ಶಂಕರರ ಭಾಷ್ಯದಲ್ಲಿದೆ ಉಪನಿಷತ್ತಿನ ವಾಣಿ: ಶ್ರೀ ವೀರೇಶಾನಂದ ಸ್ವಾಮೀಜಿ
Team Udayavani, May 13, 2024, 5:37 PM IST
■ ಉದಯವಾಣಿ ಸಮಾಚಾರ
ಶಿರಸಿ: ಉಪನಿಷತ್ತಿನ ವಾಣಿ ಶಂಕರರ ಭಾಷ್ಯಗಳಲ್ಲಿ ಇದೆ ಎಂದು ಬೆಂಗಳೂರು ಶ್ರೀರಾಮಕೃಷ್ಣ ಮಠದ ಶ್ರೀ ವೀರೇಶಾನಂದ ಸ್ವಾಮೀಜಿ ನುಡಿದರು. ಭಾನುವಾರ ನಗರದ ಯೋಗ ಮಂದಿರದಲ್ಲಿ ಸೋಂದಾ ಸ್ವರ್ಣವಲ್ಲೀ ಶ್ರೀ ಸರ್ವಜ್ಞೆàಂದ್ರ
ಪ್ರತಿಷ್ಠಾನದಿಂದ ನಡೆದ ಶಂಕರ ಜಯಂತಿ ದಾರ್ಶನಿಕರ ದಿನ ಕಾರ್ಯಕ್ರಮದ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು.
ಉಪನಿಷತ್ತುಗಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿದ್ದರೂ ಶಂಕರರ ವಾಣಿಗಳಲ್ಲಿ ಉಪನಿಷತ್ತಿನ ಮಾರ್ದನಿ ಇದೆ. ಉಪನಿಷತ್ತುಗಳ ಮರ್ಮ ತಿಳಿದು ಭಾಷ್ಯಗಳಲ್ಲಿ ಶಂಕರರು ಹೇಳಿದ್ದಾರೆ ಎಂದ ಅವರು, ಇಡೀ ಪ್ರಪಂಚವೇ
ಚೈತನ್ಯಮಯವಾಗಿರುವಂತದ್ದು ಎನ್ನುವ ಬ್ರಹ್ಮವಿದ್ಯೆಯನ್ನು ಶಂಕರ ಭಗವತ್ಪಾದರು ಉಪದೇಶ ಮಾಡಿದ್ದಾರೆ ಎಂದರು.
ಉಪನಿಷತ್ತಿನ ಋಷಿಗಳೇ ಶಂಕರರ ಅವತಾರದಲ್ಲಿ ಬಂದು ನಮಗೆ ಉನ್ನತ ತತ್ವವನ್ನು ಕೊಟ್ಟಿದ್ದಾರೆ. ಈ ಬ್ರಹ್ಮವಿದ್ಯೆ ಎಲ್ಲ ಮತಗಳ ಆಚೆಯಿರುವ, ಎಲ್ಲ ಸಿದ್ಧಾಂತ ಮೀರಿರುವಂತದ್ದು ಎಂದ ಅವರು, ಶಂಕರ ಭಗತ್ಪಾದರು ಇಡೀ ವಿಶ್ವದಲ್ಲೇ ಶ್ರೇಷ್ಠ ದಾರ್ಶನಿಕರು. ಅವರು ಶಿವಾಂಶ ಸಂಭೂತರಷ್ಟೇ ಅಲ್ಲ ಪರಬ್ರಹ್ಮ ಸಂಭೂತರು, ಬ್ರಹ್ಮಚೈತನ್ಯ ಆವಿರ್ಭಾವವಾದವರೂ ಆಗಿದ್ದವರು. ಸಾನ್ನಿಧ್ಯ ನೀಡಿದ್ದ ಸೋಂದಾ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಆಶೀರ್ವಚನ ನುಡಿದು, ಶಂಕರರ ಕಾಲಘಟ್ಟದಲ್ಲಿ ಬ್ರಹ್ಮಚರ್ಯಾಶ್ರಮದಿಂದ ಸನ್ಯಾಶ್ರಮಕ್ಕೆ ಹೋಗುವ ರೂಢಿಯನ್ನು ಮಹತ್ವ ಕೊಟ್ಟು ಬೆಳೆಸಿದ್ದಾರೆ. ಅವರ ಶಿಷ್ಯರಲ್ಲಿ ಹೆಚ್ಚಿನವರು ಹೀಗೆ ಸನ್ಯಾಶ್ರಮಕ್ಕೆ ಬಂದಿದ್ದಾರೆ.
ಬ್ರಹ್ಮಚಾರಿಗೆ ಜೀವನ ಪೂರ್ವ ವಯಸ್ಸಿನಲ್ಲಿಯೇ ಜೀವನದ ಲಕ್ಷ್ಯ ದ ಬಗ್ಗೆ ಅರಿವು ಬಂದಿರಬೇಕು. ಐಹಿಕ ಭೋಗ ನನ್ನ ವಿಷಯವಲ್ಲ ನನ್ನ ಗುರಿ ಬೇರೆಯದೇ ಇದೆ ಎಂದು ಸಣ್ಣ ವಯಸ್ಸಿನಲ್ಲೇ ಜಾಗೃತಿ ಬಂದಿರಬೇಕು ಎಂದು ಈ ರೂಢಿ ಬೆಳೆಸಿದರು ಎಂದರು. ಈ ವೇಳೆ ಶಕಟಪುರಂ ಸಂಸ್ಥಾನದ ಆಸ್ಥಾನ ವಿದ್ವಾನ್ ವಿದ್ಯಾಭೂಷಣ ಮಧುಸೂದನ ಶಾಸ್ತ್ರಿ ಹಂಪಿಹೊಳಿ ಅವರಿಗೆ ಸಾಧನಾ ಶಂಕರ ಪ್ರಶಸ್ತಿಯನ್ನು ಸ್ವರ್ಣವಲ್ಲೀ ಶ್ರೀಗಳು ಪ್ರದಾನ ಮಾಡಿದರು.
ಪ್ರಶಸ್ತಿ ಸ್ವೀಕರಿಸಿದ ಮಧುಸೂದನ ಶಾಸ್ತ್ರಿ ಮಾತನಾಡಿ, ವೇದಾಂತದ ಸಿದ್ಧಾಂತ ತತ್ವವನ್ನು ಜನರಿಗೆ ತಿಳಿಸಲೆಂದೆ ಶಂಕರ ಭಗವತ್ಪಾದರ ಅವತಾರದ ಉದ್ದೇಶವಾಗಿತ್ತು. ಈ ಮೂಲಕ ಅಜ್ಞಾನ, ಅಂಧಕಾರದಲ್ಲಿ ಮುಳುಗಿದ ಜನರ ರಕ್ಷಣೆ ಮಾಡುವುದಾಗಿತ್ತು. ಭರತ ಖಂಡದಲ್ಲಿ ಏಕತೆಗೆ ಧಕ್ಕೆ ಬರುವ ಸ್ಥಿತಿಯಿತ್ತು. ಸಮಗ್ರತೆ ಅಗತ್ಯತೆ ಇತ್ತು. ಶಂಕರರು ಭರತ ಖಂಡದಲ್ಲಿ ಓಡಾಡಿ ಸಮನ್ವಯತೆ ಸಾಧಿಸಿದರಲ್ಲದೇ ವಿವಿಧತೆಯಲ್ಲಿ ಏಕತೆ ತರುವ ಕೆಲಸ ಮಾಡಿದರು. ದೀರ್ಘಾಯುಷ್ಯದಲ್ಲಿ ಮಾಡುವ ಕೆಲಸವನ್ನು ಕೇವಲ 32 ವರ್ಷದಲ್ಲಿ ಮಾಡಿದರು. ಅವರು ವಿದ್ವಾಂಸ, ತತ್ವಜ್ಞಾನಿ, ಕವಿ ಅಷ್ಟೆ ಅಲ್ಲ
ಮೇಧಾವಿ ತತ್ವಜ್ಞಾನಿ, ಸಂತರೂ ಆಗಿದ್ದರು ಎಂದರು.
ಸ್ವರ್ಣವಲ್ಲೀ ಮಹಾ ಸಂಸ್ಥಾನದ ಕಿರಿಯ ಸ್ವಾಮೀಜಿ ಶ್ರೀಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯ ನೀಡಿದ್ದರು.
ಎಸ್.ಎನ್. ಭಟ್ಟ ಉಪಾಧ್ಯ ಸ್ವಾಗತಿಸಿದರು. ಶಂಕರ ಭಟ್ಟ ಉಂಚಳ್ಳಿ ನಿರೂಪಿಸಿದರು. ನಂತರ ಮಾತೆಯರು ಪಾಂಡುರಂಗಾಷ್ಟಕ ಪಠಿಸಿದರು.
ಅದ್ವೈತ ಹಾಗೂ ಶಂಕರರದ್ದು ಅವಿನಾಭಾವ ಸಂಬಂಧ. ಶಂಕರಾಚಾರ್ಯರು ಎಂದು ಅದ್ವೈತ ಭಾವವಾಗಿತ್ತು. ಅವರದ್ದು ಸಮನ್ವಯತೆ ತತ್ವ, ವ್ಯಕ್ತಿತ್ವವಾಗಿತ್ತು. ದೊಡ್ಡ ತತ್ವಶಾಸ್ತ್ರಜ್ಞರಾಗಿದ್ದರು. ಉತ್ತಮ ಭೋದಕರಾಗಿದ್ದರು. ಮಹಾನ್ ಭಕ್ತರಾಗಿದ್ದರು, ಸಾಹಿತಿಯಾಗಿದ್ದರು. ಸುಲಲೀತವಾಗಿ ಪ್ರಸನ್ನ ಗಂಭೀರವಾದ ಭಾಷೆಯಲ್ಲಿ ಅದ್ವೈತವನ್ನು ನೀಡಿದ್ದಾರೆ.
*ಶ್ರೀವೀರೇಶಾನಂದ ಸ್ವಾಮೀಜಿ,
ಶ್ರೀ ರಾಮಕೃಷ್ಣ ಮಠ, ಬೆಂಗಳೂರು
ಜಗತ್ತಿನ ಮೂಲ ವಸ್ತು ಯಾವುದೋ ಅದೇ ಜೀವದ ಮೂಲವೂ ಹೌದು. ಅದುವೇ ಅದ್ವೈತ. ಇದನ್ನು ಶಂಕರರು ಸಾಕಷ್ಟು
ಕಡೆಗಳಲ್ಲಿ ಹೇಳಿದ್ದಾರೆ.
ಶ್ರೀ ಗಂಗಾಧರೇಂದ್ರ ಸರಸ್ವತೀ
ಮಹಾ ಸ್ವಾಮೀಜಿ, ಸ್ವರ್ಣವಲ್ಲೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.