Ayodhya; ‘ಮಂದಿರ-ಮಸೀದಿ’ಸಮಸ್ಯೆಯಲ್ಲ,ಅಭಿವೃದ್ಧಿ ಬಯಸುತ್ತೇವೆ ಎಂದ ಮುಸ್ಲಿಮರು

ರಾಮ ಮಂದಿರ ವಿವಾದಕ್ಕೆ ಅಂತ್ಯ ಹಾಡಿದ್ದೇ ಬಿಜೆಪಿ ಎಂದ ಇಕ್ಬಾಲ್ ಅನ್ಸಾರಿ...

Team Udayavani, May 19, 2024, 8:09 PM IST

1-qweewqe

ಅಯೋಧ್ಯೆ : ರಾಮ ಮಂದಿರ ನಿರ್ಮಾಣವಾಗಿ ರಾಮಲಲ್ಲಾ ಪ್ರಾಣ ಪತಿಷ್ಠಾಪನೆಯಾದ ಬಳಿಕ ಮೊದಲ ಬಾರಿ ರಾಮಜನ್ಮಭೂಮಿ ಅಯೋಧ್ಯೆ ಚುನಾವಣೆ ಎದುರಿಸುತ್ತಿದ್ದು , ಸ್ಥಳೀಯ ಮುಸ್ಲಿಂ ಮುಖಂಡರು ಮತ್ತು ಜನರು’ ನಮಗೆ ಮಂದಿರ-ಮಸೀದಿ’ ಸಮಸ್ಯೆಯಲ್ಲ,ನಾವು ಅಭಿವೃದ್ಧಿ ಬಯಸುತ್ತೇವೆ’ ಎಂದು ಹೇಳಿದ್ದಾರೆ.

ರಾಮಜನ್ಮಭೂಮಿ-ಬಾಬರಿ ಮಸೀದಿ ಪ್ರಕರಣದಲ್ಲಿ ದಾವೆ ಹೂಡಿದ್ದ ಇಕ್ಬಾಲ್ ಅನ್ಸಾರಿ ಸೇರಿದಂತೆ ಹಲವರು ಅಯೋಧ್ಯೆಯ ಅಭಿವೃದ್ಧಿಗೆ ಬಿಜೆಪಿಗೇ ಕ್ರೆಡಿಟ್ ನೀಡಿದ್ದು, ಇತರರು ಲಾಭವನ್ನು ದೇವಾಲಯದ ಪಟ್ಟಣದ ಎಲ್ಲಾ ಭಾಗಗಳಿಗೆ ತಲುಪಿಸಲು ಸಾಕಷ್ಟು ಕೆಲಸ ಮಾಡಬೇಕಾಗಿದೆ ಎಂದು ಭಾವಿಸಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಅನ್ಸಾರಿ “ಚುನಾವಣೆಗಳು ಬಂದಾಗ, ರಾಜಕೀಯ ನಾಯಕರು ತಮ್ಮ ಪಕ್ಷವನ್ನು ಲೆಕ್ಕಿಸದೆ ದೇವರನ್ನು ಸ್ಮರಿಸಲು ಪ್ರಾರಂಭಿಸುತ್ತಾರೆ. ಆದರೆ ಜನರು ಆರೋಗ್ಯ ಮತ್ತು ಶಿಕ್ಷಣ ಸೌಲಭ್ಯಗಳು ಮತ್ತು ಭದ್ರತೆಯನ್ನು ಬಯಸುತ್ತಾರೆ” ಎಂದರು.

”ರಾಮ ಮಂದಿರ ವಿವಾದವನ್ನು ಬಿಜೆಪಿ ಅಂತ್ಯಗೊಳಿಸಿದೆ. ಅಯೋಧ್ಯೆಯಲ್ಲಿ ಬಿಜೆಪಿ ಉತ್ತಮ ಕೆಲಸ ಮಾಡಿದೆ ಮತ್ತು ಅದಕ್ಕೆ ತಕ್ಕ ಶ್ರೇಯಸ್ಸು ಸಿಗಬೇಕು. ಇಲ್ಲಿ ಬಿಜೆಪಿಗೆ ಬಲವಿದೆ. ನನಗೆ ಚುನಾವಣೆಯಲ್ಲಿ ಹೆಚ್ಚಿನ ಆಸಕ್ತಿ ಇಲ್ಲದಿದ್ದರೂ ಮತದಾನದ ದಿನದಂದು ನಾನು ಮತ ಚಲಾಯಿಸುತ್ತೇನೆ” ಎಂದರು.

ರಾಜಕೀಯ ಪಕ್ಷಗಳ ಕಾರ್ಯಕರ್ತರು ಮತ ಕೇಳಲು ತಮ್ಮ ಮನೆಗೆ ಬರುತ್ತಿದ್ದಾರೆ. ಬಿಜೆಪಿಯೇ ನನ್ನನ್ನು ಮೊದಲು ಸಂಪರ್ಕಿಸಿದೆ ಎಂದು ಅನ್ಸಾರಿ ಹೇಳಿದರು.

ಹಲವಾರು ಮುಸ್ಲಿಮರನ್ನು ಮಾತಿಗೆಳೆದ ಪಿಟಿಐ

ತ್ರಿವಳಿ ತಲಾಖ್ ವಿಷಯದಲ್ಲಿ ಬಿಜೆಪಿ ಕೈಗೊಂಡ ತೀರ್ಮಾನಕ್ಕೆ ಮುಸ್ಲಿಂ ಮಹಿಳೆಯರು ಮೆಚ್ಚುಗೆ ಸೂಚಿಸಿದ್ದಾರೆ. ತ್ರಿವಳಿ ತಲಾಖ್ ಮತ್ತು ರಾಜ್ಯದಲ್ಲಿನ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿಸಿದಂತೆ ಬಿಜೆಪಿಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಫೈಜಾಬಾದ್ ಲೋಕಸಭಾ ಕ್ಷೇತ್ರದ ರುದೌಲಿ ವಿಧಾನಸಭಾ ವಿಭಾಗದಲ್ಲಿ ಗಮನಾರ್ಹ ಸಂಖ್ಯೆಯ ಮುಸ್ಲಿಮರು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ಪಡೆದಿದ್ದಾರೆ. ಸ್ಥಳೀಯ ನಿವಾಸಿ ಬಬ್ಲು ಖಾನ್ ಅವರು “ಅಯೋಧ್ಯೆಯಲ್ಲಿ ಅಭಿವೃದ್ಧಿಯ ಹೊಳೆ ಹರಿಯುತ್ತಿದೆ” ಎಂದು ಹೇಳಿದ್ದಾರೆ.

ಅಯೋಧ್ಯೆಯ ಜನರು ತೃಪ್ತರಾಗಿದ್ದಾರೆ ಮತ್ತು ಫೈಜಾಬಾದ್‌ನ ಹಾಲಿ ಬಿಜೆಪಿ ಸಂಸದ ಲಲ್ಲು ಸಿಂಗ್ ಮೂರನೇ ಅವಧಿಗೆ ಮರಳಲಿದ್ದಾರೆ’ ಎಂದು ಕೆಲ ಮುಸ್ಲಿಮರು ಹೇಳಿದ್ದಾರೆ.

ಎಲ್ಲರೂ ಈ ಮಾತನ್ನು ಒಪ್ಪಲಿಲ್ಲ. 25 ವರ್ಷದ ಮೊಹಮ್ಮದ್ ಅಮೀರ್, ‘ಜನರು “ಮಂದಿರ-ಮಸ್ಜಿದ್” ನಲ್ಲಿ ಆಸಕ್ತಿ ಹೊಂದಿಲ್ಲ ಮತ್ತು ಉದ್ಯೋಗಗಳನ್ನು ಬಯಸುತ್ತಾರೆ’ ಎಂದು ಹೇಳಿದ್ದಾರೆ.

“ನಮಗೆ ಉದ್ಯೋಗ ಬೇಕು. ‘ಮಂದಿರ-ಮಸ್ಜಿದ್’ ಸಮಸ್ಯೆ ಇಟ್ಟುಕೊಂಡು ಮನೆ ನಡೆಸಲಾಗುವುದಿಲ್ಲ. ನಾನು ಮುಸ್ಲಿಂ ಎಂಬ ಕಾರಣಕ್ಕೆ ಈ ಮಾತನ್ನು ಹೇಳುತ್ತಿಲ್ಲ, ಉದ್ಯೋಗವಿಲ್ಲದ ವ್ಯಕ್ತಿಯಾಗಿ ಹೇಳುತ್ತಿದ್ದೇನೆ. ‘ಮಂದಿರ-ಮಸೀದಿ’ ಚುನಾವಣೆ ವಿಷಯವಾಗಬಾರದು” ಎಂದರು.

ಅಯೋಧ್ಯೆಯಲ್ಲಿ ಚುನಾವಣ ಕಣದಲ್ಲಿರುವ ಏಕೈಕ ಮುಸ್ಲಿಂ ಸ್ವತಂತ್ರ ಅಭ್ಯರ್ಥಿ ಫರೀದ್ ಸಲ್ಮಾನಿ ಮಾತನಾಡಿ, ”ಕ್ಷೇತ್ರದ ಹೊರವಲಯದಲ್ಲಿ ವಾಸಿಸುವ ಜನರ ಜೀವನವು ಅಭಿವೃದ್ಧಿಯಿಂದ ಅಸ್ಪೃಶ್ಯವಾಗಿದೆ.’ನನ್ನ ಬಾಲ್ಯದಿಂದಲೂ ಕ್ಷೇತ್ರದ ಹೊರ ಪ್ರದೇಶಗಳಲ್ಲಿ, ಅದರಲ್ಲೂ ಹಳ್ಳಿಗಳಲ್ಲಿನ ಸಮಸ್ಯೆಗಳ ಕುರಿತು ಜನಪ್ರತಿನಿಧಿಗಳುಗಮನ ನೀಡಿಲ್ಲ. ಹೆಚ್ಚು ಕಡಿಮೆ ಬದಲಾಗದೆ ಉಳಿದಿವೆ. ಬಹುತೇಕ ಎಲ್ಲ ಜಾತಿಯ ಸಂಸದರು ಮತ್ತು ಶಾಸಕರು ಚುನಾಯಿತರಾಗಿದ್ದಾರೆ ಆದರೆ ಅಭಿವೃದ್ಧಿ ಇನ್ನೂ ಅನೇಕ ಪ್ರದೇಶಗಳನ್ನು ತಲುಪಿಲ್ಲ”ಎಂದು ಹೇಳಿದ್ದಾರೆ.

ಫೈಜಾಬಾದ್ ಲೋಕಸಭಾ ಕ್ಷೇತ್ರ, ದರಿಯಾಬಾದ್, ರುದೌಲಿ, ಮಿಲ್ಕಿಪುರ (SC), ಬಿಕಾಪುರ್ ಮತ್ತು ಅಯೋಧ್ಯೆ ಐದು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು ಇವುಗಳಲ್ಲಿ, ದರಿಯಾಬಾದ್ ನೆರೆಯ ಬಾರಾಬಂಕಿ ಜಿಲ್ಲೆಯಲ್ಲಿದ್ದು ಉಳಿದ ನಾಲ್ಕು ವಿಧಾನಸಭಾ ಕ್ಷೇತ್ರಗಳು ಅಯೋಧ್ಯೆ ಜಿಲ್ಲೆಯಲ್ಲಿವೆ. ಕ್ಷೇತ್ರದಲ್ಲಿ 19,27,459 ಅರ್ಹ ಮತದಾರರಿದ್ದಾರೆ.

ಬಿಜೆಪಿಯ ಸಿಂಗ್ ಮತ್ತು ಸಮಾಜವಾದಿ ಪಕ್ಷದ ಹಾಲಿ ಶಾಸಕ ಅವಧೇಶ್ ಪ್ರಸಾದ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. 13 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಏಳು ಹಂತದ ಚುನಾವಣೆಯ ಐದನೇ ಸುತ್ತಿನಲ್ಲಿ ಮೇ 20 ರಂದು ಮತದಾನ ನಡೆಯಲಿದೆ.

ಟಾಪ್ ನ್ಯೂಸ್

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ ಪಿಎಂ ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್‌ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್‌ ಗೋಪಿ!

1-sadsadasd

Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ

Sometimes governments topple in a single day…: Mamata gives big hint

LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ

Modi pays homage to Mahatma Gandhi and Vajpayee memorial before taking oath

Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

15-bng

Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್‌ಐ ವಿರುದ್ದ ಪೊಲೀಸ್‌ ಆಯುಕ್ತರಿಗೆ ದೂರು

14-bng

Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು

Anmol Buffalo: The price of this Buffalo weighing 1500 kg is Rs 23 crore!

Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!

13-BBK-11

BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್‌ ಗೆ 10 ಕೋಟಿ ರೂಪಾಯಿ ಪಂಗನಾಮ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.