![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
![Actor Darshan: ಪ್ರೇಮ್ – ದರ್ಶನ್ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್ ಪೋಸ್ಟರ್ ಔಟ್](https://www.udayavani.com/wp-content/uploads/2025/02/4-26-415x249.jpg)
Team Udayavani, May 19, 2024, 7:28 PM IST
ಕುಷ್ಟಗಿ: ತಾಲೂಕಿನ ಬಚನಾಳ ಗ್ರಾಮದಲ್ಲಿ ಸಿಡಿಲೆರಗಿದ ಪರಿಣಾಮ ಬಿತ್ತನೆ ಕಾರ್ಯ ಚಟುವಟಿಕೆ ನಿರತ ರೈತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಈಶಪ್ಪ ಕರಡೆಪ್ಪ ಕಳಮಳ್ಳಿ (35) ಸಿಡಿಲಿಗೆ ಬಲಿಯಾದ ಮೃತ ದುರ್ದೈವಿ. ಬಿತ್ತನೆ ಚಟುವಟಿಕೆಯಲ್ಲಿ ನಿರರತಾಗಿದ್ದ ವೇಳೆ ಏಕಾಏಕಿ ಗುಡುಗು ಸಿಡಿಲಿನ ಅಬ್ಬರ ಕಂಡು ಬಂದಿದೆ. ಇನ್ನೇನು ಉಳಿದಿರುವ ಬಿತ್ತನೆ ಕೆಲಸ ಮುಗಿಸುವ ಅವಸರದಲ್ಲಿರುವಾಗ ಸಿಡಿಲು ಏರಗಿದ್ದು ಸ್ಥಳದಲ್ಲಿ ಮೃತಪಟ್ಟಿದ್ದಾರೆ.
ಈಶಪ್ಪ ಪತ್ನಿ ಇಬ್ಬರು ಮಕ್ಕಳನ್ನು ಅಗಲಿದ್ದಾನೆ. ಘಟನಾ ಸ್ಥಳಕ್ಕೆ ತಹಶೀಲ್ದಾರ ರವಿ ಎಸ್ ಅಂಗಡಿ, ಗ್ರೇಡ್-2 ತಹಶೀಲ್ದಾರ ಮುರಳೀಧರ ಮೊಕ್ತೆದಾರ, ಕಂದಾಯ ನಿರೀಕ್ಷಕ ಶರಣಪ್ಪ ದಾಸರ, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ ಕುರ್ಮಾಚಾರಿ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮೃತ ಈಶಪ್ಪ ಕಳಮಳ್ಳಿ ರೈತ ಕುಟುಂಬಕ್ಕೆ 5 ಲಕ್ಷ ರೂ. ವಿಪತ್ತು ಪರಿಹಾರ ನಿಧಿಯ ಚಕ ನ್ನು ತಹಶೀಲ್ದಾರ ರವಿ ಎಸ್. ಅಂಗಡಿ ವಿತರಿಸಿದರು. ಕಳೆದ ಮೇ 11ರಂದು ಹಿರೇಮುಕರ್ತಿನಾಳ ಯುವಕ ಸಿಡಿಲಿಗೆ ಬಲಿಯಾದ 8 ದಿನಗಳಲ್ಲಿ ಮತ್ತೊಬ್ಬ ವ್ಯಕ್ತಿ ಬಲಿಯಾಗಿರುವುದು ದುರಂತವೆನಿಸಿದೆ.
Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…
Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್ ಕೊಪ್ಪಳದಲ್ಲಿ ಆತ್ಮಹ*ತ್ಯೆ
Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು
Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು
Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ
You seem to have an Ad Blocker on.
To continue reading, please turn it off or whitelist Udayavani.