Hasan: ಪೆನ್ಡ್ರೈವ್ ಹಂಚಿದವರ ಪತ್ತೆಗೆ ಸಿಸಿ ಕೆಮರಾ ಪರಿಶೀಲನೆ
Team Udayavani, May 17, 2024, 6:45 AM IST
ಹಾಸನ: ಸಂಸದ ಪ್ರಜ್ವಲ್ಗೆ ಸಂಬಂಧಿಸಿದ್ದು ಎನ್ನಲಾದ ಅಶ್ಲೀಲ ವೀಡಿಯೋಗಳಿರುವ ಪೆನ್ಡ್ರೈವ್ ಹಂಚಿಕೆ ಆರೋಪದಡಿ ಜಿಲ್ಲೆಯ ಒಟ್ಟು 18 ಕಡೆ ಎಸ್ಐಟಿ ತಂಡ ನಡೆಸಿದೆ. ಈ ವೇಳೆ ಆರೋಪಿಗಳ ನಿವಾಸ ಹಾಗೂ ಕಚೇರಿಯಿಂದ ಪೆನ್ಡ್ರೈವ್, ಹಾರ್ಡ್ಡಿಸ್ಕ್, ಕಂಪ್ಯೂಟರ್ಗಳನ್ನು ವಶಪಡಿಸಿಕೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
7 ಪೆನ್ಡ್ರೈವ್, 6 ಹಾರ್ಡ್ಡಿಸ್ಕ್, 4 ಲ್ಯಾಪ್ಟಾಪ್, 3 ಡೆಸ್ಕ್ಟಾಪ್ಗ್ಳು ಸಹಿತ ಹಲವು ಸಿಸಿಕೆಮರಾಗಳನ್ನೂ ಎಸ್ಐಟಿ ತಂಡ ವಶಕ್ಕೆ ಪಡೆದುಕೊಂಡಿದೆ. ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಹಾರ್ಡ್ ಡಿಸ್ಕ್ ಗಳಲ್ಲಿ ವೀಡಿಯೋಗಳು ಸಂಗ್ರಹವಾಗಿದ್ದವೆ? ಸಂಗ್ರಹವಾಗಿದ್ದು ಡಿಲೀಟ್ ಆಗಿವೆಯೇ ಎಂಬುದರ ಬಗ್ಗೆ ಪರಿಶೀಲನೆಗೆ ಎಫ್ಎಸ್ಎಲ್ಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಮುಖ್ಯವಾಗಿ ಕೆಲವರ ಚಲನವಲನಗಳ ಬಗ್ಗೆ ಕೆಮರಾಗಳನ್ನು ಎಸ್ಐಟಿ ತಂಡ ಪರಿಶೀಲಿಸುತ್ತಿದೆ ಎನ್ನಲಾಗಿದ್ದು, ಮೊದಲು ಕಂಪ್ಯೂಟರ್ಗೆ ಕಾಪಿ ಮಾಡಿ ಬೇರೆ ಬೇರೆ ಮೊಬೈಲ್ಗಳಿಗೆ ಹಲವರು ಕಾಪಿ ಮಾಡಿಕೊಂಡು ಹೋಗಿರುವ ಮಾಹಿತಿ ಇದೆ. ಕಾಪಿ ಮಾಡಲು ಬಂದು ಹೋದವರ ಬಗ್ಗೆಯೂ ತನಿಖಾ ತಂಡ ಮಾಹಿತಿ ಕಲೆ ಹಾಕುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.