Miyazaki mango: ಶಂಕರಪುರದಲ್ಲಿ ವಿಶ್ವದ ದುಬಾರಿ ಮಾವಿನಹಣ್ಣು! 


Team Udayavani, May 17, 2024, 11:05 AM IST

7

ಕಟಪಾಡಿ: ಜಗತ್ತಿನ ಅತ್ಯಂತ ಮೌಲ್ಯಯುತ ಮತ್ತು ದುಬಾರಿ ಮಾವಿನ ಹಣ್ಣು ಎಂದೇ ಹೇಳಲಾದ ಜಪಾನ್‌ ಮೂಲದ ಮಿಯಾಝಕಿ ಮಾವಿನ ತಳಿ ಇದೀಗ ಕರಾವಳಿಯ ಮನೆಯೊಂದರ ತಾರಸಿಯಲ್ಲಿ ಬೆಳೆದಿದೆ. ತಾರಸಿ ಕೃಷಿ ಪ್ರಯೋಗದಲ್ಲಿ ಹೆಸರುವಾಸಿಯಾದ ಉಡುಪಿ ಜಿಲ್ಲೆಯ ಶಂಕರಪುರದ ಜೋಸೆಫ್ ಲೋಬೋ ಅವರ ತೋಟದಲ್ಲಿ ಈ ಮಾವು ಹಣ್ಣುಬಿಟ್ಟಿದೆ.

ಮಿಯಾಝಾಕಿ ಎನ್ನುವುದು ಜಪಾನ್‌ನ ವಿಶೇಷ ತಳಿ. ಇದನ್ನು ಅಲ್ಲಿ ಪಾಲಿಹೌಸ್‌ನಲ್ಲಿ ಹೀಟರ್‌ ಇಟ್ಟು ಅದಕ್ಕೆ ಬೇಕಾದ ವಾತಾವರಣ ಸೃಷ್ಟಿಸಿ ಬೆಳೆಸಲಾಗುತ್ತದೆ. ಇದು ಕಾಯಿಯ ಹಂತದಲ್ಲಿ ನೇರಳೆ ಬಣ್ಣದಲ್ಲಿದ್ದು, ಹಣ್ಣಾಗುವಾಗ ಬೆಂಕಿ ಜ್ವಾಲೆಯ ಬಣ್ಣ ಬರುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈ ಹಣ್ಣಿನ ಬೆಲೆ ಕೆ.ಜಿ.ಗೆ 2.3 ಲಕ್ಷ ರೂ.ನಿಂದ 2.7 ಲಕ್ಷ ರೂ. ವರೆಗೆ ಇದೆ. ರುಚಿಯಲ್ಲಿ ಮಲ್ಲಿಕಾ ತಳಿಯನ್ನು ಹೋಲುವ ಈ ಹಣ್ಣಿನಲ್ಲಿ ಔಷಧೀಯ ಗುಣಗಳಿರುವುದರಿಂದ ಇದಕ್ಕೆ ಹೆಚ್ಚು ಬೇಡಿಕೆ.

ಮೂರುವರೆ ವರ್ಷದ ಹಿಂದೆ ನೆಟ್ಟ ಗಿಡ

ಜೋಸೆಫ್ ಅವರು ಕೇರಳದ ಕಣ್ಣೂರಿನಲ್ಲಿ ಮೂರುವರೆ ವರ್ಷದ ಹಿಂದೆ ನಡೆದ ಕೃಷಿ ಮೇಳದಲ್ಲಿ 16,800 ರೂ. ಕೊಟ್ಟು ಮಿಯಾಝಕಿ ತಳಿಯ ಮಾವಿನ ಗಿಡ ಖರೀದಿಸಿದ್ದರು. ಎರಡೂವರೆ ವರ್ಷದ ಹಿಂದೆ ಇದು ಹೂವು ಮಾತ್ರ ಬಿಟ್ಟಿತ್ತು. ಗ್ರೋಬ್ಯಾಗ್‌ನಲ್ಲಿ ಸಾವಯವ ಗೊಬ್ಬರ ಹಾಕಿ ಬೆಳೆಸಿದ ಗಿಡ ಈಗ ಕೆಂಪು, ಸಾದಾ ಹಸುರು ಬಣ್ಣದ ಸಿಪ್ಪೆಯೊಂದಿಗೆ ಮೂರು ಫಲವನ್ನು ನೀಡಿದೆ. ಒಂದೊಂದು ಹಣ್ಣು 600ರಿಂದ 650 ಗ್ರಾಂ ತೂಗುತ್ತಿದೆ.

ಮಿಯಾಝಕಿಯಷ್ಟು ಬಣ್ಣ ಬಂದಿಲ್ಲ:

ಮಿಜಾಝಕಿ ತಳಿಯ ಮಾವು ಜಪಾನ್‌, ಅರಬ್‌ ರಾಷ್ಟ್ರ ಮತ್ತು ಗುಜರಾತ್‌ನ ಹವಾಗುಣದಲ್ಲಿ ಬೆಂಕಿಯ ಜ್ವಾಲೆಯ ಬಣ್ಣವನ್ನು ಪಡೆಯುತ್ತದೆ. ಆದರೆ ಶಂಕರಪುರದಲ್ಲಿ ಬೆಳೆದ ಮಾವಿಗೆ ಆ ಬಣ್ಣ ಬಂದಿಲ್ಲ. ಇದಕ್ಕೆ ಜನವರಿ ತಿಂಗಳಿನಲ್ಲಿ ಸುರಿದ ಮಳೆಯೂ ಕಾರಣ ಇರಬಹುದು ಎನ್ನುತ್ತಾರೆ ಜೋಸೆಫ್ ಲೋಬೋ.

ನಾಲ್ಕೂವರೆ ಅಡಿ ಎತ್ತರದ ಗಿಡ:

ಈ ತಳಿಯನ್ನು ರಾಜ್ಯದಲ್ಲಿ ಕೊಪ್ಪಳ, ಶಿವಮೊಗ್ಗದಲ್ಲೂ ಬೆಳೆಯುತ್ತಾರೆ. ಆದರೆ ತಾರಸಿಯಲ್ಲಿ ಬೆಳೆದದ್ದು ಇದೇ ಮೊದಲು. ನೆಲದಲ್ಲೇ ನೆಟ್ಟರೆ ಸುಮಾರು 15 ಅಡಿ ಬೆಳೆಯುವ ಈ ಮರ ತಾರಸಿಯಲ್ಲಿ ನಾಲ್ಕೂವರೆ ಅಡಿ ಎತ್ತರ ಬೆಳೆದಿದೆ. ಮುಂದೆ ದೊಡ್ಡ ಗಾತ್ರದ ಗ್ರೋ ಬ್ಯಾಗ್‌ ಬಳಸಿ ಹೆಚ್ಚುವರಿ ಸಾವಯವ ಗೊಬ್ಬರ ನೀಡಿದರೆ 6.5 ಎತ್ತರ ಬೆಳೆಯಬಲ್ಲುದು, 1 ಕಿಲೋ ಗಾತ್ರದ ಮಾವಿನ ಹಣ್ಣನ್ನು ಪಡೆಯಬಹುದು ಎನ್ನುತ್ತಾರೆ ಜೋಸೆಫ್.

ಗಿಡ ಖರೀದಿಸುವ ಮುನ್ನ ಎಚ್ಚರ ವಹಿಸಿ:

ಮಿಯಾಝಕಿ ಮಾವಿನ ಗಿಡದ ಬಗ್ಗೆ ಈಗ ಆಸಕ್ತಿ ಹೆಚ್ಚಾಗಿದೆ. ಹೀಗಾಗಿ ಕೆಲವರು ಮಿಯಾಝಕಿ ಎಂದು ರೆಡ್‌ ಮ್ಯಾಂಗೋ ಗಿಡಗಳನ್ನು ಮೋಸದಿಂದ ಮಾರಲಾಗುತ್ತಿದೆ. ಇದು ಕೇವಲ 700-800 ರೂ.ಗೇ ಸಿಗುತ್ತದೆ. ಈಗ ನಿಜವಾದ ಮಿಯಾಝಕಿ ತಳಿ ಗಿಡಕ್ಕೆ ಕನಿಷ್ಠ 2,500 ರೂ. ಇದೆ. ಹೀಗಾಗಿ ಖರೀದಿ ಮಾಡುವಾಗ ಎಚ್ಚರ ವಹಿಸಿ ಎನ್ನುತ್ತಾರೆ ಲೋಬೋ.

ಪ್ರಯೋಗಶೀಲ ಕೃಷಿಕ ಜೋಸೆಫ್ ಲೋಬೋ:

ಜೋಸೆಫ್ ಲೋಬೊ ಅವರು ಪ್ರಯೋಗಶೀಲ ಕೃಷಿಕರು. ತಮ್ಮ ಮನೆಯ ಮೇಲಿನ 1,400 ಚದರ ಅಡಿ ವಿಸ್ತೀರ್ಣ ತಾರಸಿಯಲ್ಲಿ 200ಕ್ಕೂ ಅಧಿಕ ಹಣ್ಣುಹಂಪಲು, 75ಕ್ಕೂ ಅಧಿಕ ಔಷಧೀಯ ಗಿಡಗಳು ಮತ್ತು 40ಕ್ಕೂ ಅಧಿಕ ಜಾತಿಯ ಹೂವಿನ ಪ್ರಭೇದಗಳನ್ನು ಹೊಂದಿದ್ದಾರೆ. ಜಾವಾ ಪ್ಲಮ್‌, ಬ್ರೆಜಿಲಿಯನ್‌ ಚೆರ್ರಿ, ತೈವಾನ್‌ ಆರೆಂಜ್‌ ಇಲ್ಲಿದೆ. ಅವರ ಈ ಸಾಹಸಕ್ಕೆ ಪತ್ನಿ ನೀಮಾ ಲೋಬೊ ಮತ್ತು ಕರಾಟೆ ಚಾಂಪಿಯನ್‌ ಆಗಿರುವ ಮಗಳು ಜನಿಷಾ ಲೋಬೊ ಕೈ ಜೋಡಿಸುತ್ತಾರೆ. ಅಂದ ಹಾಗೆ ಲೋಬೊ ಅವರು ತಮ್ಮ ತಾರಸಿ ತೋಟದಲ್ಲಿ ಬೆಳೆದ ಏನನ್ನೂ ಹಣಕ್ಕೆ ಮಾರುವುದಿಲ್ಲ!

ಮಿಯಾಝಕಿಗೆ ಯಾಕಿಷ್ಟು ದರ?:

ನೇರಳೆ ಕಾಯಿ, ಬೆಂಕಿಯ ಜ್ವಾಲೆಯಂಥ ಹಣ್ಣು, ಬಣ್ಣ ಇದರ ಪ್ರಧಾನ ಆಕರ್ಷಣೆ.

ಹಣ್ಣಿನೊಳಗೆ ಸಣ್ಣ ಗಾತ್ರದ ವಾಟೆ ಇರುತ್ತದೆ, ಕೆಲವರು ಇದನ್ನು ಸೀಡ್‌ಲೆಸ್‌ ಮಾವು ಅಂತಲೂ ಹೇಳುತ್ತಾರೆ.

ಇದು ಆ್ಯಂಟಿ ಆಕ್ಸಿಡೆಂಟ್‌ನ್ನು ಯಥೇತ್ಛವಾಗಿ ಹೊಂದಿದೆ. ಇದರಲ್ಲಿರುವ ಹೇರಳ ಬೀಟಾ ಕೆರೋಟಿನ್‌ ಮತ್ತು ಫಾಲಿಕ್‌ ಆ್ಯಸಿಡ್‌ ಕಣ್ಣಿನ ಆಯಾಸ ನಿವಾರಣೆ, ದೃಷ್ಟಿ ದೋಷ ನಿವಾರಣೆಗೆ ಭಾರೀ ಒಳ್ಳೆಯದು.

ಇತ್ತೀಚೆಗೆ ಇದರ ಬೇಡಿಕೆ ಹೆಚ್ಚಲು ಜಗತ್ತಿನ ಅತಿ ದುಬಾರಿ ಹಣ್ಣು ಎಂಬ ಪ್ರಖ್ಯಾತಿಯೂ ಒಂದು ಕಾರಣ. ಆದರೆ ಇಲ್ಲಿ ಅಷ್ಟು ಬೆಲೆ ಸಿಗಲಾರದು.

ಕಡಿಮೆ ಜಾಗದಲ್ಲೂ ಕೃಷಿ ಸಾಧ್ಯ:

ಜಾಗ ಕಡಿಮೆ ಇದೆ ಎನ್ನುವ ಕಾರಣಕ್ಕೆ ಕೃಷಿ ಮಾಡದೆ ಇರಬೇಕಾಗಿಲ್ಲ. ಯುವಜನರು ಅತಿ ಕಡಿಮೆ ಜಾಗದಲ್ಲಿ, ಮನೆಯ ತಾರಸಿಯಲ್ಲೇ ಎಷ್ಟೆಲ್ಲ ಗಿಡಗಳನ್ನು ನೆಡಬಹುದು ಎಂದು ತೋರಿಸುವ ಪ್ರಯತ್ನ ಮಾಡಿದ್ದೇನೆ. ಜೋಸೆಫ್ ಲೋಬೋ 

ಟಾಪ್ ನ್ಯೂಸ್

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

Arvind Limbavali: “ಲ್ಯಾಂಡ್‌ ಜೆಹಾದ್‌’ಗೆ ಸಿದ್ದು ಸರಕಾರದ ಬೆಂಬಲ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Karnataka: ಒಳ ಮೀಸಲು ಜಾರಿವರೆಗೆ ಸರಕಾರಿ ನೇಮಕಾತಿಗೆ ತಡೆ

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!

Indira Canteen: ಸಚಿವ ರಹೀಂ ಖಾನ್‌ಗೆ ಹೊಟೇಲ್‌ ಊಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

death

Bengaluru:ಮೂಲ್ಕಿಯ ಬಡಗಿ ಖಾಸಗಿ ಹೊಟೇಲ್‌ ನಲ್ಲಿ ಆತ್ಮಹ*ತ್ಯೆ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Udupi: ಗೀತಾರ್ಥ ಚಿಂತನೆ-105: ಶೋಕ – ದುಃಖ ಒಂದೇ ಅಲ್ಲ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

Bengaluru: ಬಾಳೆಕುದ್ರು ಶ್ರೀಮಠದ ಶಿಷ್ಯ ಸ್ವೀಕಾರ

1-chali

Dakshina Kannada and Udupi: ಮುಂಜಾನೆ ಚುಮುಚುಮು ಚಳಿ

1-deee

Udupi; ಪೊಲೀಸ್‌ ಇಲಾಖೆ ವಿರುದ್ಧ ಹಿಂದೂ ಸಂಘಟನೆಗಳ ಪ್ರತಿಭಟನೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ

supreme-Court

Judgement: ಸಂವಿಧಾನ ಪೀಠಿಕೆಯ ಜಾತ್ಯತೀತ ಪದ ಪ್ರಶ್ನಿಸಿದ್ದ ಅರ್ಜಿ ಸುಪ್ರೀಂನಿಂದ ವಜಾ

Karthi

EVM Issue: ಮತಯಂತ್ರ ತಿರುಚಿದ್ದು ಸಾಬೀತಿಗೆ ನನ್ನ ಬಳಿ ಪುರಾವೆಗಳಿಲ್ಲ: ಕಾರ್ತಿ ಚಿದಂಬರಂ

suicide

Kasaragod;ತೀವ್ರ ತಲೆನೋವು: ವಿದ್ಯಾರ್ಥಿನಿ ಸಾ*ವು

accident

Malpe: ಕಾರು ಢಿಕ್ಕಿಯಾಗಿ ಆಟೋ ರಿಕ್ಷಾ ಚಾಲಕನಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.