Ramalinga Reddy ಬಿಜೆಪಿ ಕಾಲದಲ್ಲಿ ಒಂದೇ ವರ್ಷದಲ್ಲಿ 1200 ಕೊಲೆ
ನಮ್ಮ ಸರಕಾರದಲ್ಲೇ ಅಪರಾಧ ಪ್ರಮಾಣ ಕಡಿಮೆ: ಸಚಿವ ರಾಮಲಿಂಗಾರೆಡ್ಡಿ
Team Udayavani, May 19, 2024, 12:14 AM IST
ರಾಮನಗರ: ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಒಂದು ವರ್ಷದಲ್ಲಿ 1,200 ಕೊಲೆಯಾಗಿತ್ತು. ಈಗ ನಾಲ್ಕು ತಿಂಗಳಲ್ಲಿ 400 ಪ್ರಕರಣವಾಗಿದೆ ಎನ್ನುತ್ತಿದ್ದಾರೆ. ಬಿಜೆಪಿ ಸರಕಾರದ ಅವಧಿಗೆ ಹೋಲಿಕೆ ಮಾಡಿದರೆ ನಮ್ಮ ಸರಕಾರದಲ್ಲೇ ಅಪರಾಧ ಪ್ರಮಾಣ ಕಡಿಮೆ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೃಹ ಸಚಿವ ಜಿ. ಪರಮೇಶ್ವರ್ ಅಂಕಿ-ಸಂಖ್ಯೆಗಳ ದಾಖಲೆ ಬಿಡುಗಡೆ ಮಾಡಿದರೆ, ಇಂದು ಅಪರಾಧ ಪ್ರಕರಣ ಹೆಚ್ಚಾಗಿದೆ ಎಂದು ಬೊಬ್ಬೆ ಇಡುತ್ತಿರುವ ವಿಪಕ್ಷದವರು ಬಾಯಿ ಮುಚ್ಚಿಕೊಳ್ಳುತ್ತಾರೆ ಎಂದರು. ಹಿಂದೆ ಬಿಜೆಪಿ ಕಾರ್ಯಕರ್ತರೇ ನೈತಿಕ ಪೊಲೀಸ್‌ಗಿರಿ ಮಾಡುತ್ತಿದ್ದರು. ಬಜರಂಗ ದಳ, ಆರ್‌ಎಸ್‌ಎಸ್ ಜತೆ ಸೇರಿ ಗಲಾಟೆ ಮಾಡಿಸಿದ್ದರು. ಪೊಲೀಸರಿಗೆ ಕೇಸರಿ ಶಾಲು ಹಾಕಿಸಿದ್ದವರು ಎಂದು ವಾಗ್ಧಾಳಿ ನಡೆಸಿದರು.
ದೇವರಾಜೇಗೌಡ ಒಬ್ಬ ಸಕ್ರಿಯ ಬಿಜೆಪಿ ಕಾರ್ಯಕರ್ತನಾಗಿದ್ದು ಅವರ ಮಾತಿಗೆ ಹೆಚ್ಚಿನ ಮಾನ್ಯತೆ ಕೊಡುವ ಅಗತ್ಯವಿಲ್ಲ. ದೇವರಾಜೇಗೌಡ ಜೈಲಿನಿಂದ ಬಂದ ಬಳಿಕ ಸರಕಾರ ಬೀಳುತ್ತೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅವರು ಮೊದಲು ಜೈಲಿನಿಂದ ಹೊರಬರಲಿ. ಆಮೇಲೆ ಸರಕಾರ ಬೀಳುತ್ತಾ, ಇಲ್ವಾ ಅನ್ನೋದನ್ನ ನೋಡೋಣ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.