JDS MP ಪ್ರಜ್ವಲ್ ಎಲ್ಲಿ? ಕುಟುಂಬದವರು ಸಹಿತ ಯಾರಿಗೂ ಗೊತ್ತಿಲ್ಲ: ಜಿ.ಟಿ.ದೇವೇಗೌಡ
ನನಗೇನೂ ಗೊತ್ತಿಲ್ಲ, ನನ್ನನ್ನೇನೂ ಕೇಳಬೇಡಿ: ಎಚ್.ಡಿ. ರೇವಣ್ಣ
Team Udayavani, May 16, 2024, 7:15 AM IST
ಬೆಂಗಳೂರು: ಅತ್ಯಾಚಾರ ಆರೋಪ ಎದುರಿಸುತ್ತಿರುವ ಜೆಡಿಎಸ್ ಸಂಸದ ಪ್ರಜ್ವಲ್‌ಗಾಗಿ ಎಸ್‌ಐಟಿ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದರೆ, ಪ್ರಜ್ವಲ್ ಬಗ್ಗೆ ಏನೂ ಗೊತ್ತಿಲ್ಲ ಎಂದು ಮಾಜಿ ಸಚಿವ ರೇವಣ್ಣ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರು ಹೇಳಿದ್ದಾರೆ.
ಇದೆಲ್ಲದರ ನಡುವೆ “ಪ್ರಜ್ಞಾವಂತ ನಾಗರಿಕರು’ ಎನ್ನುವ ಹೆಸರಿನಲ್ಲಿ ಕೆಲವು ಸಾಹಿತಿಗಳು ಮುಖ್ಯಮಂತ್ರಿಗೆ ಪತ್ರ ಬರೆದು, ಪ್ರಜ್ವಲ್ ಬಂಧನಕ್ಕೆ ಆಗ್ರಹಿಸಿದ್ದಾರೆ.
ಆದರೆ ವಿದೇಶದಲ್ಲಿ ತಲೆಮರೆಸಿದ್ದಾರೆ ಎನ್ನಲಾಗುತ್ತಿರುವ ಪ್ರಜ್ವಲ್ ಆಗಾಗ ವಿಮಾನ ಪ್ರಯಾಣದ ಟಿಕೆಟ್ ಬುಕ್ ಮಾಡಿ ರದ್ದು ಪಡಿಸುತ್ತಿರುವುದು ಎಸ್‌ಐಟಿ ಅಧಿಕಾರಿಗಳಿಗೆ ತಲೆನೋವಾಗಿದೆ.
ಪ್ರಜ್ವಲ್ ಯಾವಾಗ ಬರುತ್ತಾರೋ ಗೊತ್ತಿಲ್ಲ
ಬುಧವಾರ ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ, ಎಸ್‌ಐಟಿ ಅಧಿಕಾರಿಗಳು ಬ್ಲೂಕಾರ್ನರ್ ನೋಟಿಸ್ ಕೊಟ್ಟಿದ್ದಾರೆ, ಪ್ರಜ್ವಲ್‌ನನ್ನು ಬಂಧಿಸುತ್ತಾರೆ ಎಂಬುದನ್ನು ಮಾಧ್ಯಮಗಳಲ್ಲಿ ಗಮನಿಸಿದ್ದೇವೆಯೇ ಹೊರತು ಪ್ರಜ್ವಲ್ ಯಾಕೆ ಹೋದರು? ಯಾವಾಗ ಬರುತ್ತಾರೆ ಇತ್ಯಾದಿ ಮಾಹಿತಿ ಇಲ್ಲ. ಅವರ ಕುಟುಂಬಕ್ಕೂ ಇಲ್ಲದ ಮಾಹಿತಿ ನಮಗೆ ಸಿಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ಯಾರ ಬಗ್ಗೆಯೂ ಗೊತ್ತಿಲ್ಲ: ರೇವಣ್ಣ
ತಮ್ಮ ವಕೀಲ ಸಿ.ವಿ.ನಾಗೇಶ್ ಅವರ ಬೆಂಗಳೂ ರಿನ ನಿವಾಸಕ್ಕೆ ಬುಧವಾರ ಭೇಟಿ ನೀಡಿ ಕೃತಜ್ಞತೆ ಹೇಳಿದ ರೇವಣ್ಣ, ನನಗೆ ನ್ಯಾಯಾಂಗದ ಮೇಲೆ ಗೌರವ ಹಾಗೂ ದೇವರ ಮೇಲೆ ನಂಬಿಕೆ ಇದೆ. ಪ್ರಕರಣ ನ್ಯಾಯಾಲಯದಲ್ಲಿ ಇದ್ದು, ಹೆಚ್ಚು ಮಾತನಾಡುವುದಿಲ್ಲ. ಆರೋಪಮುಕ್ತವಾಗಿ ಹೊರಬರುತ್ತೇನೆ ಎಂದಷ್ಟೇ ಹೇಳಿದರು. ಪ್ರಜ್ವಲ್ ಬಗ್ಗೆ ಕೇಳಿದಾಗ, “ನನಗೆ ಯಾರ ಬಗ್ಗೆಯೂ ಗೊತ್ತಿಲ್ಲ’ ಎನ್ನುತ್ತಾ ನಡೆದೇ ಬಿಟ್ಟರು.ಎಸ್‌ಐಟಿ ಅಧಿಕಾರಿಗಳು ಜರ್ಮನಿಯ ಕೆಲವು ಅಧಿಕಾರಿಗಳ ಜತೆಗೆ ಸಂಪರ್ಕ ಸಾಧಿಸಿದ್ದು, ಮ್ಯೂನಿಚ್ ವಿಮಾನ ನಿಲ್ದಾಣದಲ್ಲಿ ಪ್ರಜ್ವಲ್ ಕಾಣಿಸಿಕೊಂಡಿರಲಿಲ್ಲ ಎಂಬುದು ತಿಳಿದು ಬಂದಿದೆ.
ನಿನ್ನೆ ಕಾದಿರಿಸಿದ್ದ
ವಿಮಾನ ಟಿಕೆಟ್ ರದ್ದು
ಮೇ 15ರಂದು ಬೆಂಗಳೂರಿಗೆ ಬರಲು ಪ್ರಜ್ವಲ್ ಕಾದಿರಿಸಿದ್ದ ಟಿಕೆಟ್ ಮತ್ತೂಮ್ಮೆ ರದ್ದಾಗಿದೆ. ಹರಿಯಾಣದ ಟ್ರಾವೆಲ್ಸ್ ಒಂದರಿಂದ 3 ಲಕ್ಷ ರೂ. ಮೌಲ್ಯದ ಬ್ಯುಸಿನೆಸ್ ಕ್ಲಾಸ್ ಕೆಟಗರಿ ಸೀಟನ್ನು ಪ್ರಜ್ವಲ್ ಬುಕ್ ಮಾಡಿದ್ದರು. ಆದರೆ ವಿಮಾನ ನಿಲ್ದಾಣದತ್ತ ಪ್ರಜ್ವಲ್ ಸುಳಿಯಲೇ ಇಲ್ಲ. ಜರ್ಮನಿಯ ಮ್ಯೂನಿಚ್‌ನಿಂದ ಬೆಂಗಳೂರಿಗೆ ಬರುತ್ತಾರೆಂಬ ಸುಳಿವು ಸಿಕ್ಕಿದ ಹಿನ್ನೆಲೆಯಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಸ್‌ಐಟಿ ಅಧಿಕಾರಿ ಗಳು ಬುಧವಾರ ಬೆಳಗ್ಗಿನಿಂದಲೇ ಕಾದಿದ್ದರು. ಕೊನೆಗೆ ಅವರು ನಿರಾಸೆಯಿಂದಲೇ ಮರಳಬೇಕಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಬೀದರ್ ನಲ್ಲಿ ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಮೃತ್ಯು, ಮಹಿಳೆ ಗಂಭೀರ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ
Manipal: ಮಾಹೆಯ ಪ್ರಸನ್ನ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ
Manipal: ಡಾ| ಸಬೀಹ ಭೂಮಿಗೌಡ ಸಹಿತ ನಾಲ್ವರಿಗೆ ದತ್ತಿ ಪ್ರಶಸ್ತಿ
PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.