Italian Open: ನೊವಾಕ್ ಜೊಕೋವಿಕ್ಗೆ ಸೋಲಿನ ಆಘಾತ
Team Udayavani, May 14, 2024, 12:07 AM IST
ರೋಮ್: ಇಟಾಲಿಯನ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ನೊವಾಕ್ ಜೊಕೋವಿಕ್ ಅವರು ರಫೆಲ್ ನಡಾಲ್ ಹಾದಿಯನ್ನು ಹಿಡಿದಿದ್ದಾರೆ. 3ನೇ ಸುತ್ತಿನಲ್ಲಿ ಸೋತು ಕೂಟದಿಂದ ಹೊರಬಿದ್ದಿದ್ದಾರೆ.
ಜೊಕೋವಿಕ್ ತಮ್ಮ ಮಾಸ್ಟರ್ 1000 ಪ್ರಶಸ್ತಿಯ ದಾಖಲೆಯನ್ನು 41ಕ್ಕೆ ವಿಸ್ತರಿಸುವ ಯೋಜನೆಯಲ್ಲಿದ್ದರು. ಆದರೆ ಚಿಲಿಯ ಅಲೆಕ್ಸಾಂಡ್ರೊ ಟ್ಯಾಬಿಲೊ ಇದಕ್ಕೆ ಅಡ್ಡಗಾಲಿಕ್ಕಿದರು. 32ನೇ ರ್ಯಾಂಕಿಂಗ್ ಆಟಗಾರನಾಗಿರುವ ಟ್ಯಾಬಿಲೊ 6-2, 6-3 ನೇರ ಸೆಟ್ಗಳಿಂದ ಜೊಕೋ ಆಟಕ್ಕೆ ತೆರೆ ಎಳೆ ದರು. ಇದು ಟಾಪ್-10 ಆಟಗಾರನ ವಿರುದ್ಧ ಟ್ಯಾಬಿಲೊ ಸಾಧಿಸಿದ ಮೊದಲ ಗೆಲುವು.
ಜೊಕೋಗೆ ಎದುರಾದ ಈ ಸೋಲು ಮುಂಬರುವ ಫ್ರೆಂಚ್ ಓಪನ್ ತಯಾರಿಗೆ ಹಿನ್ನಡೆಯಾಗಿದೆ. ಆದರೆ ಪ್ಯಾರಿಸ್ನಲ್ಲಿ ವಿಶ್ವದ ನಂ. 2 ಆಟಗಾರ ಜಾನಿಕ್ ಸಿನ್ನರ್, ನಂ.3 ಟೆನಿಸಿಗ ಕಾರ್ಲೋಸ್ ಅಲ್ಕರಾಜ್ ಆಡದಿರುವುದು ಹಾಲಿ ಚಾಂಪಿಯನ್ ಜೊಕೋ ಮಾರ್ಗವನ್ನು ಸುಗಮ ಗೊಳಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.