Sandalwood: ದರ್ಶನ್ ʼಡೆವಿಲ್ʼಗೆ ಕರಾವಳಿ ಬೆಡಗಿ ರಚನಾ ರೈ ನಾಯಕಿ; ಫಸ್ಟ್ ಪೋಸ್ಟರ್ ಔಟ್
Team Udayavani, May 17, 2024, 6:08 PM IST
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ʼಡೆವಿಲ್ ದಿ ಹೀರೋʼ ಸಿನಿಮಾ ಅನೌನ್ಸ್ ಆದ ದಿನದಿಂದ ಅಭಿಮಾನಿಗಳ ವಲಯದಲ್ಲಿ ಕುತೂಹಲ ಹೆಚ್ಚಿಸಿದೆ.
ʼಕಾಟೇರʼ ಯಶಸ್ಸಿನ ಬಳಿಕ ನಟ ದರ್ಶನ್ ಪ್ರಕಾಶ್ ವೀರ್ ಆಕ್ಷನ್ ಕಟ್ ಹೇಳುತ್ತಿರುವ ʼಡೆವಿಲ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ಪ್ರಕಾಶ್ ದರ್ಶನ್ ಜೊತೆ ʼತಾರಕ್ʼ ಸಿನಿಮಾ ಮಾಡಿದ್ದರು.
ಈಗಾಗಲೇ ʼಡೆವಿಲ್ʼ ಚಿತ್ರದ ಫಸ್ಟ್ ಗ್ಲಿಂಫ್ಸ್ ರಿಲೀಸ್ ಮಾಡಲಾಗಿದ್ದು, ದರ್ಶನ್ ಅವರ ನ್ಯೂಲುಕ್ ಸಖತ್ ಗಮನ ಸೆಳೆದಿದೆ.
ಇದೀಗ ʼಡೆವಿಲ್ʼ ನಾಯಕಿಯನ್ನು ಚಿತ್ರತಂಡ ಪರಿಚಯ ಮಾಡಿದೆ. ಶುದ್ಧ ಕೌಶಲ್ಯಕ್ಕಾಗಿ ಗುರುತಿಸಲಾಗಿದೆ “ರಚನಾ ರೈ” ಎಂದು ಬರೆದು ನಟಿ ಫೋಟೋವನ್ನು ಹಂಚಿಕೊಳ್ಳಲಾಗಿದೆ.
ಈಗಾಗಲೇ ತುಳುವಿನ ʼಸರ್ಕಸ್ʼ ಹಾಗೂ ಕನ್ನಡದ ʼವಾಮನʼ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ರಚನಾ ʼಡೆವಿಲ್ʼ ಸಿನಿಮಾದ ನಾಯಕಿ ಎಂದು ಈ ಹಿಂದೆಯೇ ಮಾತುಗಳು ಹರಿದಾಡಿತ್ತು. ಇದೀಗ ಅಧಿಕೃತವಾಗಿ ಚಿತ್ರತಂಡ ಅನೌನ್ಸ್ ಮಾಡಿದೆ.
ಅಂದಹಾಗೆ ಈಗಾಗಲೇ ʼಡೆವಿಲ್ ಸಿನಿಮಾದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಶೀಘ್ರದಲ್ಲಿ ಎರಡನೇ ಹಂತದ ಚಿತ್ರೀಕರಣ ಆರಂಭಗೊಳ್ಳುವ ಸಾಧ್ಯತೆಯಿದೆ.
ಮಾಸ್ ಸಿನಿಮಾವೆಂದು ಹೇಳಲಾಗುತ್ತಿರುವ ಈ ಸಿನಿಮಾ ಇದೇ ವರ್ಷದ ಅಕ್ಟೋಬರ್ ತಿಂಗಳಿನಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ.
ʼಡೆವಿಲ್ʼ ಗೆ ಸುಧಾಕರ್ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಇರಲಿದೆ.
“Welcome on board “
ಶುದ್ಧ ಕೌಶಲ್ಯಕ್ಕಾಗಿ ಗುರುತಿಸಲಾಗಿದೆ “ ರಚನಾ ರೈ” ಸ್ವಾಗತ!#dboss #devilthehero #vaishnostudios #sjmc #rachnarai pic.twitter.com/ZK7zAFLvVU— Shri Jaimatha Combines (@JaimathaCombins) May 17, 2024
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.