Pregnant: ಗರ್ಭಾವಸ್ಥೆ – ಬಾಣಂತನದ ಅವಧಿಯ ಮಾನಸಿಕ ಆರೋಗ್ಯ


Team Udayavani, May 19, 2024, 2:13 PM IST

9-pregnant

ಗರ್ಭಾವಸ್ಥೆ ಹಾಗೂ ಬಾಣಂತನವು ಮಹಿಳೆಯ ಜೀವನದಲ್ಲಿ ಮಹತ್ವದ ಘಟನೆಗಳಾಗಿವೆ. ಗರ್ಭಾವಸ್ಥೆ ಹಾಗೂ ಬಾಣಂತನದ ಅವಧಿಯ ಮಾನಸಿಕ ಆರೋಗ್ಯವು ಗರ್ಭಧಾರಣೆಯ ಸಮಯದಿಂದ ಹೆರಿಗೆಯ ಅನಂತರದ ಮೊದಲ ವರ್ಷದವರೆಗಿನ ಮಹಿಳೆಯ ಮಾನಸಿಕ ಸ್ಥಿತಿಯಾಗಿದೆ. ಈ ಅವಧಿಯಲ್ಲಿ ಮಹಿಳೆಯರು ದೈಹಿಕ ಸಂಕಷ್ಟದ ಜತೆಗೆ ಮಾನಸಿಕ ಅಸ್ವಸ್ಥತೆಗಳಿಗೆ ಹೆಚ್ಚು ಗುರಿಯಾಗುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಪ್ರತೀ ಐವರು ಮಹಿಳೆಯರಲ್ಲಿ ಒಬ್ಬರು ಗರ್ಭಾವಸ್ಥೆಯಲ್ಲಿ ಅಥವಾ ಮಗು ಜನನದ ಅನಂತರದ ವರ್ಷದಲ್ಲಿ ಮಾನಸಿಕ ಅನಾರೋಗ್ಯದ ಸ್ಥಿತಿಯನ್ನು ಅನುಭವಿಸುತ್ತಾರೆ. ಪ್ರಪಂಚದಾದ್ಯಂತ ಗರ್ಭಾವಸ್ಥೆಯಲ್ಲಿ ಸುಮಾರು ಶೇ. 10 ಮಹಿಳೆಯರು ಮತ್ತು ಹೆರಿಗೆಯ ಅನಂತರ ಶೇ. 13 ಮಹಿಳೆಯರು ಮಾನಸಿಕ ಅಸ್ವಸ್ಥತೆ, ಪ್ರಾಥಮಿಕವಾಗಿ ಖನ್ನತೆಯನ್ನು ಅನುಭವಿಸುತ್ತಾರೆ. ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಇದು ಇನ್ನೂ ಹೆಚ್ಚಾಗಿರುತ್ತದೆ, ಅಂದರೆ ಗರ್ಭಾವಸ್ಥೆಯಲ್ಲಿ ಶೇ. 15.6 ಮತ್ತು ಹೆರಿಗೆಯ ಅನಂತರ ಶೇ. 19.8. ಒತ್ತಡ, ಖನ್ನತೆ ಮತ್ತು ಆತಂಕದಂತಹ ಕೆಲವು ಗರ್ಭಿಣಿ ಹಾಗೂ ಬಾಣಂತಿಯರ ಮಾನಸಿಕ ಅಸ್ವಸ್ಥತೆಗಳು ಮಹಿಳೆಯರು, ಮಕ್ಕಳು ಮತ್ತು ಕುಟುಂಬಗಳ ಮೇಲೆ ಹಲವಾರು ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತವೆ.

ಇದರಲ್ಲಿ ಕಳಪೆ ತಾಯಿ-ಭ್ರೂಣದ ಬಾಂಧವ್ಯ ಮತ್ತು ಪ್ರತಿಕೂಲ ತಾಯಿಯ ಮತ್ತು ನವಜಾತ ಶಿಶುವಿನ ಫಲಿತಾಂಶಗಳು ಸೇರಿವೆ. ಮಹಿಳೆಯರು ಆಹಾರವನ್ನು ತೆಗೆದುಕೊಳ್ಳಲು ಅಥವಾ ತಮ್ಮನ್ನು ಸರಿಯಾಗಿ ನೋಡಿಕೊಳ್ಳಲು ಆಸಕ್ತಿ ಹೊಂದಿಲ್ಲದಿರಬಹುದು. ಅಲ್ಲದೆ ಅವರು ಖನ್ನತೆ, ತೀವ್ರ ಅನಾರೋಗ್ಯ ಅಥವಾ ಆತ್ಮಹತ್ಯೆಯ ಗಂಭೀರ ಅಪಾಯಗಳಿಗೆ ಒಳಗಾಗಬಹುದು. ಹೆಚ್ಚುವರಿಯಾಗಿ ಅವರ ಶಿಶುಗಳು ಸರಿಯಾದ ಪೋಷಣೆ ಮತ್ತು ಭಾವನಾತ್ಮಕ ಬೆಂಬಲವನ್ನು ಪಡೆಯಲು ಸಾಧ್ಯವಾಗದಿರಬಹುದು.

ಗರ್ಭಾವಸ್ಥೆ ಹಾಗೂ ಬಾಣಂತನದ ಅವಧಿಯ ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಅಪಾಯಕಾರಿ ಅಂಶಗಳು

ಯಾವುದೇ ಮಹಿಳೆಯು ಗರ್ಭಾವಸ್ಥೆ ಹಾಗೂ ಬಾಣಂತನದ ಅವಧಿಯಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಯನ್ನು ಅನುಭವಿಸಬಹುದು. ಆದಾಗ್ಯೂ ಕೆಲವು ಅಂಶಗಳು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ. ಅವುಗಳೆಂದರೆ: ­

  • ಮಾನಸಿಕ ಆರೋಗ್ಯ ಸಮಸ್ಯೆಗಳ ಇತಿಹಾಸ. ಈ ಮೊದಲು ಯಾವುದೇ ಮಾನಸಿಕ ಆರೋಗ್ಯದ ಸಮಸ್ಯೆಗಳಿರುವಂಥದ್ದು. ­
  • ದೈಹಿಕ ಮತ್ತು ಹಾರ್ಮೋನ್‌ ಬದಲಾವಣೆಗಳ ಪರಿಣಾಮ – ಗರ್ಭಾವಸ್ಥೆಯಲ್ಲಿ ಮತ್ತು ಅನಂತರ ದೇಹವು ಅನೇಕ ದೈಹಿಕ ಮತ್ತು ಹಾರ್ಮೋನ್‌ ಬದಲಾವಣೆಗಳಿಗೆ ಒಳಗಾಗುತ್ತದೆ. ­
  • ಕಷ್ಟಕರವಾದ ಹೆರಿಗೆಯ ಅನುಭವಗಳು ­
  • ದೈಹಿಕ, ಲೈಂಗಿಕ, ಅಥವಾ ಭಾವನಾತ್ಮಕ ನಿಂದನೆ, ಅಥವಾ ನಿರ್ಲಕ್ಷ್ಯ. ­
  • ಅಸ್ಥಿರವಾದ ಕುಟುಂಬದ ಪರಿಸ್ಥಿತಿ, ನಮಗೆ ಹತ್ತಿರವಿರುವ ಯಾರನ್ನಾದರೂ ಕಳೆದುಕೊಳ್ಳುವುದು. ­
  • ಕೌಟುಂಬಿಕ ಹಿಂಸೆ ­
  • ಕೆಳಮಟ್ಟದ ಸಾಮಾಜಿಕ ಆರ್ಥಿಕ ಸ್ಥಿತಿ, ಶಿಕ್ಷಣದ ಕೊರತೆ, ಮತ್ತು ನಿರುದ್ಯೋಗ. ­
  • ಅನಪೇಕ್ಷಿತ ಗರ್ಭಧಾರಣೆ. ­
  • ಗಂಡು ಮಗುವೇ ಬೇಕೆಂಬ ಹಂಬಲ ಹಾಗೂ ಒತ್ತಡ ಮತ್ತು ಹೆಣ್ಣು ಮಗುವಿನ ಜನನ.
  •  ದೈಹಿಕ ಆರೋಗ್ಯದ ಸಮಸ್ಯೆಗಳು. ­
  • ಮಾದಕ ದ್ರವ್ಯ ಸೇವನೆ

ಮುಂದಿನ ವಾರಕ್ಕೆ

ಡಾ| ಸವಿತಾ ಪ್ರಭು,

ಅಸಿಸ್ಟೆಂಟ್‌ ಪ್ರೊಫೆಸರ್‌,

ಸೈಕಿಯಾಟ್ರಿಕ್‌ (ಮೆಂಟಲ್‌ ಹೆಲ್ತ್‌) ನರ್ಸಿಂಗ್‌ ವಿಭಾಗ,

ಮಣಿಪಾಲ ಕಾಲೇಜ್‌ ಆಫ್ ನರ್ಸಿಂಗ್‌,

ಮಾಹೆ, ಮಣಿಪಾಲ

-ಡಾ| ಶ್ಯಾಮಲಾ ಜಿ.

ಪ್ರೊಫೆಸರ್‌ ಮತ್ತು ಯೂನಿಟ್‌ ಮುಖ್ಯಸ್ಥರು

ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗ

ಕೆಎಂಸಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ಮತ್ತು ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.