Actor Jackie Shroff ಹೆಸರು ಬಳಕೆಗೆ ಹೈಕೋರ್ಟ್ ನಿಷೇಧ
Team Udayavani, May 19, 2024, 6:10 AM IST
ಹೊಸದಿಲ್ಲಿ: ನಟ ಜಾಕಿಶ್ರಾಫ್ ಅವರ ವ್ಯಕ್ತಿತ್ವ ಹಾಗೂ ಪ್ರಚಾರದ ಹಕ್ಕುಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ದಿಲ್ಲಿ ಹೈಕೋರ್ಟ್ ಒಂದಷ್ಟು ಸಾಮಾಜಿಕ ಜಾಲತಾಣ ಖಾತೆಗಳನ್ನು ನಿರ್ಬಂಧಿಸಿದೆ. ಕೃತಕ ಬುದ್ಧಿಮತ್ತೆ, ಚಾಟ್ಬಾಟ್ಗಳು ಹಾಗೂ ಇ-ಕಾಮರ್ಸ್ ವೆಬ್ಸೈಟ್ಗಳು ನಟನ ಹೆಸರು, ಧ್ವನಿ ಅಥವಾ ಫೋಟೋಗಳನ್ನು ಅನುಮತಿಯಿ ಲ್ಲದೆ, ಯಾವುದೇ ವಾಣಿಜ್ಯ ಉದ್ದೇಶ ಗಳಿಗೆ ಬಳಸದಂತೆ ಆದೇಶಿಸಿದೆ. ಜಾಕಿಶ್ರಾಫ್ ಹೆಸರು ಬಳಸಿದ್ದ ಕೆಲವು ಅಶ್ಲೀಲ ವೀಡಿಯೋಗಳ ಲಿಂಕ್ಗಳನ್ನು ಅಳಿಸುವಂತೆ ನ್ಯಾ| ಸಂಜೀವ್ ನರುಲ ಅವರಿದ್ದ ಪೀಠವು ತನ್ನ ಮಧ್ಯಾಂತರ ಆದೇಶದಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.