17 ಕೋಟಿ ರೂ. ವಿದ್ಯುತ್ ಬಿಲ್ ಕಂಡು ಮನೆ ಮಾಲೀಕನಿಗೆ ಶಾಕ್!
ಜೆಬಿ ಕಾವಲ್‌ನ ಕೃಷ್ಣಾನಂದನಗರ ಪೊಲೀಸ್ ಕ್ವಾರ್ಟರ್ಸ್ ಮನೆಗೆ ದುಬಾರಿ ವಿದ್ಯುತ್ ಬಿಲ್
Team Udayavani, May 16, 2024, 3:45 PM IST
ಬೆಂಗಳೂರು: ಸಾಮಾನ್ಯವಾಗಿ ಒಂದು ಮನೆಗೆ ಹೆಚ್ಚೆಂದರೆ ಸಾವಿರಾರು ರೂ. ವಿದ್ಯುತ್ ಬಿಲ್ ಬರಬಹುದು. ಆದರೆ, ಜೆಬಿ ಕಾವಲ್‌ನ ಕೃಷ್ಣಾನಂದ ನಗರ ಪೊಲೀಸ್ ಕ್ವಾರ್ಟರ್ಸ್ ಮನೆಯೊಂದಕ್ಕೆ ಬರೋಬ್ಬರಿ 17 ಕೋಟಿ ರೂ. ಕರೆಂಟ್ ಬಿಲ್ ಬಂದಿದ್ದು, ಇದನ್ನು ಕಂಡು ಮನೆ ಮಾಲೀಕರು ಶಾಕ್ ಆಗಿದ್ದಾರೆ. ತಾಂತ್ರಿಕ ದೋಷದಿಂದ 17 ಕೋಟಿ ರೂ. ಎಂದು ನಮೂದಾಗಿರಬಹುದು ಎನ್ನಲಾಗಿದೆ.
ಜೆಬಿ ಕಾವಲ್‌ನ ಕೃಷ್ಣಾನಂದ ನಗರ ಪೊಲೀಸ್ ಕ್ವಾರ್ಟರ್ಸ್ ಮನೆಗೆ ಮೇ 5ರಂದು ವಿದ್ಯುತ್ ಬಿಲ್ ನೀಡಲಾಗಿತ್ತು. ಬಿಲ್‌ನಲ್ಲಿ ಒಟ್ಟು 17,15,75,596 ಎಂದು ನಮೂದಿಸಲಾಗಿದೆ. ಇದು ಬೆಸ್ಕಾಂ ಮೀಟರ್ ತಾಂತ್ರಿಕ ಸಮಸ್ಯೆಯಿಂದ ಆಗಿರುವ ತಪ್ಪಾ ಅಥವಾ ಬೇರೇನಾದರೂ ಸಮಸ್ಯೆ ಆಗಿದೆಯಾ ಎಂಬ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಇನ್ನೂ ಸ್ಪಷ್ಟನೆ ಕೊಟ್ಟಿಲ್ಲ.
ನಗರದಲ್ಲಿರುವ ದೊಡ್ಡ ದೊಡ್ಡ ಕಾರ್ಖಾನೆಗಳಿಗೆ 1 ರಿಂದ 3 ಕೋಟಿ ರೂ. ವಿದ್ಯುತ್ ಬಿಲ್ ಬರುವುದು ಸಾಮಾನ್ಯ. ಪೊಲೀಸ್ ಕ್ವಾರ್ಟರ್ಸ್‌ನ ಮನೆಯೊಂದಕ್ಕೆ 17 ಕೋಟಿ ರೂ. ಬಿಲ್ ನೀಡಿರುವ ಬೆಸ್ಕಾಂ ಕ್ರಮದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 17 ಕೋಟಿ ರೂ. ಕರೆಂಟ್ ಬಿಲ್ ಕಂಡು ಇಲ್ಲಿನ ನಿವಾಸಿಗಳು ದಂಗಾಗಿದ್ದಾರೆ.
ಇಷ್ಟೊಂದು ವಿದ್ಯುತ್ ಬಿಲ್ ಬರುವುದಕ್ಕೆ ಸಾಧ್ಯವಿಲ್ಲ. ಅಷ್ಟು ವಿದ್ಯುತ್ ಬಳಸಿಯೇ ಇಲ್ಲ ಎಂದು ಇಲ್ಲಿನ ನಿವಾಸಿಗಳು ಅಚ್ಚರಿಗೊಂಡಿದ್ದಾರೆ. ಇದೀಗ, 17 ಕೋಟಿ ಬಿಲ್‌ನ ಚಿತ್ರಗಳು ಎಲ್ಲೆಡೆ ವೈರಲ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಿಲ್ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kundapura: ಹತ್ತೂರು ಸೇರುವ ಮುಳ್ಳಿಕಟ್ಟೆಗೆ ಬೇಕು ಬಸ್ ನಿಲ್ದಾಣ
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.