Bantwal ಎರಡೂಕಾಲು ಎಕ್ರೆ ವಿಸ್ತೀರ್ಣ; ಅಭಿವೃದ್ಧಿ ಆಗದೇ ಜೀರ್ಣ
ಬಂಟ್ವಾಳದ ಗಿರಿಯಲ್ಲೊಂದು ಗಿರಿಗುಡ್ಡೆ ಕೆರೆ
Team Udayavani, May 18, 2024, 6:35 AM IST
ಬಂಟ್ವಾಳ: ಸಾಮಾನ್ಯವಾಗಿ ಎತ್ತರದ ಪ್ರದೇಶವೆಂದರೆ ಅಲ್ಲಿ ನೀರಿಲ್ಲ, ಬರೀ ಬೋಳು ಗುಡ್ಡ ಎಂಬುದು ನಮ್ಮ ನಂಬಿಕೆ. ಆದರೆ ಬಂಟ್ವಾಳ ಪುರಸಭಾ ವ್ಯಾಪ್ತಿಯ ಗಿರಿಗುಡ್ಡೆ ಎತ್ತರದ ಪ್ರದೇಶದಲ್ಲಿ ಈ ಬಿರು ಬೇಸಿಗೆಯಲ್ಲೂ ಜಲಸಂಪತ್ತು ಕಂಡುಬಂದಿದ್ದು, ಪ್ರಾಚೀನ ಕಾಲದಲ್ಲಿಯೇ ಇಲ್ಲಿ ಸುಮಾರು 2.25 ಎಕ್ರೆ ವಿಸ್ತೀರ್ಣದಲ್ಲಿ ಗಿರಿಗುಡ್ಡೆ ಕೆರೆ ಇತ್ತಂತೆ.
ಸುತ್ತಲೂ ಗಿಡ ಮರಗಳು, ಪೊದೆ ಗಳು ಹಚ್ಚ ಹಸುರಿನಿಂದ ಕೂಡಿದ್ದು, ನಗರ ಪ್ರದೇಶವಾದರೂ ಕಾನನದ ರೀತಿಯ ಕಡಿದಾದ ದಾರಿಯಲ್ಲಿ ಸಾಗಿದಾಗ ಗಿರಿಗುಡ್ಡೆ ಕೆರೆಯ ದರ್ಶನವಾಗುತ್ತದೆ. ಗಿರಿಗುಡ್ಡೆ ಕೆರೆಗೆ ಧಾರ್ಮಿಕ ಹಿನ್ನೆಲೆಯೂ ಇದೆ ಎನ್ನಲಾಗಿದ್ದು, ರಾಯರಚಾವಡಿ ದೈವಸ್ಥಾನದ ಜತೆಗೆ ಸ್ಥಳೀಯ ದೈವ ಸಾನಿಧ್ಯಗಳಿಗೂ ಇದು ಸಂಬಂಧಪಟ್ಟಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಪಾಳುಬಿದ್ದಿರುವ ಕೆರೆಯನ್ನು ಈಗ ಆಭಿವೃದ್ಧಿಗೊಳಿಸಬೇಕಿದೆ.
ಕೆರೆಯ ಒಂದು ಬದಿಯಲ್ಲಿ ಕಲ್ಲುಕಟ್ಟಿ ಕಾಲುವೆಯ ಮಾದರಿ ಮಾಡಿ ಅದಕ್ಕೆ ಸಣ್ಣ ಪೈಪು ಇಡಲಾಗಿದ್ದು, ಕಣಿಯ ಮೂಲಕ ಕೆರೆಯಿಂದ ನೀರು ಕೆಳಗಿನ ಪ್ರದೇಶದ ಕೃಷಿ ಭೂಮಿಗಳಿಗೆ ಹೋಗುತ್ತಿತ್ತು ಎನ್ನಲಾಗಿದೆ. ಈಗಲೂ ಸಣ್ಣ ಹೊಂಡದಲ್ಲಿ ಪೈಪುಗಳು ಇದ್ದು, ಹೀಗಾಗಿ ಹೆಚ್ಚು ನೀರಿರುವ ಸಂದರ್ಭ ಈಗಲೂ ನೀರು ಕೆಳಗಿನ ಭಾಗಕ್ಕೆ ಹರಿಯುತ್ತದಂತೆ.
ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ (ಬೂಡಾ)ವು ಗಿರಿಗುಡ್ಡೆ ಕೆರೆಯ ಅಭಿವೃದ್ಧಿಗೆ ಶ್ರಮಿಸಿತ್ತು. ಅನುದಾನವನ್ನು ಸಣ್ಣ ನೀರಾವರಿ ಇಲಾಖೆಗೆ ನೀಡಿದ್ದು ಕಾಮಗಾರಿ ಪ್ರಗತಿಯಲ್ಲಿವೆ. ಬೂಡಾದ ಬಳಿ ಹೆಚ್ಚುವರಿ ಅನುದಾನವಿಲ್ಲ. ಹಾಗಾಗಿ ಪಾಳು ಬಿದ್ದಂತಾಗಿದೆ. ಈ ಕೆರೆ ಅಭಿವೃದ್ಧಿಗೊಂಡರೆ ಸುತ್ತಲಿನ ಪ್ರದೇಶದ ಅಂತರ್ಜಲ ವೃದ್ಧಿಗೊಳ್ಳಲಿದೆ. ಬೇಸಗೆಯಲ್ಲೂ ಸುತ್ತಲಿನ ನಿವಾಸಿಗಳಿಗೆ ಹಾಗೂ ಕೆಳಗಿನ ಕೃಷಿ ಪ್ರದೇಶಕ್ಕೂ ಕೆರೆಯಿಂದ ನೀರು ಕೊಡಬಹುದು ಎಂಬುದು ಸಾರ್ವಜನಿಕರ ಅಭಿಪ್ರಾಯ.
ಸಣ್ಣ ಹೊಂಡದಲ್ಲಿ ಈಗಲೂ ನೀರು!
ಎಲ್ಲೆಡೆಯೂ ಬಿರು ಬೇಸಗೆಯ ಪರಿಣಾಮದಿಂದ ನೀರು ಬತ್ತಿ ಹೋಗುತ್ತಿದ್ದರೂ, ಅತ್ಯಂತ ಎತ್ತರದ ಪ್ರದೇಶವಾದ ಗಿರಿಗುಡ್ಡ ಕೆರೆಯ ಒಂದು ಬದಿಯ ಸಣ್ಣ ಹೊಂಡದಲ್ಲಿ ಈಗಲೂ ನೀರಿದೆ. ಕೆರೆಯ ಅನತಿ ದೂರದಲ್ಲಿರುವ ದೈವ ಸಾನಿಧ್ಯದಲ್ಲಿ ಪುಷ್ಕರಣಿಯೊಂದನ್ನು ಮಾಡಲಾಗಿದ್ದು, ಅದರಲ್ಲೂ ನೀರಿದೆ. ಗಿರಿಗುಡ್ಡೆ ಕೆರೆಯು ಸಾಕಷ್ಟು ವಿಸ್ತೀರ್ಣವಿದೆ. ಪ್ರಸ್ತುತ ಕೆರೆಯಲ್ಲಿ ಪೂರ್ತಿ ಹೂಳು ತುಂಬಿದ್ದು, ಮಣ್ಣು ಮೃದುವಾಗಿರುವುದರಿಂದ ಆಳದಲ್ಲಿ ನೀರಿರುವುದು ಸ್ಪಷ್ಟವಾಗಿದೆ. ಮಣ್ಣು ಮೇಲೆ ಹುಲ್ಲು ಬೆಳೆದಿದ್ದು, ಹಚ್ಚ ಹಸುರಿನಿಂದ ಕೂಡಿದೆ. ಕೆರೆಯ ಸುತ್ತಲೂ ಕುಂಟಾಲ್ ಹಣ್ಣಿನ ಗಿಡಗಳ ಜತೆಗೆ ಬಳ್ಳಿಯ ರೀತಿಯ ಗಿಡಗಳು ಬೆಳೆದಿವೆ.
ಅನುದಾನ ಹೊಂದಿಸಲು ಪ್ರಯತ್ನ
ಕೆರೆಯ ವಿಸ್ತೀರ್ಣ ದೊಡ್ಡದಿದ್ದು, ಸಣ್ಣ ನೀರಾವರಿ ಇಲಾಖೆಯವರು ಹೆಚ್ಚಿನ ಅನುದಾನ ಕೇಳುತ್ತಿದ್ದಾರೆ. ಆದರೆ ಅಷ್ಟು ಅನುದಾನ ನೀಡುವುದು ಬೂಡಾ ದಿಂದ ಸಾಧ್ಯವಿಲ್ಲ. ಕೆರೆಯ ಅಭಿವೃದ್ಧಿ ಬಾಕಿಯಾಗಿದ್ದು, ಅನುದಾನ ಹೊಂದಿಸಲು ಪ್ರಯತ್ನ ನಡೆದಿದೆ.
-ಅಭಿಲಾಷ್, ಸದಸ್ಯ ಕಾರ್ಯದರ್ಶಿ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ.
ಕೆರೆಯು ಅಭಿವೃದ್ಧಿಗೊಂಡಲ್ಲಿ ಬಂಟ್ವಾ ಳದ ಅಂತರ್ಜಲ ವೃದ್ಧಿಗೊಳ್ಳಲಿದ್ದು, ಜತೆಗೆ ಬೇಸಗೆಯಲ್ಲೂ ನೀರಿನ ಸಮಸ್ಯೆಗೆ ಪರಿಹಾರ ಸಿಗಬಹುದು. ಬೂಡಾದಿಂದ ಈ ಹಿಂದೆಯೂ ಕೆರೆಯ ಅಭಿವೃದ್ಧಿಗೆ ಪ್ರಯತ್ನ ನಡೆದರೂ ಅದು ಈತನಕ ಕೈಗೂಡಿಲ್ಲ.
-ಗಂಗಾಧರ ಪೂಜಾರಿ,
ಪುರಸಭಾ ಸದಸ್ಯರು, ಬಂಟ್ವಾಳ
- ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
Report: ಐಸಿಯು ಗಲೀಜು, ಟ್ಯಾಂಕ್‌ನಲ್ಲಿ ಪಾಚಿ: ಸರಕಾರಿ ಆಸ್ಪತ್ರೆಗಳ ದುಃಸ್ಥಿತಿ!
JDS: ಆಂತರಿಕ ಚುನಾವಣೆ ಮೂಲಕವೇ ರಾಜ್ಯಾಧ್ಯಕ್ಷರ ಆಯ್ಕೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.