ಅಬ್ಬಾ…ತರಕಾರಿ ಬಲು ದುಬಾರಿ..! ಗ್ರಾಹಕರ ಜೇಬಿಗೆ ಕತ್ತರಿ

Team Udayavani, May 13, 2024, 4:51 PM IST

ಅಬ್ಬಾ…ತರಕಾರಿ ಬಲು ದುಬಾರಿ..! ಗ್ರಾಹಕರ ಜೇಬಿಗೆ ಕತ್ತರಿ

ಉದಯವಾಣಿ ಸಮಾಚಾರ
ಹಾವೇರಿ: ಕಳೆದ ಎರಡು ತಿಂಗಳಿಂದ ಬಿಸಿಲಿನ ತೀವ್ರತೆ, ಮಳೆ ಕೊರತೆಯಿಂದ ತರಕಾರಿ ನಿರೀಕ್ಷಿತ ಮಟ್ಟದಲ್ಲಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಹೀಗಾಗಿ ತರಕಾರಿ ದರ ಏರಿಕೆ ಕಂಡಿದ್ದು, ಗ್ರಾಹಕರ ಜೇಬಿಗೆ ಬಿಸಿ ತಟ್ಟುವಂತಾಗಿದೆ. ಸ್ಥಳೀಯ ಬಸವೇಶ್ವರ ನಗರದಲ್ಲಿ ರವಿವಾರ ನಡೆದ ತರಕಾರಿ ಸಂತೆಯಲ್ಲಿ ದರ ಏರಿಕೆ ಬಿಸಿ ಜನಸಾಮಾನ್ಯರಿಗೆ ಶಾಕ್‌ ನೀಡಿತು. ತರಕಾರಿ ದರ ಗಗನಕ್ಕೇರಿದ್ದರಿಂದ ಜನರು ಚೌಕಾಸಿ ಮಾಡಿ ತರಕಾರಿ ಖರೀದಿಸುತ್ತಿದ್ದ ದೃಶ್ಯ ಕಂಡು ಬಂತು.

ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಬಾರದ ಕಾರಣ ಬಿಸಿಲಿನ ತಾಪ ಜಾಸ್ತಿಯಾಗಿ ತರಕಾರಿ, ಸೊಪ್ಪುಗಳು ಬಾಡಿ ಹೋಗುತ್ತಿವೆ. ಅಂತರ್ಜಲ ಕುಸಿತಗೊಂಡಿದ್ದು, ಸಮರ್ಪಕ ನೀರು ಸಿಗದೇ ರೈತರು ತರಕಾರಿ ಬೆಳೆಯಲು ಮುಂದಾಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಗೆ ತರಕಾರಿ ಬರುತ್ತಿಲ್ಲ. ಸೋತೆಕಾಯಿ, ಬೀನ್ಸ್‌, ಟೊಮೆಟೊ, ಹಿರೇಕಾಯಿ, ಮೆಣಸಿನಕಾಯಿ, ಮೆಂತ್ಯ, ಕೊತ್ತಂಬರಿ, ಸಬ್ಬಸಗಿ ಸೊಪ್ಪು ಪೂರೈಕೆ ತೀವ್ರ ಕುಸಿದಿದೆ. ಗುಣಮಟ್ಟವಿಲ್ಲದ ಉತ್ಪನ್ನಗಳಿಗೂ ದುಬಾರಿ ಬೆಲೆ ಇದೆ. ಮಾರುಕಟ್ಟೆಗೆ ಪೂರೈಕೆ ಕಡಿಮೆಯಾದ ಕಾರಣ ಸಹಜವಾಗಿ ದರ ಏರಿಕೆಯಾಗಿದೆ.

ತರಕಾರಿ ದರದಲ್ಲಿ ಏರಿಕೆ: ಜಿಲ್ಲಾದ್ಯಂತ ಬರದ ಛಾಯೆ ಆವರಿಸಿದ್ದು, ಬಿಸಿಲಿನ ತೀವ್ರತೆಯಿಂದ ಇಳುವರಿ ಕುಂಠಿತಗೊಂಡು ಬಹುತೇಕ ತರಕಾರಿ ದರಗಳಲ್ಲಿ ಏರಿಕೆ ಕಂಡಿದ್ದು, ಗ್ರಾಹಕರ ಕೈ ಸುಡುತ್ತಿವೆ. ಕೆಜಿಗೆ 15-20ರೂ. ಇದ್ದ ಟೊಮೆಟೊ 40-50ರೂ.ಗೆ ಏರಿಕೆಯಾಗಿದೆ. ಕೆಜಿಗೆ 60-80ರೂ.ಇದ್ದ ಬೀನ್ಸ್‌ 180ರೂ.ಗೆ ಏರಿಕೆಯಾಗಿದೆ.

ಬದನೆಕಾಯಿ ಕೆಜಿಗೆ 70-80 ರೂ., ಬೀಟ್‌ರೂಟ್‌ 50-60ರೂ., ಹೀರೇಕಾಯಿ 60-80ರೂ., ಚವಳಿಕಾಯಿ 40-50ರೂ., ಮೆಣಸಿನಕಾಯಿ 100-120ರೂ.ಗಳಿಗೆ ಹೆಚ್ಚಳಗೊಂಡಿದೆ. ಈರುಳ್ಳಿ ಕೆಜಿಗೆ 30-35ರೂ., ಬೆಳ್ಳುಳ್ಳಿ ಬರೊಬ್ಬರಿ 230-250ರೂ.ಗೆ ಏರಿಕೆಯಾಗಿದೆ. ಕೊತ್ತಂಬರಿ, ಮೆಂತ್ಯ, ಪಾಲಕ್‌, ರಾಜಗಿರಿ, ಸಬ್ಬಸಿಗೆ ಸೊಪ್ಪು ಒಂದು ಕಂತೆ 10-15ರೂ. ಮಾರಾಟ ಮಾಡಲಾಗುತ್ತಿದ್ದು, ದರ ಏರಿಕೆ ಜನಸಾಮಾನ್ಯರಿಗೆ ಬಿಸಿ ತಟ್ಟುವಂತೆ ಮಾಡಿದೆ.

ತರಕಾರಿ ಪೂರೈಕೆಯಲ್ಲಿ ಇಳಿಕೆ: ಹಾವೇರಿ ಎಪಿಎಂಸಿಗೆ ಬೆಳಗಾವಿ, ಹುಬ್ಬಳ್ಳಿ ಕಡೆಯಿಂದ ಹೆಚ್ಚಿನ ತರಕಾರಿ ಪೂರೈಕೆಯಾಗುತ್ತದೆ. ಆದರೆ ಈ ಬಾರಿ ಮಳೆ ಕೈಕೊಟ್ಟು ಬರ ಆವರಿಸಿದ್ದರಿಂದ ತರಕಾರಿ ಬೆಳೆಗಳು ಒಣಗಿ ಹೋಗುತ್ತಿವೆ. ಹೀಗಾಗಿ ಸ್ಥಳೀಯ ರೈತರಿಂದ ಮಾರುಕಟ್ಟೆಗೆ ಸಮರ್ಪಕವಾಗಿ ತರಕಾರಿ ಪೂರೈಕೆಯಾಗುತ್ತಿಲ್ಲ. ಆಂಧ್ರ, ತಮಿಳುನಾಡು, ಬೆಳಗಾವಿ ಕಡೆಯಿಂದ ಮೆಣಸಿನಕಾಯಿ, ಕೋಲಾರದಿಂದ ಟೊಮೆಟೊ, ಹುಬ್ಬಳ್ಳಿಯಿಂದ ಈರುಳ್ಳಿ, ಬೆಳ್ಳುಳ್ಳಿ ಆವಕ ಮಾಡಿಕೊಳ್ಳಲಾಗುತ್ತಿದೆ ಎಂದು ತರಕಾರಿ ವ್ಯಾಪಾರಸ್ಥರು ಹೇಳುತ್ತಾರೆ.

ಮಳೆ ಕೊರತೆ ಹಾಗೂ ಬಿಸಿಲಿನ ತೀವ್ರತೆಯಿಂದ ತರಕಾರಿ ಬೆಳೆ ಹಾಳಾಗುತ್ತಿದ್ದು, ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗೆ ತರಕಾರಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಸಹಜವಾಗಿ ತರಕಾರಿಗಳ ಬೆಲೆ ಏರಿಕೆ ಕಂಡಿದೆ. ಆಂಧ್ರ, ತಮಿಳುನಾಡು, ಬೆಳಗಾವಿ ಕಡೆಯಿಂದ
ಮೆಣಸಿನಕಾಯಿ, ಕೋಲಾರದಿಂದ ಟೊಮೆಟೊ, ಹುಬ್ಬಳ್ಳಿಯಿಂದ ಈರುಳ್ಳಿ, ಬೆಳ್ಳುಳ್ಳಿ ಆವಕ ಮಾಡಿಕೊಳ್ಳಲಾಗುತ್ತಿದೆ. ಗ್ರಾಹಕರು ತಮಗೆ ಎಷ್ಟು ಬೇಕೋ ಅಷ್ಟು ಖರೀದಿಸುತ್ತಿದ್ದಾರೆ.

*ಪ್ರಶಾಂತ ನಿಂಗಪ್ಪಗೌಡ್ರ, ತರಕಾರಿ ವ್ಯಾಪಾರಸ್ಥರು

ಬೀನ್ಸ್‌, ಮೆಣಸಿನಕಾಯಿ ಬೆಲೆ ಏರಿಕೆ..
ಈ ಹಿಂದೆ ಬೀನ್ಸ್‌ ಕೆಜಿಗೆ 40-50ರೂ.ಗೆ ದೊರೆಯುತ್ತಿತ್ತು ಈಗ ಬಲು ದುಬಾರಿ ಪ್ರತಿ ಕೆಜಿಗೆ 180-200ರೂ.ಗೆ ಮಾರಾಟ ಮಾಡಲಾಗುತ್ತಿದೆ. ಜತೆಗೆ 40ರೂ. ಇದ್ದ ಹಸಿಮೆಣಸಿನಕಾಯಿ ಬೆಲೆ ಕೂಡ ಕೆಜಿಗೆ 100-120ರೂ. ಏರಿಕೆಯಾಗಿದೆ. ಗ್ರಾಹಕರ ಜೇಬಿಗೆ ಬಿಸಿ ಮುಟ್ಟಿಸುತ್ತಿದೆ.

ಟಾಪ್ ನ್ಯೂಸ್

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

B. Y. Vijayendra ಹಿಂದೂಗಳ ತೇಜೋವಧೆ ಮಾಡಿರುವ ರಾಹುಲ್‌ ಕ್ಷಮೆ ಕೇಳಲಿ

B. Y. Vijayendra ಹಿಂದೂಗಳ ತೇಜೋವಧೆ ಮಾಡಿರುವ ರಾಹುಲ್‌ ಕ್ಷಮೆ ಕೇಳಲಿ

5-sulya

Crime: ಸುಳ್ಯ ಭಾಗದ ಅಪರಾಧ ಸುದ್ದಿಗಳು

Charmadi Ghat ಕಸ ಎಸೆದ ಚಾಲಕನಿಗೆ ಕೇಸ್; ಚಾಲಕನಿಂದಲೇ ಕಸ ತೆರವು

Charmadi Ghat ಕಸ ಎಸೆದ ಚಾಲಕನಿಗೆ ಕೇಸ್; ಚಾಲಕನಿಂದಲೇ ಕಸ ತೆರವು

vijayapura

Vijayapura; ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ಹಲವರು ನಾಪತ್ತೆ, ಓರ್ವನ ಶವ ಪತ್ತೆ

Krishna-Byregowda

DK, Udupi: ಕಾಲು ಸಂಕಗಳ ಅಭಿವೃದ್ಧಿಗೆ ಕ್ರಿಯಾ ಯೋಜನೆ: ಕೃಷ್ಣ ಭೈರೇಗೌಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Haveri

Haveri: ಭೀಕರ ರಸ್ತೆ ಅಪಘಾತ; 13 ಜನರು ಸಾವು

1-saa

Haveri; ಕರ್ಜಗಿ ಕಾರಹುಣ್ಣಿಮೆಯಲ್ಲಿ ಬಂಡಿ ಹರಿದು ವ್ಯಕ್ತಿ ದುರ್ಮರಣ

ರಾಣಿಬೆನ್ನೂರ: ಭಾರತ ವಿಶ್ವಕ್ಕೆ ಕೊಟ್ಟ ದೊಡ್ಡ ಪರಂಪರೆ ಯೋಗ-ಪ್ರಕಾಶಾನಂದ ಮಹಾರಾಜ

ರಾಣಿಬೆನ್ನೂರ: ಭಾರತ ವಿಶ್ವಕ್ಕೆ ಕೊಟ್ಟ ದೊಡ್ಡ ಪರಂಪರೆ ಯೋಗ-ಪ್ರಕಾಶಾನಂದ ಮಹಾರಾಜ

Haveri; ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ?: ಬೊಮ್ಮಾಯಿ

Haveri; ಜನರನ್ನು ಸಂಕಷ್ಟಕ್ಕೆ ನೂಕಿ ಅದ್ಯಾವ ಅಭಿವೃದ್ಧಿ ಮಾಡುತ್ತಾರೆ?: ಬೊಮ್ಮಾಯಿ

crime (2)

Haveri ; ಮಚ್ಚಿನಿಂದ ಹಲ್ಲೆ ನಡೆಸಿ ಯುವಕನ ಕೊಲೆ ಯತ್ನ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

DK Shivakumar ಚೇರ್‌ ಖಾಲಿ ಇರುವುದಕ್ಕೆ ನಾನು ಬಂದು ಕೂತಿದ್ದೇನೆ

Chirathe

Hunasuru: ಹಬ್ಬನಕುಪ್ಪೆಯಲ್ಲಿ ಬೋನಿಗೆ ಬಿದ್ದ ಚಿರತೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

HD Revanna ಒಂದು ತಿಂಗಳಿಂದ ದೇವೇಗೌಡರು ನೋವಿನಲ್ಲೇ ಇದ್ದಾರೆ

B. Y. Vijayendra ಹಿಂದೂಗಳ ತೇಜೋವಧೆ ಮಾಡಿರುವ ರಾಹುಲ್‌ ಕ್ಷಮೆ ಕೇಳಲಿ

B. Y. Vijayendra ಹಿಂದೂಗಳ ತೇಜೋವಧೆ ಮಾಡಿರುವ ರಾಹುಲ್‌ ಕ್ಷಮೆ ಕೇಳಲಿ

5-sulya

Crime: ಸುಳ್ಯ ಭಾಗದ ಅಪರಾಧ ಸುದ್ದಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.