Tollywood: ಪ್ರಶಾಂತ್ ನೀಲ್ – Jr. NTR ಸಿನಿಮಾಕ್ಕೆ ಈ ಟೈಟಲ್ ಫಿಕ್ಸ್?
Team Udayavani, May 17, 2024, 3:51 PM IST
ಹೈದರಾಬಾದ್: ಜೂ.ಎನ್‌ಟಿಆರ್ ʼಆರ್ ಆರ್ ಆರ್ʼ ಬಳಿಕ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ. ಪ್ಯಾನ್ ಇಂಡಿಯಾದಲ್ಲಿ ಅವರಿಗೆ ಅಭಿಮಾನಿಗಳಿದ್ದಾರೆ. ʼದೇವರʼ ಸಿನಿಮಾಕ್ಕಾಗಿ ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.
ʼದೇವರʼ ದ ನಡುವೆ ಅವರು ಹಿಂದಿಯ ʼವಾರ್ -2ʼ ಸಿನಿಮಾದಲ್ಲಿ ಹೃತಿಕ್ ರೋಷನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಇದಾದ ಬಳಿಕ ಮತ್ತೊಂದು ದೊಡ್ಡ ಪ್ರಾಜೆಕ್ಟ್ ನಲ್ಲಿ ಜೂ. ಎನ್ ಟಿಆರ್ ಕಾಣಿಸಿಕೊಳ್ಳಲಿದ್ದಾರೆ.
ʼಕೆಜಿಎಫ್ʼ ನಿರ್ದೇಶಕ ಪ್ರಶಾಂತ್ ನೀಲ್ ಜೂ. ಎನ್ ಟಿಆರ್ ಜೊತೆ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಈ ಸಿನಿಮಾ ಶೂಟಿಂಗ್ ಆರಂಭಕ್ಕೂ ಮುನ್ನವೇ ಅನೌನ್ಸ್ ಆದ ದಿಂದ ಸುದ್ದಿಯಲ್ಲಿದೆ.
ʼಎನ್ ಟಿಆರ್ 31ʼ ಎನ್ನುವ ಟೈಟಲ್ ತಾತ್ಕಾಲಿಕವಾಗಿ ಇಡಲಾಗಿದೆ. ಇದೀಗ ಬಂದಿರುವ ಲೇಟೆಸ್ಟ್ ಅಪ್ಡೇಟ್ ಪ್ರಕಾರ ಸಿನಿಮಾಕ್ಕೆ ʼಡ್ರ್ಯಾಗನ್ʼ ಎನ್ನುವ ಪವರ್ ಫುಲ್ ಟೈಟಲ್ ಇಡಲಾಗಿದೆ ಎನ್ನಲಾಗಿದೆ.
ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲಿʼ ಡ್ರ್ಯಾಗನ್ʼ ಎಂಬ ಶೀರ್ಷಿಕೆಯನ್ನು ಇಡಲಾಗಿದ್ದು, ಈ ಟೈಟಲ್ ಹಿಂದಿಯಲ್ಲಿ ಕರಣ್ ಜೋಹರ್ ಅವರು ನೋಂದಾಯಿಸಿದ್ದಾರೆ. ಚಿತ್ರತಂಡ ಕರಣ್ ಅವರೊಂದಿಗೆ ಮಾತನಾಡಿದ್ದು, ಹಿಂದಿಯಲ್ಲೂ ʼಡ್ರ್ಯಾಗನ್ʼ ಟೈಟಲ್ ನೀಡಲು ಅವರು ಅನುಮತಿ ನೀಡಿದ್ದಾರೆ” ಎಂದು ʼಪಿಂಕ್ ವಿಲ್ಲಾʼ ವರದಿ ಮಾಡಿದೆ.
ಇದನ್ನೂ ಓದಿ: ಕಾರ್ತಿಕ್ – ಸೂರ್ಯ ಕಾಂಬಿನೇಷನ್ ನ ಬಹು ನಿರೀಕ್ಷಿತ ಸಿನಿಮಾಕ್ಕೆ ಪೂಜಾ ಹೆಗ್ಡೆ ನಾಯಕಿ?
ʼಬ್ರಹ್ಮಾಸ್ತ್ರʼದ ಮೂಲ ಶೀರ್ಷಿಕೆಯು ʼಡ್ರ್ಯಾಗನ್ʼ ಎಂದಾಗಿತ್ತು. ಆಗಿತ್ತು. ಆದರೆ ಸಿನಿಮಾದ ಸ್ಕ್ರಿಪ್ಟ್ ಮುಂದುವರೆದಂತೆ ಸಿನಿಮಾದ ಟೈಟಲ್ ಕೂಡ ಬದಲಾಯಿತು ಎಂದು ವರದಿ ತಿಳಿಸಿದೆ.
ಮೈತ್ರಿ ಮೂವಿ ಮೇಕರ್ಸ್ ಈ ಸಿನಿಮಾವನ್ನು ನಿರ್ಮಿಸಲಿದೆ. ಇದೇ ಮೇ.20 ರಂದು ಜೂ.ಎನ್ ಟಿಆರ್ ಅವರ ಹುಟ್ಟುಹಬ್ಬವಿದ್ದು, ಈ ಸಮಯದಲ್ಲಿ ʼಡ್ರ್ಯಾಗನ್ʼ ಟೈಟಲ್ ಪೋಸ್ಟರ್ ರಿಲೀಸ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಅಂದಹಾಗೆ ಕರಣ್ ಜೋಹರ್ ಜೂ.ಎನ್ ಟಿಆರ್ ಅವರ ʼದೇವರʼ ಸಿನಿಮಾವನ್ನು ಹಿಂದಿಯಲ್ಲಿ ಪ್ರಸೆಂಟ್ ಮಾಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malayalam actor: ಹಾಲಿವುಡ್‌ನಲ್ಲೂ ಮಿಂಚಿದ್ದ ಮಾಲಿವುಡ್‌ನ ಹಿರಿಯ ನಟ ಥಾಮಸ್ ನಿಧನ
‘Pushpa 2: 10 ದಿನಗಳಲ್ಲಿ ಹೊಸ ದಾಖಲೆಯ ಕಲೆಕ್ಷನ್ ಕಂಡು ಮುನ್ನುಗ್ಗುತ್ತಿರುವ ಪುಷ್ಪ 2
Tulu cinema; ಕೋಸ್ಟಲ್‌ನಲ್ಲೀಗ ಸಿನೆಮಾ ಹಂಗಾಮಾ!
SSMB29: ರಾಜಮೌಳಿ – ಮಹೇಶ್ ಬಾಬು ಸಿನಿಮಾದ ಲೀಡ್ ರೋಲ್‌ನಲ್ಲಿ ಪ್ರಿಯಾಂಕಾ ಚೋಪ್ರಾ?
Video: ಜೈಲಿನಿಂದ ಅಲ್ಲು ಅರ್ಜುನ್ ಬಿಡುಗಡೆಗೆ ಆಗ್ರಹ; ಆತ್ಮಹತ್ಯೆ ಯತ್ನಿಸಿದ ಅಭಿಮಾನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.