Udupi; ಆಟೋ ರಿಕ್ಷಾ ಪಲ್ಟಿ: ಮೂವರಿಗೆ ಗಾಯ
Team Udayavani, May 14, 2024, 12:55 AM IST
ಉಡುಪಿ: ಆಟೋರಿಕ್ಷಾ ಪಲ್ಟಿಯಾಗಿ ರಿಕ್ಷಾದಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಉಡುಪಿಯ ಲೋನ್ಜಕೀರ್ ಹುಸೇನ್ ಅವರು ರಿಕ್ಷಾದಲ್ಲಿ ಅಂಬಾಗಿಲು ಕಡೆಯಿಂದ ಅಂಬಲಪಾಡಿ ಕಡೆಗೆ ಹೋಗುತ್ತಿರುವಾಗ ಚಾಲಕ ಸುಧಾಕರ ಅವರು ರಿಕ್ಷಾವನ್ನು ಅತಿವೇಗದಿಂದ ಚಲಾಯಿಸಿದ ಪರಿಣಾಮ ಡಿವೈಡರ್‌ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿದೆ.
ಪರಿಣಾಮವಾಗಿ ರಿಕ್ಷಾದಲ್ಲಿದ್ದ ಮಹಮ್ಮದ್ ರಯಾನ್ ಹುಸೇನ್, ರಪಾನ್ ಜಾಕೀರ್ ಹುಸೇನ್ ಹಾಗೂ ಲೋನ್ಜಕೀರ್ ಹುಸೇನ್ ಗಾಯಗೊಂಡಿದ್ದಾರೆ.
ಬಸ್ ಢಿಕ್ಕಿ: ಪಾದಚಾರಿ ಸಾವು
ಉಡುಪಿ: ಬಸ್ ಢಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ಸಂತೆಕಟ್ಟೆಯಲ್ಲಿ ನಡೆದಿದೆ. ಉಡುಪಿಯ ಜಯರಾಮ್ (67) ಮೃತಪಟ್ಟವರು.
ಉಡುಪಿ ಕಡೆಯಿಂದ ಸಂತೆಕಟ್ಟೆ ಕಡೆಗೆ ವಾಹನಗಳು ಏಕಮುಖವಾಗಿ ಸಂಚರಿಸುತ್ತಿರುವ ರಸ್ತೆಯಲ್ಲಿ ರಸ್ತೆ ದಾಟುತ್ತಿರುವಾಗ ಕೆಎಸ್ಸಾರ್ಟಿಸಿ ಬಸ್ ಚಾಲಕ ಬಸ್ ಅನ್ನು ಅತೀ ವೇಗದಿಂದ ಚಲಾಯಿಸಿದ ಪರಿಣಾಮ ಜಯರಾಮ್ ಅವರಿಗೆ ಢಿಕ್ಕಿ ಹೊಡೆದಿದ್ದಾನೆ.
ಪರಿಣಾಮ ಜಯರಾಮ್ ಅವರು ರಸ್ತೆಗೆ ಬಿದ್ದು, ತಲೆಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಕೂಡಲೇ ಅವರನ್ನು ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಪರೀಕ್ಷಿಸಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಸಿದು ಬಿದ್ದ ವ್ಯಕ್ತಿ ಆಸ್ಪತ್ರೆಗೆ ದಾಖಲು
ಉಡುಪಿ: ಕುಸಿದು ಬಿದ್ದು ಅಸಹಾಯಕ ಸ್ಥಿತಿ ಯಲ್ಲಿದ್ದ ವ್ಯಕ್ತಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಸೋಮವಾರ ರಕ್ಷಿಸಿ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ವ್ಯಕ್ತಿ ಪೇಜಾವರ ಮಠದ ಶೌಚಾಲಯಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ. ವಿಷಯ ತಿಳಿದ ಮಠದ ಮೇಲ್ವಿಚಾರಕರು ನಿತ್ಯಾನಂದರಿಗೆ ಮಾಹಿತಿ ನೀಡಿದ್ದರು. ಕಾರ್ಯಾಚರಣೆಗೆ ಪೇಜಾವರ ಸ್ವಾಮೀಜಿಯವರ ಅಂಗರಕ್ಷಕರು ಸಹಕರಿಸಿದ್ದಾರೆ. ಅಸ್ವಸ್ಥನ ವಿಳಾಸ ತಿಳಿದುಬಂದಿಲ್ಲ. ಯಾತ್ರಾರ್ಥಿ ಇರಬಹುದೆಂದು ಶಂಕಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Udupi: ಗೀತಾರ್ಥ ಚಿಂತನೆ-94: ದುಗುಡಗಳನ್ನು ಕೇಳುವುದೂ ಚಿಕಿತ್ಸೆ
Udupi: ನಿದ್ರೆ ಮಾತ್ರೆ ಸೇವಿಸಿ ಅಸ್ವಸ್ಥಗೊಂಡು ವ್ಯಕ್ತಿ ಸಾವು
MUST WATCH
ಹೊಸ ಸೇರ್ಪಡೆ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.