Health: ಸದಾ ಎಚ್ಚರದಿಂದಿರಿ: ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ
Team Udayavani, May 19, 2024, 4:00 PM IST
ದೇಶದಲ್ಲಿ ಜನರು ಅನೇಕ ಕಾಯಿಲೆ ರೋಗದಿಂದ ಬಳಲುತ್ತಿದ್ದಾರೆ. ಕೆಲವು ರೋಗದ ಬಗ್ಗೆ ಜನರಿಗೆ ಮೊದಲಿಗೆ ಅರಿವಿಗೆ ಬರುತ್ತದೆ. ಆದರೆ ಇನ್ನೂ ಕೆಲವು ರೋಗದ ಬಗ್ಗೆ ಜನರಿಗೆ ತಿಳಿಯುವುದೇ ಇಲ್ಲ. ಆದರೂ ಅವುಗಳ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಅಂತಹ ಅಪರೂಪದ ರೋಗಗಳಲ್ಲಿ ಚಾಗಸ್ ರೋಗವು ಒಂದಾಗಿದೆ. ಇದರ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಪ್ರತೀ ವರ್ಷ ಎಪ್ರಿಲ್ 14 ರಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.
ಮೂಕ ಅಥವಾ ಮೌನ ಕಾಯಿಲೆ ಎಂದೂ ಕರೆಯಲ್ಪಡುವ ಚಾಗಸ್ ಕಾಯಿಲೆಯು ಮುಖ್ಯವಾಗಿ ಆರೋಗ್ಯ ಮೇಲೆ ಗಮನವಿರದ ಮತ್ತು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುವ ಬಡ ಜನರ ಮೇಲೆ ಇದು ಹೆಚ್ಚಾಗಿ ಪರಿಣಾಮ ಬೀರುತ್ತದೆ. ಈ ರೋಗವು ನಿಧಾನವಾಗಿ ಮುಂದುವರಿದು ಮತ್ತು ಲಕ್ಷಣರಹಿತವಾಗಿ ತನ್ನ ಪರಿಣಾಮವನ್ನು ತೋರಿಸುತ್ತದೆ. ಇದಕ್ಕೆ ಚಿಕಿತ್ಸೆ ನೀಡದೆ ಹೋದರೆ ಚಾಗಸ್ ಕಾಯಿಲೆಯು ತೀವ್ರವಾದ ಹೃದಯ ಮತ್ತು ಜೀರ್ಣಕಾರಿ ಬದಲಾವಣೆಗಳಿಗೆ ಕಾರಣವಾಗಬಹುದು ಮತ್ತು ಮಾರಕವಾಗಬಹುದು. ಹಾಗಾಗಿ ಈ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಮತ್ತು ಆರಂಭಿಕ ಚಿಕಿತ್ಸೆಯ ಬಗ್ಗೆ ಮತ್ತು ಅದರ ಪ್ರಸರಣದ ಅಡಚಣೆಯ ಜತೆಗೆ ಗುಣಪಡಿಸುವುದು ಅತ್ಯಗತ್ಯವಾಗಿದೆ. ಈ ಜಾಗಸ್ ರೋಗ ದಿನವನ್ನು ಮೊದಲ ಬಾರಿಗೆ ಎಪ್ರಿಲ್ 14, 2022 ರಂದು ಆಚರಿಸಲಾಯಿತು. ಇದರ ಮುಖ್ಯ ಉದ್ದೇಶವೇ ಜನರಲ್ಲಿ ಈ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ.
ಆರಂಭಿಕ ಪತ್ತೆ ಮತ್ತು ಜೀವನವನ್ನು ಕಾಳಜಿ ವಹಿಸುವುದು ಚಾಗಸ್ ಕಾಯಿಲೆಯ ಬಗ್ಗೆ ಸಾರ್ವಜನಿಕ ಅರಿವನ್ನು ಹೆಚ್ಚಿಸಬೇಕು. ಆರಂಭಿಕ ರೋಗನಿರ್ಣಯ ಮತ್ತು ಸಮಗ್ರ ಅನುಸರಣಾ ಉಪಕ್ರಮಗಳಿಗೆ ಹೆಚ್ಚಿನ ಹಣ ಮತ್ತು ಬೆಂಬಲವನ್ನು ಪಡೆದುಕೊಳ್ಳಿ. ಇದು ಅಮೇರಿಕ ಖಂಡದ ಸಾಮಾನ್ಯ ಜನರಲ್ಲಿ ಚಾಗಾಸ್ ರೋಗವು ಪ್ರಚಲಿತವಾಗಿದೆ ಆದರೆ ಇತರ ದೇಶಗಳು ಮತ್ತು ಖಂಡಗಳಲ್ಲಿ ಚಾಗಸ್ ರೋಗವು ಹೆಚ್ಚಾಗಿ ಪತ್ತೆಯಾಗುತ್ತಿದೆ.
ಈ ರೋಗವು ಯಾವುದೇ ರೋಗಲಕ್ಷಣವನ್ನು ಹೊಂದಿರದ ಕಾರಣ ಇದನ್ನು ಸಾಮಾನ್ಯವಾಗಿ ಮೂಕ ಮತ್ತು ನಿಶ್ಯಬ್ಧ ಕಾಯಿಲೆ ಎಂದು ಕರೆಯಲಾಗುತ್ತದೆ. ಪ್ರಪಂಚದಾದ್ಯಂತ ಸುಮಾರು 6-7 ಮಿಲಿಯನ್ ಜನರು ಚಾಗಸ್ ಸೋಂಕಿಗೆ ಒಳಗಾಗುತ್ತಿದ್ದಾರೆ. ಪ್ರತಿ ವರ್ಷ ಈ ರೋಗಕ್ಕೆ 12,000 ಸಾವುಗಳು ಸಂಭವಿಸುತ್ತವೆ. ಹಾಗಾಗಿ ಈ ಬಗ್ಗೆ ಎಚ್ಚರಿಕೆ ವಹಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ.
- ಶೃತಿ ಬೆಳ್ಳುಂಡಗಿ
ವಿವಿ ವಿಜಯಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.