ಹೆಚ್ಚು ಟೀ, ಕಾಫಿ ಕುಡಿದರೆ ರಕ್ತಹೀನತೆ ಬಾಧೆ ಗ್ಯಾರಂಟಿ!
Team Udayavani, May 14, 2024, 9:39 AM IST
ನವದೆಹಲಿ: ಟೀ, ಕಾಫಿ ಲವರ್ಸ್ಗೆ ಇದು ಬೇಸರ ತರಿಸುವ ಸುದ್ದಿ. ನೀವು ಊಟವಾದ ಬಳಿಕ ಅಥವಾ ಮೊದಲು ಟೀ, ಕಾಫಿ ಸೇವಿಸುತ್ತಿದ್ದರೆ, ಈ ಕೂಡಲೇ ಆ ಅಭ್ಯಾಸವನ್ನು ಬಿಟ್ಟು ಬಿಡಿ ಎನ್ನುತ್ತಿದೆ ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ(ಐಸಿಎಂಆರ್) ಬಿಡುಗಡೆ ಮಾಡಿರುವ “ಭಾರತೀಯರಿಗೆ ಆಹಾರ ಕ್ರಮ ಮಾರ್ಗದರ್ಶಿ’.
ಊಟಕ್ಕಿಂತ ಮೊದಲ ಅಥವಾ 1 ಗಂಟೆ ನಂತರ ಟೀ ಅಥವಾ ಕಾಫಿ ಸೇವಿಸಬೇಕು. ಯಾಕೆಂದರೆ, ಈ ಪಾನೀಯಗಳು ಆಹಾರದಲ್ಲಿನ ಕಬ್ಬಿಣಾಂಶವನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ. ರಕ್ತ ಉತ್ಪಾದನೆಗೆ ಕಬ್ಬಿಣಾಂಶ ಅತ್ಯಗತ್ಯ. ದೇಹದ ಶೇ.70ರಷ್ಟು ಕಬ್ಬಿಣಾಂಶವು ಹೀಮೊಗ್ಲೋಬಿನ್ ಕೆಂಪು ರಕ್ತಕಣಗಳಲ್ಲಿ ಇರುತ್ತದೆ. ಟೀ ಅಥವಾ ಕಾಫಿ ಕುಡಿಯುವುದರಿಂದ ಕಬ್ಬಿಣಾಂಶ ಕೊರತೆಯಾಗಿ ರಕ್ತಹೀನತೆಗೆ ಕಾರಣವಾಗುತ್ತದೆ ಎಂದು ಐಸಿಎಂಆರ್ ತಿಳಿಸಿದೆ.
ಅನಾರೋಗ್ಯಪೀಡಿತರಿಗೆ ಎಳ ನೀರು ಆರೋಗ್ಯಕ್ಕೆ ಒಳ್ಳೆಯದು ಎಂದು ಕುಡಿಸುತ್ತಾರೆ. ಆದರೆ, ಹೈಪರ್ ಕಲೆಮಿಯಾ (ಕಿಡ್ನಿ ಮತ್ತು ಹೃದಯ ಸಂಬಂಧಿ ರೋಗ)ದಿಂದ ಬಳಲುತ್ತಿರುವವರು ಎಳನೀರು ಕುಡಿಯಬಾರದು ಎಂದು ಐಸಿಎಂಆರ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.