Borderline Personality Disorder: ಬಾರ್ಡರ್‌ಲೈನ್‌ ಪರ್ಸನಾಲಿಟಿ ಡಿಸಾರ್ಡರ್‌

ಮೇ:ಬಾರ್ಡರ್‌ಲೈನ್‌ ಪರ್ಸನಾಲಿಟಿ ಡಿಸಾರ್ಡರ್‌ ಅರಿವು ಮಾಸ

Team Udayavani, May 19, 2024, 1:28 PM IST

8-Borderline-Personality-Disorder

ಬಾರ್ಡರ್‌ಲೈನ್‌ ಪರ್ಸನಾಲಿಟಿ ಡಿಸಾರ್ಡರ್‌ ಎಂದರೇನು?

ಬಾರ್ಡರ್‌ಲೈನ್‌ ಪರ್ಸನಾಲಿಟಿ ಡಿಸಾರ್ಡರ್‌ (ಬಿಪಿಡಿ) ಎಂಬುದು ವ್ಯಕ್ತಿತ್ವಕ್ಕೆ ಸಂಬಂಧಿಸಿದ ಒಂದು ಮನೋರೋಗ. ಇದರಲ್ಲಿ ವ್ಯಕ್ತಿಗೆ ತನ್ನ ಭಾವನೆಗಳನ್ನು ನಿಭಾಯಿಸಲು ಕಷ್ಟವಾಗುತ್ತದೆ. ಸ್ವ-ವ್ಯಕ್ತಿತ್ವಕ್ಕೆ ಸಂಬಂಧಿಸಿದ ತೊಂದರೆಗಳು, ಮನೋಭಾವ ಏರಿಳಿತಗಳು ಮತ್ತು ಹಠಾತ್‌ ಪ್ರವೃತ್ತಿ ಕೂಡ ಇರುತ್ತದೆ. ದೀರ್ಘ‌ಕಾಲೀನ ಅಸ್ಥಿರತೆ ಮತ್ತು ಅಭದ್ರತೆಯ ಸ್ವಭಾವಗಳು ಕೂಡ ಜತೆಗೂಡಿರುತ್ತವೆ.

ಈ ಲಕ್ಷಣಗಳಿಂದಾಗಿ ವ್ಯಕ್ತಿಯು ಹಠಾತ್‌ ಪ್ರವೃತ್ತಿಯ ವರ್ತನೆಗಳಲ್ಲಿ ತೊಡಗಬಹುದು ಮತ್ತು ಕುಟುಂಬ ಸದಸ್ಯರ ಜತೆಗೆ, ಗಮನಾರ್ಹವಾದ ಇತರರ ಜತೆಗೆ, ಗೆಳೆಯ-ಗೆಳತಿಯರ ಜತೆಗೆ ಮತ್ತು ಆಪ್ತರ ಜತೆಗೆ ಕಳಪೆ ಸಂಬಂಧ ಹೊಂದಬಹುದಾಗಿದೆ. ಈ ಅಸ್ವಸ್ಥತೆಯು ಹದಿಹರಯದಲ್ಲಿ ಹೆಚ್ಚು ಕಂಡುಬರುತ್ತದೆ. ವಯಸ್ಸಾದಂತೆ ಕೆಲವೊಮ್ಮೆ ಭಾವನಾತ್ಮಕ ಏರುಪೇರು, ಸಿಟ್ಟು ಮತ್ತು ಹಠಾತ್‌ ಪ್ರವೃತ್ತಿ ಕಡಿಮೆಯಾಗುತ್ತದೆ. ಆದರೆ ಪ್ರಮುಖ ಸಮಸ್ಯೆಗಳಾದ ಸ್ವ-ವ್ಯಕ್ತಿತ್ವ ಮತ್ತು ತಿರಸ್ಕಾರಕ್ಕೆ ಒಳಗಾಗುವ ಭಯ ಮತ್ತು ಸಂಬಂಧಕ್ಕೆ ಸಂಬಂಧಿಸಿದ ಅಸಹಜತೆಗಳು ಮುಂದುವರಿಯುತ್ತವೆ.

ಭಾರತದಲ್ಲಿ ಪ್ರತೀ 1,000 ಮಂದಿಯಲ್ಲಿ 7 ಜನರಿಗೆ ಬಾರ್ಡರ್‌ಲೈನ್‌ ಪರ್ಸನಾಲಿಟಿ ಡಿಸಾರ್ಡರ್‌ ಇರುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಅನೇಕ ಮಂದಿಗೆ ಈ ಅನಾರೋಗ್ಯದ ಬಗ್ಗೆ ಮತ್ತು ಅದನ್ನು ಚಿಕಿತ್ಸೆಯಿಂದ ನಿಭಾಯಿಸಬಹುದು ಎಂಬ ಬಗ್ಗೆ ತಿಳಿವಳಿಕೆ ಇಲ್ಲದಿರುವುದರಿಂದ ಈ ಅಸ್ವಸ್ಥತೆಯ ಪತ್ತೆ ಕಡಿಮೆ ಪ್ರಮಾಣದಲ್ಲಿ ಆಗಿರಬಹುದಾಗಿದೆ. ಈ ಅಸ್ವಸ್ಥತೆಯು ಬೈಪೊಲಾರ್‌ ಡಿಸಾರ್ಡರ್‌, ಖನ್ನತೆ, ಪೋಸ್ಟ್‌ ಟ್ರೊಮಾಟಿಕ್‌ ಸ್ಟ್ರೆಸ್‌ ಡಿಸಾರ್ಡರ್‌ ಮತ್ತು ಆ್ಯಂಕ್ಸೈಟಿ ಡಿಸಾರ್ಡರ್‌ ಆಗಿ ತಪ್ಪಾಗಿಯೂ ಗುರುತಿಸಲ್ಪಡುತ್ತಿದೆ.

ಬಿಪಿಡಿಯ ಲಕ್ಷಣಗಳು ಮತ್ತು ಚಿಹ್ನೆಗಳು ಯಾವುವು?

  1. ತಿರಸ್ಕೃತನಾಗುವ ಭಯ: ಇದಕ್ಕೆ ತುತ್ತಾಗಿರುವ ವ್ಯಕ್ತಿಗಳು ತಿರಸ್ಕೃತರಾಗುವ ಅಥವಾ ಏಕಾಕಿಯಾಗುವ ಭಯ ಹೊಂದಿರುತ್ತಾರೆ. ಸಂಗಾತಿಯು ಕೆಲಸದಿಂದ ತಡವಾಗಿ ಮನೆಗೆ ಬಂದರೂ ಅವರು ತೀವ್ರವಾದ ಭಯಕ್ಕೆ ತುತ್ತಾಗುತ್ತಾರೆ. ಇಂಥವರು ಬೇಡಬಹುದು, ಜೋತುಬೀಳಬಹುದು, ಜಗಳಕ್ಕೆ ಮುಂದಾಗಬಹುದು, ಪ್ರೀತಿಪಾತ್ರರ ಚಲನವಲನಗಳ ಜಾಡು ಹಿಡಿಯಲು ಮುಂದಾಗಬಹುದು ಅಥವಾ ಸಂಗಾತಿಯು ದೀರ್ಘ‌ ಪ್ರವಾಸ ಇತ್ಯಾದಿ ಹೋಗುವುದಕ್ಕೆ ಅಡ್ಡಿಯೊಡ್ಡಬಹುದು. ತನ್ನ ಸಂಗಾತಿಯು ತನ್ನನ್ನು ಶಾಶ್ವತವಾಗಿ ಬಿಟ್ಟು ಹೋಗಬಹುದು ಎಂಬ ಭಯದಲ್ಲಿಯೇ ಬದುಕಬಹುದು. ದುರದೃಷ್ಟವಶಾತ್‌ ಈ ಸ್ವಭಾವವು ಇನ್ನೊಂದು ಕಡೆಯಿಂದ ತಿರಸ್ಕಾರ, ಜಿಗುಪ್ಸೆಗೊಂಡು ಬಿಟ್ಟು ಹೋಗುವಂತಹ ತದ್ವಿರುದ್ಧ ವರ್ತನೆಗೆ ಕಾರಣವಾಗಬಹುದು.
  2. ಅಸ್ಥಿರ ಸಂಬಂಧಗಳು: ಬಿಪಿಡಿ ಹೊಂದಿರುವ ವ್ಯಕ್ತಿಗಳ ಸಂಬಂಧಗಳು ತೀವ್ರ ಮತ್ತು ಕಿರು ಅವಧಿಯವಾಗಿರುತ್ತವೆ. ಇವರು ಪ್ರತೀ ಹೊಸ ವ್ಯಕ್ತಿಯೂ ತನ್ನ ಪ್ರೀತಿಗೆ ಸರಿಹೊಂದುವ ವ್ಯಕ್ತಿ ಎಂದು ಭಾವಿಸಿ ಬೇಗನೆ ಪ್ರೀತಿಸಲು ಆರಂಭಿಸುತ್ತಾರೆ; ಅಷ್ಟೇ ವೇಗವಾಗಿ ನಿರಾಶೆಗೊಳಗಾಗುತ್ತಾರೆ. ಇಂಥವರು ಸಂಬಂಧಗಳನ್ನು ಒಂದೋ ಸಂಪೂರ್ಣ ಇಲ್ಲವೇ ಭಯಾನಕ ಎಂದು ಭಾವಿಸುತ್ತಾರೆ, ಈ ಭಾವನೆಗಳು ಬದಲಾಗುತ್ತಲೂ ಇರುತ್ತವೆ. ಬಿಪಿಡಿ ರೋಗಿಯ ಸಂಗಾತಿ/ ಗೆಳೆಯ-ಗೆಳತಿ/ ಕುಟುಂಬ ಸದಸ್ಯರು ರೋಗಿಯ ಭಾವನಾತ್ಮಕ ಏರುಪೇರುಗಳು ಮತ್ತು ನಿರೀಕ್ಷೆಗಳನ್ನು ನಿಭಾಯಿಸಲು ಸಾಧ್ಯವಾಗದೆ ಸಂಬಂಧಗಳನ್ನು ನಿಭಾಯಿಸುವಲ್ಲಿ ತೀವ್ರ ಸಂಕಷ್ಟ ಅನುಭವಿಸುತ್ತಾರೆ.
  3. ಅಸ್ಥಿರ ಸ್ವ-ವ್ಯಕ್ತಿತ್ವ: ಬಿಪಿಡಿ ರೋಗಿಗಳು ತಪ್ಪಾದ ಅಥವಾ ಅಸ್ಪಷ್ಟ ಸ್ವ-ವ್ಯಕ್ತಿತ್ವ ಹೊಂದಿರುತ್ತಾರೆ ಹಾಗೂ ತಮ್ಮನ್ನು “ಕೆಟ್ಟವರು’ ಎಂದು ಭಾವಿಸಿ ತಪ್ಪಿತಸ್ಥ ಅಥವಾ ನಾಚಿಕೆ ಪಡುತ್ತಾರೆ. ಬಿಪಿಡಿ ರೋಗಿಗಳು ಹಠಾತ್ತನೆ ಮತ್ತು ನಾಟಕೀಯವಾಗಿ ಸ್ವ-ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಬಹುದು, ಇದು ಹಠಾತ್ತನೆ ಗುರಿಗಳನ್ನು, ಅಭಿಪ್ರಾಯಗಳನ್ನು, ವೃತ್ತಿಗಳನ್ನು ಅಥವಾ ಗೆಳೆಯ-ಗೆಳತಿಯರನ್ನು ಬದಲಾಯಿಸಿಕೊಳ್ಳುವುದರಿಂದ ಕಂಡುಬರುತ್ತದೆ.
  4. ಸ್ವಹಾನಿ: ಆತ್ಮಹತ್ಯಾತ್ಮಕ ವರ್ತನೆಯು ಆತ್ಮಹತ್ಯೆಯ ಬಗ್ಗೆ ಆಲೋಚಿಸುವುದು, ಆತ್ಮಹತ್ಯೆಯ ಬೆದರಿಕೆ ಹಾಕುವುದು ಅಥವಾ ನೈಜವಾಗಿ ಆತ್ಮಹತ್ಯೆಯ ಪ್ರಯತ್ನ ಮಾಡುವುದನ್ನು ಒಳಗೊಂಡಿರುತ್ತದೆ. ಮಣಿಕಟ್ಟನ್ನು ಕತ್ತರಿಸಿಕೊಳ್ಳುವುದು/ ಗೀರಿಕೊಳ್ಳುವಂತಹ ಆತ್ಮಹತ್ಯೆಯ ಉದ್ದೇಶದಲ್ಲದ, ಆದರೆ ಸ್ವಯಂ ಹಾನಿ ಮಾಡಿಕೊಳ್ಳುವ ವರ್ತನೆಗಳು ಕೂಡ ಕಂಡುಬರುತ್ತವೆ. ಇಂತಹ ವರ್ತನೆಗಳು ಸಾಮಾನ್ಯವಾಗಿ ಸಂಬಂಧಗಳಲ್ಲಿ ತೊಂದರೆಗಳು ಅಥವಾ ತಿರಸ್ಕಾರದಂತಹ ಸನ್ನಿವೇಶಗಳಿಂದ ಪ್ರಚೋದನೆಗೊಳ್ಳುತ್ತವೆ.
  5. ಹಠಾತ್‌ ಪ್ರವೃತ್ತಿ ಮತ್ತು ಅಪಾಯಕಾರಿ ವರ್ತನೆ: ಅಪಾಯಕಾರಿಯಾಗಿ ವಾಹನ ಚಾಲನೆ, ಜಗಳ, ಜೂಜು, ಮಾದಕ ದ್ರವ್ಯ ವ್ಯಸನ, ಅತಿಯಾಗಿ ಆಹಾರ ಸೇವನೆ ಮತ್ತು/ ಅಥವಾ ಅಸುರಕ್ಷಿತ ಲೈಂಗಿಕ ಚಟುವಟಿಕೆಗಳು ಸಾಮಾನ್ಯವಾಗಿ ಕಂಡುಬರುತ್ತವೆ.
  6. ಸತತವಾದ ಖಾಲಿತನದ ಭಾವನೆ: ಅನೇಕರು ದುಃಖ, ಉದಾಸೀನ, ನಿಷ್ಪ್ರಯೋಜಕ ಅಥವಾ “ಖಾಲಿತನ’ದ ಭಾವನೆ ಅನುಭವಿಸುತ್ತಾರೆ.
  7. ಕ್ಷಿಪ್ರವಾದ ಭಾವನಾತ್ಮಕ ಏರುಪೇರು: ಬಿಪಿಡಿ ರೋಗಿಗಳು ಇತರರ ಬಗ್ಗೆ, ಸ್ವಂತದ ಬಗ್ಗೆ ಮತ್ತು ಸುತ್ತಮುತ್ತಲಿನ ಬಗ್ಗೆ ತಾವು ಹೊಂದಿರುವ ಭಾವನೆಗಳಲ್ಲಿ ಬದಲಾವಣೆಗಳನ್ನು ಅನುಭವಿಸುತ್ತಾರೆ. ಅವೈಚಾರಿಕ ಭಾವನೆಗಳು – ನಿಯಂತ್ರಿಸಲಾಗದ ಸಿಟ್ಟು, ಭಯ, ಆತಂಕ, ದ್ವೇಷ, ದುಃಖ ಮತ್ತು ಪ್ರೀತಿಗಳ ಸಹಿತ- ಆಗಾಗ ಮತ್ತು ಹಠಾತ್ತನೆ ಬದಲಾಗುತ್ತಿರುತ್ತವೆ. ಈ ಏರಿಳಿತಗಳು ಕೆಲವೇ ತಾಸುಗಳ ಕಾಲವಷ್ಟೇ ಇರುತ್ತವೆ ಮತ್ತು ಅಪರೂಪಕ್ಕೆ ಕೆಲವು ದಿನಗಳ ವರೆಗೆ ಇರುತ್ತವೆ.
  8. ಪದೇಪದೆ ರೇಗುವುದು, ವ್ಯಂಗ್ಯವಾಡುವುದು, ಒರಟಾಗಿ ವರ್ತಿಸುವುದು ಅಥವಾ ದೈಹಿಕವಾಗಿ ಜಗಳಕ್ಕಿಳಿಯುವುದು/ ವಸ್ತುಗಳನ್ನು ಎಸೆಯುವುದು ಅಥವಾ ವಸ್ತುಗಳನ್ನು ಒಡೆದು ಹಾಕುವಂತಹ ಸರಿಯಾದುದಲ್ಲದ, ತೀವ್ರವಾದ ಸಿಟ್ಟು.

ಬಾರ್ಡರ್‌ಲೈನ್‌ ಪರ್ಸನಾಲಿಟಿ ಡಿಸಾರ್ಡರ್‌ಗೆ ಚಿಕಿತ್ಸೆ ಹೇಗೆ?

ಬಿಪಿಡಿ ಹೊಂದಿರುವ ರೋಗಿಗಳಲ್ಲಿ ಅನೇಕ ಮಂದಿಗೆ ಸರಿಯಾದ ಚಿಕಿತ್ಸೆಯಿಂದ ರೋಗಲಕ್ಷಣಗಳು ಕಡಿಮೆಯಾಗುತ್ತವೆ ಅಥವಾ ಕಡಿಮೆ ತೀವ್ರತೆ ಹೊಂದುವ ಮೂಲಕ ಕಾರ್ಯಚಟುವಟಿಕೆ ಉತ್ತಮಗೊಳ್ಳಲು ಮತ್ತು ಹೆಚ್ಚು ಉತ್ತಮ ಗುಣಮಟ್ಟದ ಜೀವನ ನಡೆಸಲು ಸಾಧ್ಯವಾಗುತ್ತದೆ.

ತರಬೇತಾದ ಮಾನಸಿಕ ಆರೋಗ್ಯ ವೃತ್ತಿಪರರಿಂದ ಆಪ್ತಸಮಾಲೋಚನೆ ಅಥವಾ ಸೈಕೊಥೆರಪಿಯ ರೂಪಗಳಲ್ಲಿ ಬಿಪಿಡಿಗೆ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.

  1. ಡಯಲೆಕ್ಟಿಕಲ್‌ ಬಿಹೇವಿಯರ್‌ ಥೆರಪಿ (ಡಿಬಿಟಿ): ಈ ಚಿಕಿತ್ಸೆಯನ್ನು ನಿರ್ದಿಷ್ಟವಾಗಿ ಬಿಪಿಡಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ಮನೋಸಂಪೂರ್ಣತೆಯ ಪರಿಕಲ್ಪನೆಯನ್ನು ಉಪಯೋಗಿಸುತ್ತದೆ ಅಥವಾ ವ್ಯಕ್ತಿಯ ಹಾಲಿ ವಾಸ್ತವ ಸ್ಥಿತಿಗತಿ ಮತ್ತು ಮನೋಭಾವ ಸ್ಥಿತಿಯ ಬಗ್ಗೆ ಅರಿವನ್ನು ಮೂಡಿಸುವ ಮೂಲಕ ಕೆಲಸ ಮಾಡುತ್ತದೆ. ಡಿಬಿಟಿಯು ವ್ಯಕ್ತಿಗಳಿಗೆ ತೀವ್ರ ಭಾವನೆಗಳನ್ನು ನಿಭಾಯಿಸಲು, ಸ್ವಹಾನಿ ವರ್ತನೆಗಳನ್ನು ಕಡಿಮೆ ಮಾಡಿಕೊಳ್ಳಲು, ಒತ್ತಡವನ್ನು ಉತ್ತಮವಾಗಿ ನಿರ್ವಹಿಸಲು ಮತ್ತು ಸಂಬಂಧಗಳನ್ನು ಉತ್ತಮಪಡಿಸಿಕೊಳ್ಳುವ ಕೌಶಲಗಳನ್ನು ಕೂಡ ಕಲಿಸುತ್ತದೆ.
  2. ಕೊಗ್ನಿಟಿವ್‌ ಬಿಹೇವಿಯರಲ್‌ ಥೆರಪಿ (ಸಿಬಿಟಿ): ಇದು ಕೂಡ ಇತರರ ಜತೆಗೆ ಸಂವಹನ ನಡೆಸುವಲ್ಲಿ ಅಡಚಣೆಯಾಗುವ ತಪ್ಪು ಗ್ರಹಿಕೆಗಳು ಮತ್ತು ಸಮಸ್ಯೆಗಳಿಂದ ಉಂಟಾಗುವ ಮೂಲ ನಂಬಿಕೆಗಳು ಮತ್ತು ವರ್ತನೆಗಳನ್ನು ಗುರುತಿಸಿ ಬದಲಾಯಿಸಿಕೊಳ್ಳಲು ಸಹಾಯ ಮಾಡುತ್ತದೆ. ಮನೋಭಾವ ಏರಿಳಿತಗಳನ್ನು ಮತ್ತು ಆತಂಕದ ಲಕ್ಷಣಗಳನ್ನು ಕಡಿಮೆ ಮಾಡಿಕೊಳ್ಳಲು ಕೂಡ ಸಿಬಿಟಿಯು ಸಹಾಯ ಮಾಡುತ್ತದೆ ಹಾಗೂ ಸ್ವಯಂ-ಹಾನಿ ಅಥವಾ ಆತ್ಮಹತ್ಯಾತ್ಮಕ ವರ್ತನೆಗಳನ್ನು ಕಡಿಮೆ ಮಾಡಲು ನೆರವಾಗಬಲ್ಲುದು.

ಬಿಪಿಡಿಯ ಜತೆಗೆ ವಿಶೇಷವಾಗಿ ಖನ್ನತೆ ಮತ್ತು ಆತಂಕ ಇತ್ಯಾದಿ ಇತರ ಸಮಸ್ಯೆಗಳು ಕೂಡ ಜತೆಗೂಡಿದ್ದರೆ ಔಷಧಗಳು ಸಹಾಯ ಮಾಡಬಲ್ಲವು. ಸಾಮಾನ್ಯವಾಗಿ ಬಾರ್ಡರ್‌ಲೈನ್‌ ಪರ್ಸನಾಲಿಟಿ ಡಿಸಾರ್ಡರ್‌ನ ವಿವಿಧ ಲಕ್ಷಣಗಳನ್ನು ನಿಭಾಯಿಸಲು ಸೈಕೊಥೆರಪಿಯು ಹೆಚ್ಚು ಪರಿಣಾಮಕಾರಿಯಾದ ಚಿಕಿತ್ಸೆಯ ಆಯ್ಕೆಯಾಗಿರುತ್ತದೆ.

– ಡಾ| ಸೋನಿಯಾ ಶೆಣೈ,

ಅಸೋಸಿಯೇಟ್‌ ಪ್ರೊಫೆಸರ್‌,

ಸೈಕಿಯಾಟ್ರಿ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

Actor Vinayakan: ವಿಮಾನ ನಿಲ್ದಾಣದ ಸಿಬ್ಬಂದಿಗಳ ಜತೆ ವಾಗ್ವಾದ; ನಟ ವಿನಾಯಗನ್ ವಶಕ್ಕೆ

17-desiswara-ganaap

Ganesh Chaturthi Special Story: ವಿಶ್ವಪೂಜಿತ ವಿನಾಯಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11-tooth

Dental Checkup: ದಂತ ವೈದ್ಯಕೀಯ ತಪಾಸಣೆಗಳನ್ನು ತಪ್ಪಿಸಿಕೊಳ್ಳದಿರಿ

10-wayanad

Landslide Survivors: ಭೂಕುಸಿತದಿಂದ ಪಾರಾದವರಿಗೆ ಆಘಾತದಿಂದ ಚೇತರಿಸಿಕೊಳ್ಳಲು ಮಾರ್ಗದರ್ಶಿ

9-cancer

Cancer Symptoms: ಕ್ಯಾನ್ಸರ್‌ನ ಸಾಮಾನ್ಯವಲ್ಲದ ಲಕ್ಷಣಗಳು

8-weight-gain

Weight gain: ಕ್ರೀಡಾಳುಗಳಲ್ಲಿ ತೂಕ ಗಳಿಕೆ- ದೈಹಿಕ, ಮಾನಸಿಕ ಪರಿಣಾಮಗಳ ನಿರ್ವಹಣೆ

4-breastfeeding

Infant’s Immune System: ಶಿಶುವಿನ ರೋಗ ನಿರೋಧಕ ವ್ಯವಸ್ಥೆಗ ಸ್ತನ್ಯಪಾನದಿಂದ ಪ್ರಯೋಜನಗಳು

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.