Art of Living ಗ್ಲೋಬಲ್ ಹ್ಯಾಪಿನೆಸ್ ಕಾರ್ಯಕ್ರಮದಲ್ಲಿ 87 ದೇಶಗಳು ಭಾಗಿ
ಶ್ರೀ ರವಿಶಂಕರರ 68 ನೆಯ ಹುಟ್ಟುಹಬ್ಬ ಆಚರಣೆ
Team Udayavani, May 15, 2024, 11:57 AM IST
ಬೆಂಗಳೂರು: 87 ದೇಶಗಳ ಲಕ್ಷಾಂತರ ಜನರು ಉತ್ತಮ ಮಾನಸಿಕ ಆರೋಗ್ಯ ಮತ್ತು ಸಂತೋಷದ ಪಯಣವನ್ನು ಆರಂಭಿಸಲು ಆರ್ಟ್ ಆಫ್ ಲಿವಿಂಗ್ ನಿಂದ ಆಯೋಜಿಸಲ್ಪಟ್ಟಿದ್ದ ಗ್ಲೋಬಲ್ ಹ್ಯಾಪಿನೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶ್ರೀ ರವಿಶಂಕರರ 68ನೆಯ ಹುಟ್ಟು ಹಬ್ಬದ ಸಂಭ್ರಮವನ್ನೂ ಈ ಸಂದರ್ಭದಲ್ಲಿ ಆಚರಿಸಲಾಯಿತು.
ಭಾರತದಲ್ಲಿ ಲಕ್ಷಾಂತರ ಭಕ್ತರು ಈ ವಿಶೇಷ ದಿನವನ್ನು ಸೇವೆಯಲ್ಲಿ, ಸಂಗೀತದಲ್ಲಿ ಮತ್ತು ತಮ್ಮ ಸಮುದಾಯಗಳಲ್ಲಿ ಸಂತೋಷವನ್ನು ಹಂಚುವುದರಲ್ಲಿ ಕಳೆದರು. ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ನೆರೆದಿದ್ದ ಸಾವಿರಾರು ಜನರನ್ನು ಉದ್ದೇಶಿಸಿ ಮಾತನಾಡಿದ ರವಿಶಂಕರ ಗುರೂಜಿ ” ಜ್ಞಾನದಲ್ಲಿ ಮುಳುಗಿದ್ದಾಗ ಪ್ರತಿದಿನವೂ ಸಂತೋಷಮಯವಾದ ದಿನವೇ. ನಮ್ಮ ಜೀವನವು ಸೇವೆ, ಸತ್ಸಂಗ, ಸಾಧನಕ್ಕೆ ಮುಡುಪಾಗಿದ್ದಾಗ ಪ್ರತಿ ದಿನವೂ ಒಂದು ಸಂಭ್ರಮವೇ ಎಂದು ಕಂಡುಕೊಳ್ಳುತ್ತೇವೆ. ಎಲ್ಲರಿಗೂ ಸಂತೋಷವನ್ನು ತನ್ನಿ. ನಾನು ಇಲ್ಲಿ ಎಲ್ಲರಿಗೂ ಸಂತೋಷವನ್ನು ತರಲು ಇಲ್ಲಿದ್ದೇನೆ ಎಂಬ ಒಂದು ಆಲೋಚನೆಯೇ ಸಾಕು, ನಿಮ್ಮ ದಾರಿಯಲ್ಲಿರುವ ಅಡಚಣೆಗಳು ದೂರವಾಗಲು ಮತ್ತು ನಿಮಗೆ ಹೇಗೆ ಬೇಕೋ ಹಾಗೆ ವಿಷಯ ನಡೆಯಲು” ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಸಂತೋಷವಾಗಿರುವ, ಮನಸ್ಸು ತಿಳಿಯಾಗಿ, ಸ್ಪಷ್ಟವಾಗಿರುವ, ನೋವು ಮತ್ತು ಒತ್ತಡ ರಹಿತರಾಗಿರುವರೆಂದು, ಕೇವಲ ನಾಲ್ಕು ದಿವಸಗಳ ಪ್ರಾಣಾಯಾಮ, ಯೋಗ ಮತ್ತು ಸುದರ್ಶನ ಕ್ರಿಯೆಯ ಅಭ್ಯಾಸದಿಂದ ಅನುಭವಿಸಿದ್ದರಲ್ಲದೆ, ಕೆಲವು ಆಳವಾದ ಒಳನೋಟವನ್ನೂ ಪಡೆದುಕೊಂಡರೆಂದರು.
ಆರ್ಟ್ ಆಫ್ ಲಿವಿಂಗ್ ನ ಶಾಲೆಗಳಿಂದ ಗಿಡಗಳನ್ನು ನೆಡಲಾಯಿತು. ರಕ್ತದಾನದ ಶಿಬಿರಗಳನ್ನು, ವೈದ್ಯಕೀಯ ಶಿಬಿರಗಳನ್ನು ಮತ್ತು ಆಯುಷ್ಯ ಹೋಮಗಳನ್ನು ಸಾವಿರಾರು ಆರ್ಟ್ ಆಫ್ ಲಿವಿಂಗ್ ನ ಕೇಂದ್ರ ಗಳಲ್ಲಿ ನಡೆಸಲಾಯಾತು. ಮಹಾರಾಷ್ಟ್ರದ ಸತಾರ ಜಿಲ್ಲೆಯ 68 ಹಳ್ಳಿಗಳಲ್ಲಿ ಆರ್ಟ್ ಆಫ್ ಲಿವಿಂಗ್ ಹಾಗೂ ಸಹ್ಯಾದ್ರಿ ದೇವ್ ರಾಯ್ ( ಪ್ರಸಿದ್ಧ ನಟರಾದ ಸಯ್ಯಾಜಿ ಶಿಂಧೆಯವರ ಯೋಜನೆ) ಜಂಟಿಯಾಗಿ ಅಪಾರ ಸಂಖ್ಯೆಯಲ್ಲಿ ಗಿಡಗಳನ್ನು ನೆಡಲಾಯಿತು.ರಾಯ್ಪುರ್ ನ ಹೊಸ ಧ್ಯಾನದ ಕೇಂದ್ರವಾದ ಗ್ಯಾನ್ ಕ್ಷೇತ್ರವನ್ನು ಗುರೂಜಿ ವರ್ಚುಯ ಲ್ ಆಗಿ ಉದ್ಘಾಟಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
IPL: ಇನ್ನು ಮೂರು ಸೀಸನ್ ಐಪಿಎಲ್ ಗೆ ಈ ದೇಶಗಳ ಆಟಗಾರರು ಸಂಪೂರ್ಣ ಲಭ್ಯ
Parliament; ಪ್ರಿಯಾಂಕಾ ಗಾಂಧಿ- ರಾಹುಲ್ ಜತೆ ಸೇರಿ ಬಿಜೆಪಿ ನಿದ್ದೆಗೆಡಿಸುತ್ತಾರೆ :ಪೈಲಟ್
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.