Interview; ಈಗ ಜಾಗತಿಕ ಗುಣಮಟ್ಟದ ಸಂಪುಟ ಟಿಪ್ಪಣಿ: ಮೋದಿ
ಐಎನ್‌ಡಿಐಎ ನಾಯಕರಿಗೆ ದೇಶಕ್ಕಿಂತ ಮಕ್ಕಳ ಅಭಿವೃದ್ಧಿಯೇ ಮುಖ್ಯ...
Team Udayavani, May 20, 2024, 6:40 AM IST
ಹೊಸದಿಲ್ಲಿ: ಕೇಂದ್ರ ಸಚಿವ ಸಂಪುಟ ಸಭೆಗೆ ಬರುವ ಮಸೂದೆ ಕುರಿತಾದ “ಟಿಪ್ಪಣಿ’ಗಳು “ಜಾಗತಿಕ ಗುಣ ಮಟ್ಟದ’ ವರದಿಗಳೊಂದಿಗೆ ಬರುತ್ತವೆ. ಇದರಿಂದಾಗಿ ಜಗ ತ್ತಿನ ಅತ್ಯುತ್ತಮ ಪದ್ಧತಿಗಳೊಂದಿಗೆ ನಮ್ಮ ಕಾನೂ ನನ್ನು ಸಮೀಕರಿಸಲು ಸಾಧ್ಯವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ”ಇತ್ತೀಚಿನ ದಿನಗಳಲ್ಲಿ ನನ್ನ ಸಂಪುಟ ಸಭೆಯಲ್ಲಿ ಹೊಸ ಸಂಪ್ರದಾಯ ಶುರುವಾಗಿದೆ. ಸಂಸತ್ತಿನಲ್ಲಿ ಮಸೂದೆಯನ್ನು ಮುಂಡಿಸುವ ಮೊದಲು ಆ ಮಸೂದೆ ಸಚಿವ ಸಂಪುಟದ ಮುಂದೆ ಚರ್ಚೆಗೆ ಬರುತ್ತದೆ. ಆಗ ಮಸೂದೆ ಜತೆಗೆ ಅಧಿಕಾರಿಗಳು ಜಾಗತಿಕ ಗುಣಮಟ್ಟಕ್ಕೆ ಅನುಗುಣವಾದ ಟಿಪ್ಪಣಿಯನ್ನು ತರುತ್ತಾರೆ. ನಿರ್ದಿಷ್ಟ ಕ್ಷೇತ್ರದಲ್ಲಿ ಯಾವ ದೇಶ ಉತ್ತಮವಾಗಿ ಕಾರ್ಯನಿರ್ವಹಿ ಸು ತ್ತಿದೆ? ನಿಯಮಗಳು ಏನಿವೆ? ನಾವು ಅವುಗಳನ್ನು ಹೇಗೆ ಸಾಧಿಸುವುದು ಇತ್ಯಾದಿ ಮಾಹಿತಿಯು ಅದರಲ್ಲಿ ರು ತ್ತದೆ. ಹೀಗೆ ಮಾಡುವುದರಿಂದ ನಾವು ಪ್ರತೀ ಟಿಪ್ಪಣಿ ಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಸಾಧ್ಯವಾಗು ತ್ತಿದೆ” ಎಂದು ಮೋದಿ ಅವರು ತಿಳಿಸಿದರು.
ದೇಶದ ಸಾಧನೆಗೆ 4 ಎಸ್ ಮಂತ್ರ: ಪ್ರಧಾನಿ ನರೇಂದ್ರ ಮೋದಿ ಅವರು ದೇಶಕ್ಕಾಗಿ “4 ಎಸ್’ ಮಂತ್ರಗಳನ್ನು ಸೂಚಿಸಿದ್ದಾರೆ. “ಸ್ಕೋಪ್”(ಲಕ್ಷ್ಯ) ದೊಡ್ಡದಾಗಿರಬೇಕು. ಅದೇ ರೀತಿ ಸ್ಕೇಲ್ (ವಿಸ್ತಾರ) ಕೂಡ ಬೃಹತ್ ಆಗಿರಬೇಕು ಮತ್ತು ಈ ಎಸ್‌ಗಳೊಂದಿಗೆ ಸ್ಪೀಡ್(ವೇಗ) ಹೊಂದಿಕೊಳ್ಳಬೇಕು. ಆದ್ದ ರಿಂದ ಸ್ಕೋಪ್, ಸ್ಕೇಲ್ ಮತ್ತು ಸ್ಪೀಡ್‌ಗಳ ಜತೆಗೆ ಸ್ಕಿಲ್(ಕೌಶಲ) ಸೇರಬೇಕು. 4 ಎಸ್‌ಗಳನ್ನು ನಾವು ಒಟ್ಟಿಗೆ ತಂದರೆ ನಾವು ಸಾಕಷ್ಟು ಸಾಧನೆ ಮಾಡಬಹುದು ಎಂದಿದ್ದಾರೆ.
ವಿಪಕ್ಷಗಳ ವಿರುದ್ಧ ಹರಿಹಾಯ್ದ ಮೋದಿ: “ಐಎನ್‌ಡಿಐಎ ಯ ನಾಯಕರು ದೇಶದ ಮಕ್ಕಳ ಕಲ್ಯಾಣ ಕೈಗೊಳ್ಳುವುದರ ಬದಲು ತಮ್ಮ ಮಕ್ಕಳ ಅಭಿವೃದ್ಧಿಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದಾರೆಂದು ಮೋದಿ ಆರೋಪಿಸಿದರು. ವಿಪಕ್ಷದ ಎಲ್ಲ ನಾಯಕರು ಒಂದೆಡೆ ಕುಳಿತುಕೊಂಡರೆ, ಇವರು ಇವರ ಪುತ್ರ ಅಥವಾ ಇವರು ಇವರ ತಂದೆ ಎಂದು ಆರಾಮವಾಗಿ ಗುರುತಿಸಬಹುದು. ಐಎನ್‌ಡಿಐಎ ಉದ್ದೇಶ ಸ್ಪಷ್ಟವಾಗಿದೆ ಎಂದರು
ಸೋದರಳಿಯ, ಸೋದರರಿಗೆ ಏನೂ ಮಾಡಬೇಕಿಲ್ಲ
ಭ್ರಷ್ಟಾಚಾರಿಗಳನ್ನು ಜೈಲಿನ ಹೊರಗೆ ಇಡಲು ಬಿಡು ವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿ ದ್ದಾರೆ. ಮೋದಿ ತಮಗಾಗಿ ಆಸ್ತಿ ಮಾಡಿಕೊಳ್ಳು ವುದಿಲ್ಲ. ಅಥವಾ ನನ್ನ ಸೋದರಳಿಯ ಅಥವಾ ಸಹೋದರರಿಗೆ ಮಾಡಬೇಕಾದ್ದೂ ಏನೂ ಇಲ್ಲ ಎಂದು ಮಮತಾ ಸೋದರಳಿ ಯ ಅಭಿಷೇಕ್ ಬ್ಯಾನರ್ಜಿಯರನ್ನು ಪರೋಕ್ಷ ವಾಗಿ ಉಲ್ಲೇಖೀಸಿ ಟೀಕಿಸಿದ್ದಾರೆ. ಜೂ. 4ರ ಬಳಿಕ ಹೊಸ ಸರಕಾರ ರಚನೆಯಾಗಲಿದೆ. ಭ್ರಷ್ಟಾಚಾರಿಗಳ ತಮ್ಮ ಜೀವ ನದ ಉಳಿದ ಅವಧಿಯನ್ನು ಜೈಲಿನಲ್ಲಿ ಕಳೆಯಲಿ ದ್ದಾರೆ. ಅವರ ವಿರುದ್ಧ ಹೆಚ್ಚಿನ ಕಠಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದು ಜನರಿಗೆ ನಾನು ನೀಡುತ್ತಿರುವ ಮತ್ತೂಂದು ಗ್ಯಾರಂಟಿ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Modi 3.0: ಮೊದಲ ದಿನದ ಕಾರ್ಯಾರಂಭದಲ್ಲಿ PM ಕಿಸಾನ್ ಕಡತಕ್ಕೆ ಸಹಿ ಹಾಕಿದ ಪ್ರಧಾನಿ ಮೋದಿ
Modi 3.0: ದಯವಿಟ್ಟು ನನಗೆ ಕೇಂದ್ರ ಸಚಿವ ಸ್ಥಾನ ಬೇಡ…ರಾಜೀನಾಮೆ ಕೊಡ್ತೇನೆ: ಸುರೇಶ್ ಗೋಪಿ!
Richest ; ಮೋದಿ ಸಂಪುಟಕ್ಕೆ ಸೇರ್ಪಡೆಯಾದ ಟಿಡಿಪಿಯ ಅತ್ಯಂತ ಶ್ರೀಮಂತ ಸಂಸದ
LokSabha; ಕೆಲವೊಮ್ಮೆ ಸರ್ಕಾರಗಳು ಒಂದೇ ದಿನಕ್ಕೆ ಉರುಳುತ್ತದೆ…: ದೊಡ್ಡ ಸುಳಿವು ನೀಡಿದ ಮಮತಾ
Modi 3.0; ಪ್ರಮಾಣ ವಚನಕ್ಕೂ ಮುನ್ನ ಮಹಾತ್ಮ ಗಾಂಧಿ, ವಾಜಪೇಯಿ ಸ್ಮಾರಕಕ್ಕೆ ಮೋದಿ ನಮನ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.