LS polls: ಮತ ಚಲಾಯಿಸಿದ ಟಾಲಿವುಡ್ ಸ್ಟಾರ್ಸ್; ಫೋಟೋಸ್ ವೈರಲ್
Team Udayavani, May 13, 2024, 11:55 AM IST
ಹೈದರಾಬಾದ್: ನಾಲ್ಕನೇ ಹಂತದ ಲೋಕಸಭಾ ಚುನಾವಣೆ ಆರಂಭಗೊಂಡಿದೆ. ಮುಂಜಾನೆಯಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ತಮ್ಮ ಮತವನ್ನು ಹಾಕಿ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗಿಯಾಗಿದ್ದಾರೆ.
ಒಡಿಶಾ, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಮತದಾನ ಆರಂಭಗೊಂಡಿದ್ದು, ನೂರಾರು ಮತದಾರರು ಮುಂಜಾನೆಯೇ ಮತವನ್ನು ಚಲಾಯಿಸಿದ್ದಾರೆ.
ಟಾಲಿವುಡ್ ಸೂಪರ್ ಸ್ಟಾರ್ ಗಳು ಬೆಳಗ್ಗೆ ಬೇಗನೇ ಮತವನ್ನು ಚಲಾಯಿಸಿದ್ದಾರೆ.
ಜೂಬಿಲಿ ಹಿಲ್ಸ್‌ನ ಓಬುಲ್ ರೆಡ್ಡಿ ಪಬ್ಲಿಕ್ ಶಾಲೆಯಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ಅವರ ಕುಟುಂಬಸ್ಥರು ಮತವನ್ನು ಚಲಾಯಿಸಿದ್ದಾರೆ. ಜೂ.ಎನ್ ಟಿಆರ್ ಪತ್ನಿ ಲಕ್ಷ್ಮಿ ಪ್ರಣತಿ ,ತಾಯಿ ಶಾಲಿನಿ ನಂದಮೂರಿ ಅವರೊಂದಿಗೆ ಬಂದು ಮತವನ್ನು ಚಲಾಯಿಸಿದ್ದಾರೆ.
ಇನ್ನು ನಟ ಅಲ್ಲು ಅರ್ಜುನ್ ಒಬ್ಬರೇ ಮತ ಚಲಾಯಿಸಲು ಬಂದಿದ್ದರು. “ದಯವಿಟ್ಟು ನಿಮ್ಮ ಮತಗಳನ್ನು ಚಲಾಯಿಸಿ. ಇದು ಅತ್ಯಂತ ಜವಾಬ್ದಾರಿಯುತ ದಿನ. ತುಂಬಾ ಬಿಸಿಲಿದೆ ಎಂದು ನನಗೆ ತಿಳಿದಿದೆ, ಆದರೆ ಈ ದಿನವು ನಮ್ಮ ಭವಿಷ್ಯವನ್ನು ನಿರ್ಧರಿಸುತ್ತದೆ” ಎಂದು ಅಲ್ಲು ಅರ್ಜುನ್ ಮತ ಚಲಾಯಿಸಿದ ಬಳಿಕ ಹೇಳಿದ್ದಾರೆ.
ಇತ್ತ ಮೆಗಾಸ್ಟಾರ್ ಚಿರಂಜೀವಿ ತಮ್ಮ ಪತ್ನಿ ಸುರೇಖಾ ಮತ್ತು ಪುತ್ರಿ ಸುಶ್ಮಿತಾ ಅವರೊಂದಿಗೆ ಮತ ಚಲಾಯಿಸಲು ಆಗಮಿಸಿದ್ದರು.
ನಟ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಮಂಗಳಗಿರಿಯಲ್ಲಿ ತಮ್ಮ ಮತವನ್ನು ಚಲಾಯಿಸಿದರು. ಪವನ್ ಕಲ್ಯಾಣ್ ಪತ್ನಿ ಅನ್ನಾ ಲೆಜ್ನೆವಾ ಅವರೊಂದಿಗೆ ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ ವಿಡಿಯೋಗಳು ವೈರಲ್ ಆಗಿವೆ.
ನಿರ್ದೇಶಕ ರಾಜಮೌಳಿ ಪತ್ನಿ, ಪುತ್ರನೊಂದಿಗೆ ದುಬೈಯಿಂದ ನೇರವಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದಾರೆ ಎಂದು ಹೇಳಿದ್ದಾರೆ.
ನಟರಾದ ನಂದಮೂರಿ ಕಲ್ಯಾಣರಾಮ್ , ಮೋಹನ್ ಬಾಬು, ವಿಷ್ಣು ಮಂಚು ಮತ್ತು ನಾಗ ಚೈತನ್ಯ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತ ಚಲಾಯಿಸಿದರು.
ನಾಲ್ಕನೇ ಹಂತದಲ್ಲಿ ಆಂಧ್ರಪ್ರದೇಶ, ತೆಲಂಗಾಣ ಮತ್ತು ಒಡಿಶಾದಲ್ಲಿ ಮತದಾನ ನಡೆಯುತ್ತಿದೆ.
.@alluarjun casts his vote. #AlluArjun #Elections2024 pic.twitter.com/bdNA06Qu3H
— Suresh PRO (@SureshPRO_) May 13, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Tulu cinema; ಕೋಸ್ಟಲ್‌ನಲ್ಲೀಗ ಸಿನೆಮಾ ಹಂಗಾಮಾ!
SSMB29: ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಲೀಡ್ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?
Video: ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ
MUST WATCH
ಹೊಸ ಸೇರ್ಪಡೆ
Bengaluru: ಪೊಲೀಸರ ಬೇಟೆ; 26 ಕೋಟಿ ರೂ. ಮಾದಕ ವಸ್ತು ವಶ
Life Partner ಹೇಗಿರಬೇಕು: ನಟಿ ರಶ್ಮಿಕಾ ಮಂದಣ್ಣ ಮನದ ಮಾತು
Karavali Utsava: ಡಿ.21-ಜ.19: ಮಂಗಳೂರಿನಲ್ಲಿ ಕರಾವಳಿ ಉತ್ಸವ; ದ.ಕ ಜಿಲ್ಲಾಧಿಕಾರಿ ಮಾಹಿತಿ
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್‌ಗಳಲ್ಲಿ 275 ರನ್ ಅಗತ್ಯ
Shirva: ಏಷ್ಯನ್ ಜೂನಿಯರ್ ವೇಟ್‌ಲಿಫ್ಟಿಂಗ್ ತೀರ್ಪುಗಾರರಾಗಿ ಶಿರ್ವದ ಕೃಷ್ಣರಾಜ್.ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.