕೆಸರನ್ನು ಹೊರಹಾಕುತ್ತವೆ. ಅದರ ಜೊತೆಗೆ ಮಿಥೇನ್‌ ಹಾಗೂ ಕಾರ್ಬನ್‌ ಡೈಆಕ್ಸೆ„ಡ್‌ನ‌ಂತಹ ಅನಿಲಗಳು ಬಿಡುಗಡೆಯಾಗುತ್ತವೆ. ಈ ಜ್ವಾಲಾಮುಖೀ ಗಳು 700 ಮೀಟರ್‌ಗಳಷ್ಟು ಎತ್ತರ ಮತ್ತು 10 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ. ಅಂಡಮಾನ್‌ನಲ್ಲಿ ಒಟ್ಟು 11 ಮಣ್ಣಿನ ಜ್ವಾಲಾಮುಖಿಗಳಿದ್ದು, ಬಾರಾತಂಗನಲ್ಲಿಯೇ ಎಂಟು ಮಡ್‌ ಡೋಮ್‌ಗಳು ಇವೆ.

ವಿಶೇಷ ಸೂಚನೆಗಳು

ಒಂದೇ ದಿನದ ಪ್ರವಾಸದಲ್ಲಿ ಹಲವು ಆಕರ್ಷಣೀಯ ಸ್ಥಳಗಳನ್ನು ನೋಡಬಹುದಾದ ಬಾರಾತಂಗ್‌ ನಿಜಕ್ಕೂ ನೈಸರ್ಗಿಕ ಅಚ್ಚರಿಗಳ ತಾಣ. ಇಲ್ಲಿಗೆ ಹೋಗುವ ಮುನ್ನ ತಲೆಗೊಂದು ಟೋಪಿ, ಕಣ್ಣಿಗೆ ಕಪ್ಪು ಕನ್ನಡಕ, ಕುಡಿಯಲೊಂದಿಷ್ಟು ನೀರು, ಸೊಳ್ಳೆ ನಿವಾರಕ ಕ್ರೀಂಗಳನ್ನು ಒಯ್ಯಲು ಮರೆಯಬೇಡಿ. ಪ್ರತಿ ಸೋಮವಾರ ಇಲ್ಲಿನ ಸುಣ್ಣದ ಗುಹೆಗೆ ಪ್ರವೇಶ ನಿರ್ಬಂಧ ಇರುವುದರಿಂದ  ಸೋಮವಾರ ಹೊರತುಪಡಿಸಿ  ಪ್ರವಾಸ ಕೈಗೊಳ್ಳಿ.

-ಜಿ. ಆರ್‌. ಪಂಡಿತ್‌, ಸಾಗರ

 

ಟಾಪ್ ನ್ಯೂಸ್

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

9

Cooker Story: ಹತ್ತು ಸಲ ಕೂಗಿದ್ರೂ  ಅವರಿಗೆ ಗೊತ್ತಾಗಲಿಲ್ಲ..!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

ಪಾಠ ಮಾಡಿದೆವು… ಸರಿ, ಬದುಕಲು ಕಲಿಸಿದೆವಾ?

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.