ಪವಿತ್ರಾ – ಚಂದು ಪ್ರೀತಿಯಲ್ಲಿದ್ದರು.. ಆತ ನನ್ನ ಗಂಡ ಎಂದಿದ್ದರಂತೆ ಪವಿತ್ರಾ – ಚಂದು ಪತ್ನಿ

ಮೃತ ಚಂದ್ರಕಾಂತ್‌ ಪತ್ನಿಯ ಶಾಕಿಂಗ್‌ ಹೇಳಿಕೆ

Team Udayavani, May 18, 2024, 12:18 PM IST

Untitled-1

ಹೈದರಾಬಾದ್:‌ ನಟಿ ಪವಿತ್ರಾ ಜಯರಾಂ ಕಾರು ಅಪಘಾತದ ಸಂದರ್ಭದಲ್ಲಿ ಅವರ ಜೊತೆಯಲ್ಲಿದ್ದ ಗೆಳೆಯ ಚಂದ್ರಕಾಂತ್‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲುಗು ಕಿರುತೆರೆ ಲೋಕಕ್ಕೆ ಆಘಾತವನ್ನೀಡಿದೆ. ಕೆಲವೇ ದಿನದ ಅಂತರದಲ್ಲಿ ಇಬ್ಬರು ಖ್ಯಾತ ಕಿರುತೆರೆ ನಟರು ಇಹಲೋಕ ತ್ಯಜಿಸಿದ್ದಾರೆ.

ಶುಕ್ರವಾರ(ಮೇ.17 ರಂದು) ನೇಣು ಬಿಗಿದುಕೊಂಡು ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮೀಯ ಸ್ನೇಹಿತೆ ಪವಿತ್ರಾ ಅವರ ಸಾವಿನಿಂದ ಕುಗ್ಗಿಹೋಗಿದ್ದ ಚಂದು ನೇಣಿಗೆ ಶರಣಾಗಿದ್ದಾರೆ. ಹೈದರಾಬಾದ್​​​ನ ಮಣಿಕೊಂಡದಲ್ಲಿರುವ ತನ್ನ ಮನೆಯಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಚಂದು ಹಾಗೂ ಪವಿತ್ರಾ ಅವರ ಸ್ನೇಹ ಬರೀ ಸ್ನೇಹವಾಗಿಲ್ಲ. ಅವರಿಬ್ಬರು ತುಂಬಾ ಆತ್ಮೀಯರಾಗಿದ್ದರು. ಇಬ್ಬರು ಗಂಡ – ಹೆಂಡತಿಯಂತೆ ಇದ್ದರು ಎಂದು ಚಂದು ಪತ್ನಿ ಶಿಲ್ಪಾ ಶಾಕಿಂಗ್‌ ಹೇಳಿಕೆಯೊಂದನ್ನು ನೀಡಿದ್ದಾರೆ.

ತೆಲುಗು ವೆಬ್‌ ಸೈಟ್‌ ವೊಂದಕ್ಕೆ ನೀಡಿರುವ ಅವರ ಹೇಳಿಕೆಗಳು ವೈರಲ್‌ ಆಗಿದೆ.

“2004 ರಲ್ಲಿ ನನ್ನ ಹಾಗೂ ಚಂದು ಪರಿಚಯವಾಗಿತ್ತು. ಸ್ನೇಹ ಪ್ರೀತಿಯಾಯಿತು. ಆದರೆ ನಮ್ಮ ಸಂಬಂಧವನ್ನು ಮನೆಯವರು ಒಪ್ಪಿರಲಿಲ್ಲ. ಆಮೇಲೆ ಅವರೇ ಬೇಕೆಂದು ಹಠ ಹಿಡಿದು ಮದುವೆ ಆಗಿದ್ದೆ. ಮನೆಯವರು 2015 ರಲ್ಲಿ ಅದ್ಧೂರಿಯಾಗಿ ನಮ್ಮ ಮದುವೆ ಮಾಡಿಕೊಟ್ಟಿದ್ದರು. ನನಗೀಗ 8 ವರ್ಷದ ಮಗಳು, 4 ವರ್ಷದ ಮಗನಿದ್ದಾನೆ. ಚಂದು ಪವಿತ್ರಾ ಅವರ ಪರಿಚಯ ಆದ ಬಳಿಕ ಮನೆಗೆ ಬರುವುದು ಅಪರೂಪವಾಗಿತ್ತು” ಎಂದಿದ್ದಾರೆ.

“ಲಾಕ್‌ ಡೌನ್‌ ಬಳಿಕ ಚಂದು – ಪವಿತ್ರಾ ನಡುವೆ ರಿಲೇಷನ್‌ ಆರಂಭವಾಗಿತ್ತು. ಚಂದು ಆಕೆಯ ಪರಿಚಯದ ಬಳಿಕ ನನ್ನ ಜೊತೆ ಅಷ್ಟಾಗಿ ಮಾತನಾಡುತ್ತಿರಲಿಲ್ಲ. ಯಾವಾಗಲೂ ಸಿಟ್ಟಿನಿಂದಲೇ ಮಾತನಾಡುತ್ತಿದ್ದರು. ನನ್ನ ಮೇಲೆ ದೌರ್ಜನ್ಯವನ್ನು ಮಾಡುತ್ತಿದ್ದರು. ಆದರೆ ನಾನು ನನ್ನ ಗಂಡನೇ ನನಗೆ ಎಲ್ಲವೆಂದು ಸಹಿಸಿಕೊಂಡು ಬದುಕುತ್ತಿದ್ದೆ. ಆದರೆ ಅವರು ಇವತ್ತು ನನ್ನನ್ನು ಬಿಟ್ಟುಹೋಗಿದ್ದಾರೆ” ಎಂದು ಭಾವುಕರಾಗಿದ್ದಾರೆ.

“ಪವಿತ್ರಾ ಅವರ ವಿಚಾರ ಗೊತ್ತಾದ ಮೇಲೆ ಮನೆಯಲ್ಲಿ ಆಗಾಗ ನಮ್ಮ ನಡುವೆ ಜಗಳವಾಗುತ್ತಿತ್ತು. ಪವಿತ್ರಾ ಫೋನ್‌ ಮಾಡಿ ನನಗೆ ಬೆದರಿಕೆ ಹಾಕಿದ್ದರು. ಚಂದ್ರಕಾಂತ್‌ ನನ್ನ ಗಂಡ ಕಣೇ ನಿನಗೇನು ಎಂದು ಅವರು ಬೆದರಿಕೆ ಹಾಕಿದ್ದರು. ಇದರ ಬಗ್ಗೆ ಪವಿತ್ರಾ ಅವರ ಮಗನ ಬಳಿಯೂ ಹೇಳಿದ್ದೆ ಆದರೆ ಆತ ಕೂಡ ನನಗೆ ವಾಪಾಸ್‌ ಜೋರು ಮಾಡಿದ್ದ. ಚಂದು ಯಾವಾಗಲೂ ಕುಡಿದು ಬಂದು ಮನೆಯಲ್ಲಿ ಜಗಳ ಮಾಡುತ್ತಿದ್ದ. ಯಾವಾಗಲೂ ಪವಿತ್ರಾಳ ಬಗ್ಗೆ ಮಾತನಾಡುತ್ತಿದ್ದ. ಈ ಬಗ್ಗೆ ನಾನು ಮಹಿಳಾ ಮಂಡಳಿಯಲ್ಲಿ ದೂರು ನೀಡಿದ್ದೆ. ಅಲ್ಲಿ ಕೂಡ ಚಂದು ಪವಿತ್ರಾಳೇ ನನ್ನ ಲೈಫ್‌ ಎಂದು ಹೇಳಿದ್ದ. ನಾನು ನನ್ನ ಮಕ್ಕಳಿಗೆ ತಂದೆ ಬೇಕೆಂದು ಎಲ್ಲವನ್ನೂ ಸಹಿಸಿಕೊಂಡು ಬಂದಿದ್ದೆ” ಎಂದು ಹೇಳಿದ್ದಾರೆ.

ಪವಿತ್ರಾನಿಗಾಗಿ ನನ್ನ ಜೀವವನ್ನೇ ತ್ಯಾಗ ಮಾಡಿದ್ದೇನೆ. ಆಕೆ ಇಲ್ಲದೆ ಬದುಕಲು ಸಾಧ್ಯನೇ ಇಲ್ಲವೆಂದು ಚಂದು ತಮ್ಮ ಬಳಿ ಹೇಳಿದ್ದರೆಂದು ಪವಿತ್ರಾ ಅವರ ಸಂಬಂಧಿ ಲೊಕೇಶ್‌ ಅವರು ಮಾಧ್ಯಮಕ್ಕೆ ಹೇಳಿದ್ದಾರೆ.

ಪವಿತ್ರಾ ಹಾಗೂ ಚಂದು ತೆಲುಗಿನ ʼತ್ರಿನಯನಿʼ ಧಾರಾವಾಹಿಯಲ್ಲಿ ಜೊತೆಯಾಗಿ ನಟಿಸಿದ್ದರು.

ಟಾಪ್ ನ್ಯೂಸ್

Road

Traffic Jam: ಬಿ.ಸಿ.ರೋಡು-ಕಲ್ಲಡ್ಕ ಮಧ್ಯೆ ಹದಗೆಟ್ಟ ಹೆದ್ದಾರಿ

ಸೇತುವೆ ದುಃಸ್ಥಿತಿ; ಘನ ವಾಹನ ಸಂಚಾರ ನಿಷೇಧ

Bridge ದುಃಸ್ಥಿತಿ; ಘನ ವಾಹನ ಸಂಚಾರ ನಿಷೇಧ: ಜಿಲ್ಲಾಧಿಕಾರಿ ಆದೇಶ

Mangaluru ಉಳಾಯಿಬೆಟ್ಟು ಉದ್ಯಮಿಯ ಮನೆ ದರೋಡೆ ಪ್ರಕರಣ: 8 ಮಂದಿ ಪೊಲೀಸರ ವಶಕ್ಕೆ

Mangaluru ಉಳಾಯಿಬೆಟ್ಟು ಉದ್ಯಮಿಯ ಮನೆ ದರೋಡೆ ಪ್ರಕರಣ: 8 ಮಂದಿ ಪೊಲೀಸರ ವಶಕ್ಕೆ

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್‌ ಮೇಲ್ಛಾವಣಿ

Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್‌ ಮೇಲ್ಛಾವಣಿ

Kodagu: ಆನೆ ದಾಳಿ; ರಿಕ್ಷಾ ಜಖಂ, ತೋಟಕ್ಕೆ ಹಾನಿ

Kodagu: ಆನೆ ದಾಳಿ; ರಿಕ್ಷಾ ಜಖಂ, ತೋಟಕ್ಕೆ ಹಾನಿ

Elephant ತುಳಿತದಿಂದ ಜೀವ ಹಾನಿ ತಡೆಗೆ ಕಾರ್ಯಾಗಾರ

Elephant ತುಳಿತದಿಂದ ಜೀವ ಹಾನಿ ತಡೆಗೆ ಕಾರ್ಯಾಗಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1

Renukaswamy: ಕಿರುತೆರೆಯ ಕ್ರೈಮ್‌ ಶೋನಲ್ಲಿ ಪ್ರಸಾರವಾಗಲಿದೆ ರೇಣುಕಾಸ್ವಾಮಿ ಪ್ರಕರಣದ ಕಥೆ?

4

ಇಬ್ಬರು ಪತ್ನಿಯರೊಂದಿಗೆ ಬಿಗ್‌ ಬಾಸ್‌ ಮನೆಗೆ ಬಂದ ಯೂಟ್ಯೂಬರ್:‌ ಯಾರು ಈ ಅರ್ಮಾನ್ ಮಲಿಕ್?

Bigg Boss OTT: ಓಟಿಟಿಯಲ್ಲಿ ಶುರುವಾಯಿತು ಮಿನಿ ಬಿಗ್‌ ಬಾಸ್; ಇಲ್ಲಿದೆ ಸ್ಪರ್ಧಿಗಳ ವಿವರ

Bigg Boss OTT: ಓಟಿಟಿಯಲ್ಲಿ ಶುರುವಾಯಿತು ಮಿನಿ ಬಿಗ್‌ ಬಾಸ್; ಇಲ್ಲಿದೆ ಸ್ಪರ್ಧಿಗಳ ವಿವರ

Ekam web series produced by Rakshit is coming to the audience; Full details are here

ಪ್ರೇಕ್ಷಕರೆದುರು ಬರುತ್ತಿದೆ ರಕ್ಷಿತ್ ನಿರ್ಮಾಣದ Ekam ವೆಬ್ ಸಿರೀಸ್; ಪೂರ್ಣಮಾಹಿತಿ ಇಲ್ಲಿದೆ

OTT release: ರಿಲೀಸ್‌ ಆದ 15 ದಿನಕ್ಕೆ ಓಟಿಟಿಗೆ ಬರಲಿದೆ ʼಗ್ಯಾಂಗ್ಸ್‌ ಆಫ್‌ ಗೋದಾವರಿʼ

OTT release: ರಿಲೀಸ್‌ ಆದ 15 ದಿನಕ್ಕೆ ಓಟಿಟಿಗೆ ಬರಲಿದೆ ʼಗ್ಯಾಂಗ್ಸ್‌ ಆಫ್‌ ಗೋದಾವರಿʼ

MUST WATCH

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

udayavani youtube

ಉಡುಪಿ ಪತ್ರಿಕಾ ಭವನ ಸಮಿತಿ ಸಹಯೋಗದೊಂದಿಗೆ ಪತ್ರಿಕಾ ದಿನಾಚರಣೆ

udayavani youtube

ಸಂಸದೆ ಪ್ರಿಯಾಂಕಾ ಅಭಿನಂದನಾ‌ ಸಮಾವೇಶದಲ್ಲಿ ಸತೀಶ ಜಾರಕಿಹೊಳಿ ಭಾಷಣ

ಹೊಸ ಸೇರ್ಪಡೆ

Road

Traffic Jam: ಬಿ.ಸಿ.ರೋಡು-ಕಲ್ಲಡ್ಕ ಮಧ್ಯೆ ಹದಗೆಟ್ಟ ಹೆದ್ದಾರಿ

ಸೇತುವೆ ದುಃಸ್ಥಿತಿ; ಘನ ವಾಹನ ಸಂಚಾರ ನಿಷೇಧ

Bridge ದುಃಸ್ಥಿತಿ; ಘನ ವಾಹನ ಸಂಚಾರ ನಿಷೇಧ: ಜಿಲ್ಲಾಧಿಕಾರಿ ಆದೇಶ

Mangaluru ಉಳಾಯಿಬೆಟ್ಟು ಉದ್ಯಮಿಯ ಮನೆ ದರೋಡೆ ಪ್ರಕರಣ: 8 ಮಂದಿ ಪೊಲೀಸರ ವಶಕ್ಕೆ

Mangaluru ಉಳಾಯಿಬೆಟ್ಟು ಉದ್ಯಮಿಯ ಮನೆ ದರೋಡೆ ಪ್ರಕರಣ: 8 ಮಂದಿ ಪೊಲೀಸರ ವಶಕ್ಕೆ

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

Rain ಕರಾವಳಿಯಲ್ಲಿ ಸಾಧಾರಣ ಮಳೆ: ಜು. 5ರಿಂದ “ಆರೆಂಜ್‌ ಅಲರ್ಟ್‌’

Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್‌ ಮೇಲ್ಛಾವಣಿ

Shiroor : ಗಾಳಿ ಮಳೆಗೆ ಹಾರಿ ಹೋದ ಹೊಟೇಲ್‌ ಮೇಲ್ಛಾವಣಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.