Loksabha ಇಂದು 4ನೇ ಹಂತದ ಮತ ; ಒಡಿಶಾ, ಆಂಧ್ರದಲ್ಲಿ ವಿಧಾನಸಭೆ ಚುನಾವಣೆ

370ನೇ ವಿಧಿ ರದ್ದು ಬಳಿಕ ಕಾಶ್ಮೀರದ ಮೊದಲ ಚುನಾವಣೆ

Team Udayavani, May 13, 2024, 6:45 AM IST

1-wewwqewqe

ಹೊಸದಿಲ್ಲಿ: ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನ ಸೋಮವಾರ ನಡೆಯಲಿದ್ದು, 9 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದ ಒಟ್ಟು 96 ಕ್ಷೇತ್ರಗಳಲ್ಲಿ 1,717 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯಲಿದ್ದಾರೆ.

ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌, ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌, ಟಿಎಂಸಿಯ ಮಹುವಾ ಮೊಯಿತ್ರಾ, ಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಸಹಿತ ಹಲವು ಘಟಾನುಘಟಿಗಳ ಹಣೆಬರಹ ಈ ಹಂತದಲ್ಲಿ ನಿರ್ಧಾರವಾಗಲಿದೆ. 4ನೇ ಹಂತ ಮುಗಿಯುತ್ತಿದ್ದಂತೆ, ದೇಶದ ಒಟ್ಟು 379 ಕ್ಷೇತ್ರಗಳಿಗೆ ಮತದಾನ ಪೂರ್ಣಗೊಂಡಂತಾಗಲಿದೆ.

4ನೇ ಹಂತದಲ್ಲಿ ಒಟ್ಟು 1,717 ಅಭ್ಯರ್ಥಿಗಳು ಕಣದಲ್ಲಿದ್ದು, 17.70 ಕೋಟಿ ಮತದಾರರು ಹಕ್ಕು ಚಲಾಯಿಸಲಿದ್ದಾರೆ. ಈ ಹಂತದಲ್ಲಿ ಮತದಾನ ನಡೆಯುವ ಒಟ್ಟು 96 ಕ್ಷೇತ್ರಗಳ ಪೈಕಿ 40ರಲ್ಲಿ ಕಳೆದ ಬಾರಿ ಬಿಜೆಪಿ ಗೆಲುವು ಸಾಧಿಸಿದೆ. ಎ.19, ಎ.26 ಮತ್ತು ಮೇ 7ರಂದು ಮೊದಲ 3 ಹಂತದ ಮತದಾನ ನಡೆದಿದ್ದು, ಒಟ್ಟಾರೆ ಕ್ರಮವಾಗಿ ಶೇ.66.1, ಶೇ.66.7 ಮತ್ತು ಶೇ.65.58ರಷ್ಟು ಮತದಾನ ದಾಖಲಾಗಿತ್ತು.

4ನೇ ಹಂತದ ಮತದಾನವು ಉತ್ತರಪ್ರದೇಶದ ಆಡಳಿತಾರೂಢ ಬಿಜೆಪಿಗೆ ಅತ್ಯಂತ ಮಹತ್ವದ್ದು. ಈ ಹಂತದಲ್ಲಿ ರಾಜ್ಯದ 13 ಸ್ಥಾನಗಳಿಗೆ ಮತದಾನ ನಡೆಯಲಿದೆ. 2019ರ ಚುನಾವಣೆಯಲ್ಲಿ ಈ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಕ್ಲೀನ್‌ಸಿÌàಪ್‌ ಮಾಡಿತ್ತು. ಕನೌ°ಜ್‌ನಲ್ಲಿ ಕಳೆದ ಬಾರಿ ಎಸ್‌ಪಿ ನಾಯಕ ಅಖೀಲೇಶ್‌ ಪತ್ನಿ ಡಿಂಪಲ್‌ ಯಾದವ್‌ರನ್ನು ಸೋಲಿಸಿದ್ದ ಬಿಜೆಪಿ ಸಂಸದ ಸುಬ್ರತ್‌ ಪಾಠಕ್‌ಗೆ ಈ ಬಾರಿ ಅಖಿಲೇಶ್‌ ಅವರೇ ಎದುರಾಳಿ. ಇನ್ನೊಂದೆಡೆ ಬಿಎಸ್‌ಪಿ ಇಮ್ರಾನ್‌ ಬಿನ್‌ ಜಫ‌ರ್‌ ಅವರನ್ನು ಕಣಕ್ಕಿಳಿಸುವ ಮೂಲಕ ತ್ರಿಕೋನ ಸಮರಕ್ಕೆ ವೇದಿಕೆ ಸಿದ್ಧಪಡಿಸಿದೆ.

ಪ.ಬಂಗಾಲದ ಬಹ್ರಾಂಪುರದಲ್ಲಿ ಅಧೀರ್‌ ರಂಜನ್‌ ಚೌಧರಿ ಮತ್ತು ಟಿಎಂಸಿ ಅಭ್ಯರ್ಥಿ, ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್‌ ನಡುವೆ ನೇರ ಸ್ಪರ್ಧೆಯಿದೆ. ಲೋಕಸಭೆಯಿಂದ ಉಚ್ಚಾಟಿತರಾಗಿ ರುವ ಟಿಎಂಸಿ ನಾಯಕಿ ಮಹುವಾ ಮೊಯಿತ್ರಾ ಅವರು ಕೃಷ್ಣಾನಗರದಲ್ಲಿ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ನಟ-ರಾಜಕಾರಣಿ ಶತ್ರುಘ್ನ ಸಿನ್ಹಾ ಅಸ ನ್ಸೋಲ್‌ ಕ್ಷೇತ್ರದಿಂದ ಮರುಆಯ್ಕೆ ಬಯಸಿದ್ದಾರೆ.

370ನೇ ವಿಧಿ ರದ್ದು ಬಳಿಕ ಕಾಶ್ಮೀರದ ಮೊದಲ ಚುನಾವಣೆ
ಕೇಂದ್ರಾಡಳಿತ ಪ್ರದೇಶವಾದ ಜಮ್ಮು-ಕಾಶ್ಮೀರದ ಶ್ರೀನಗರ ಲೋಕಸಭಾ ಕ್ಷೇತ್ರಕ್ಕೂ ಸೋಮವಾರವೇ ಚುನಾವಣೆ ನಡೆಯಲಿದ್ದು, 24 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಸಂವಿಧಾನದ 370ನೇ ವಿಧಿ ರದ್ದತಿ ಬಳಿಕ ಕಣಿವೆಯಲ್ಲಿ ನಡೆಯುತ್ತಿರುವ ಮೊದಲ ಪ್ರಮುಖ ಚುನಾವಣೆ ಇದಾಗಿದೆ. ಎನ್‌ಸಿ ಈ ಕ್ಷೇತ್ರ ಶಿಯಾ ನಾಯಕ ಅಗಾ ಸೈಯದ್‌ ರೂಹುಲ್ಲಾ ಮೆಹಿª ಎಂಬವರನ್ನು ಕಣಕ್ಕಿಳಿಸಿದರೆ, ಪಿಡಿಪಿಯಿಂದ ಯುವ ನಾಯಕ ವಹೀದ್‌ ಪಾರಾ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಇಲ್ಲಿ ಯಾರಿಗೂ ಟಿಕೆಟ್‌ ನೀಡಿಲ್ಲ.

ಒಡಿಶಾ, ಆಂಧ್ರದಲ್ಲಿ ಇಂದು ವಿಧಾನಸಭೆ ಚುನಾವಣೆ

ಅಮರಾವತಿ/ಭುವನೇಶ್ವರ: ಲೋಕಸಭೆ ಚುನಾವ ಣೆಯ 4ನೇ ಹಂತದ ಮತದಾನದ ಜತೆಗೇ ಆಂಧ್ರ ಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆ ಗಳೂ ಸೋಮವಾರ ನಡೆಯಲಿದೆ.

ಪ್ರಧಾನಿ ಮೋದಿ, ಅಮಿತ್‌ ಶಾ, ಖರ್ಗೆ, ರಾಹುಲ್‌ ಗಾಂಧಿ, ಪ್ರಿಯಾಂಕಾ ವಾದ್ರಾ ಮುಂತಾದ ಘಟಾನು ಘಟಿಗಳ ಅಬ್ಬರದ ಪ್ರಚಾರಕ್ಕೆ ತೆರೆಬಿದ್ದಿದ್ದು, ಸೋಮ ವಾರ 175 ಸದಸ್ಯ ಬಲದ ಆಂಧ್ರಪ್ರದೇಶಕ್ಕೆ ಒಂದೇ ಹಂತದಲ್ಲಿ ಹಾಗೂ ಒಡಿಶಾದಲ್ಲಿನ 147 ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ 28 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಇದಾದ ಬಳಿಕ ಒಡಿಶಾದಲ್ಲಿ ಇನ್ನೂ 3 ಹಂತಗಳ ಚುನಾವಣೆ ನಡೆಯಲಿದೆ.
ವೈಎಸ್ಸಾರ್‌ಸಿಪಿ ಅಧ್ಯಕ್ಷ, ಸಿಎಂ ಜಗನ್‌ ರೆಡ್ಡಿ (ಪುಲಿವೆಂದುಲ), ಟಿಡಿಪಿ ನಾಯಕ ಎನ್‌.ಚಂದ್ರಬಾಬು ನಾಯ್ಡು(ಕುಪ್ಪಂ), ಜನಸೇನಾ ಅಧ್ಯಕ್ಷ, ನಟ ಪವನ್‌ ಕಲ್ಯಾಣ್‌ (ಫೀಥಾಪುರಂ) ಮತ್ತಿತರರು ಆಂಧ್ರ ವಿಧಾನಸಭೆ ಚುನಾವಣ ಕಣದಲ್ಲಿರುವ ಪ್ರಮುಖರು. ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷವು ಎಲ್ಲ 175 ಅಸೆಂಬ್ಲಿ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಎನ್‌ಡಿಎ ಮಿತ್ರಪಕ್ಷಗಳಾದ ಟಿಡಿಪಿ 144ರಲ್ಲಿ, ಬಿಜೆಪಿ 10ರಲ್ಲಿ, ಜನಸೇನಾ ಪಕ್ಷವು 21ರಲ್ಲಿ ಸ್ಪರ್ಧಿಸುತ್ತಿವೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ವೈಎಸ್ಸಾರ್‌ ಕಾಂಗ್ರೆಸ್‌ ಪಕ್ಷವು 151ರಲ್ಲಿ ಗೆಲುವು ಸಾಧಿಸಿದರೆ, ಟಿಡಿಪಿ 23ರಲ್ಲಿ ಮತ್ತು ಜನಸೇನಾ 1ರಲ್ಲಿ ಜಯ ಗಳಿಸಿತ್ತು. ಚುನಾವಣೆ ಸುಗಮವಾಗಿ ಸಾಗಲಿ ಎಂಬ ಕಾರಣಕ್ಕೆ ಚುನಾವಣ ಆಯೋಗವು ಕರ್ನಾಟಕದ 3,500 ಪೊಲೀಸರು ಸೇರಿದಂತೆ ಒಟ್ಟು 1.06 ಲಕ್ಷ ಭದ್ರತಾ ಸಿಬಂದಿಯನ್ನು ಭದ್ರತೆಗಾಗಿ ನಿಯೋಜಿಸಿದೆ. ಒಟ್ಟು 4.14 ಕೋಟಿ ಮತದಾರರಿದ್ದು, 2,387 ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ.

ಇನ್ನು, ಒಡಿಶಾದ 28 ಕ್ಷೇತ್ರಗಳಿಗೆ 243 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, ಬಿಜೆಡಿ, ಕಾಂಗ್ರೆಸ್‌ ಮತ್ತು ಬಿಜೆಪಿ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿವೆ. ಒಟ್ಟು 62.87 ಲಕ್ಷ ಮತದಾರರು ಈ ಅಭ್ಯರ್ಥಿಗಳ ಭವಿಷ್ಯವನ್ನು ಬರೆಯಲಿದ್ದಾರೆ. ಸಿಎಂ ನವೀನ್‌ ಪಟ್ನಾಯಕ್‌ ಸತತ 6ನೇ ಬಾರಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿದ್ದರೆ, ಒಡಿಶಾದಲ್ಲಿ ಪಟ್ನಾಯಕ್‌ ಆಡಳಿತವನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಎಲ್ಲ ಪ್ರಯತ್ನಗಳನ್ನೂ ನಡೆಸಿದೆ.

ಟಾಪ್ ನ್ಯೂಸ್

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ ಪಿಎಂ ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

1-sadsadasd

Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ

Sometimes governments topple in a single day…: Mamata gives big hint

LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ

Modi pays homage to Mahatma Gandhi and Vajpayee memorial before taking oath

Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

cOurt

Udupi: ಪಾತಕಿ ಬನ್ನಂಜೆ ರಾಜ ಸಹಚರನಿಗೆ ಜಾಮೀನು

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

new-parli

Foreign affairs, ಕೃಷಿ ಶಿಕ್ಷಣ, ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲು

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.