Kapu ಟಿಪ್ಪರ್ಗೆ ಪಿಕಪ್ ಢಿಕ್ಕಿ: ಚಾಲಕ ಗಂಭೀರ
Team Udayavani, May 19, 2024, 1:46 AM IST
ಕಾಪು: ಇಲ್ಲಿನ ಕೊಪ್ಪಲಂಗಡಿಯಲ್ಲಿ ರಸ್ತೆ ಬದಿ ನಿಂತಿದ್ದ ಟಿಪ್ಪರ್ಗೆ ಪಿಕಪ್ ವಾಹನ ಹಿಂದಿನಿಂದ ಢಿಕ್ಕಿ ಹೊಡೆದ ಘಟನೆ ಶನಿವಾರ ಸಂಜೆ ನಡೆದಿದೆ.
ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಪಿಕಪ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಟಿಪ್ಪರ್ನ ಹಿಂಬದಿಗೆ ಢಿಕ್ಕಿ ಹೊಡೆದಿದ್ದು ಪಿಕಪ್ ಚಾಲಕ ಮಂಗಳೂರಿನ ಲತೇಶ್ ತೀವ್ರವಾಗಿ ಗಾಯಗೊಂಡರು.
ಢಿಕ್ಕಿ ಹೊಡೆದ ಪರಿಣಾಮ ಪಿಕಪ್ ಸಂಪೂರ್ಣ ನಜ್ಜುಗುಜ್ಜಾಗಿದ್ದು ಗಂಭೀರ ಗಾಯಗೊಂಡ ಪಿಕಪ್ ಚಾಲಕನನ್ನು ಸ್ಥಳೀಯರು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾಪು ಎಸ್ಐ ಅಬ್ದುಲ್ ಖಾದರ್ ಮತ್ತು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minister Parameshwara; “ನಿರ್ಭಯಾ’ ಪ್ರತೀ ಪಟ್ಟಣಕ್ಕೆ 200 ಕೋಟಿ ರೂ.ಗೆ ಪ್ರಧಾನಿಗೆ ಮನವಿ
Hunsur; ಮನೆಗೆ ಕನ್ನ ಹಾಕಿದ ಕಳ್ಳರಿಂದ ಕೋಟ್ಯಂತರ ರೂ. ನಗ, ನಗದು ದರೋಡೆ
Actor Darshan Case; ಹಣೆಬರಹ ತಪ್ಪಿಸಲು ಸಾಧ್ಯವಿಲ್ಲ: ಶಿವಣ್ಣ
Ballari: ನಾಲ್ವರು ರೈತರಿಂದ ವಿಷಸೇವಿಸಿ ಆತ್ಮಹತ್ಯೆ ಯತ್ನ
Young Farmer; ಅಲ್ಪಾವಧಿಯಲ್ಲಿ ಲಾಭ ತಂದ ಕೊತ್ತಂಬರಿ ಸೊಪ್ಪು; ಯುವ ರೈತನ ಸಾಧನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.