Devil; ದರ್ಶನ್ ಚಿತ್ರಕ್ಕೆ ನಾಯಕಿಯಾದ ಕರಾವಳಿ ಬೆಡಗಿ


Team Udayavani, May 20, 2024, 11:19 AM IST

Rachana Rai is the heroine of Darshan’s film Devil

ದರ್ಶನ್‌ ನಾಯಕರಾಗಿರುವ “ಡೆವಿಲ್‌’ ಚಿತ್ರಕ್ಕೆ ನಾಯಕಿ ಯಾರಾಗುತ್ತಾರೆ ಎಂಬ ಕುತೂಹಲ ಸಿನಿಪ್ರೇಮಿಗಳಲ್ಲಿತ್ತು. ಈಗ ಅಂತಿಮವಾಗಿ ಚಿತ್ರಕ್ಕೆ ನಾಯಕಿಯ ಆಯ್ಕೆಯಾಗಿದೆ. ಚಿತ್ರದಲ್ಲಿ ರಚನಾ ರೈ ನಾಯಕಿಯಾಗಿ ನಟಿಸಲಿದ್ದಾರೆನ್ನಲಾಗಿದೆ.

ಕರಾವಳಿ ಮೂಲದ ರಚನಾ ರೈ ಈಗಾಗಲೇ ತುಳುವಿನ “ಸರ್ಕಸ್‌’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇದಲ್ಲದೇ “ವಾಮನ’ ಚಿತ್ರದಲ್ಲೂ ರಚನಾ ನಾಯಕಿಯಾಗಿದ್ದಾರೆ. ಈಗ ದರ್ಶನ್‌ ಚಿತ್ರದಲ್ಲಿ ನಟಿಸುವ ಅವಕಾಶ ರಚನಾ ರೈಗೆ ಸಿಕ್ಕಿದೆ.

ಈಗಾಗಲೇ “ಡೆವಿಲ್‌’ ಚಿತ್ರ ಒಂದು ಹಂತದ ಚಿತ್ರೀಕರಣ ಪೂರೈಸಿದೆ. ಚಿತ್ರೀಕರಣದ ವೇಳೆ ದರ್ಶನ್‌ ಕೈಗೆ ಪೆಟ್ಟಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದರಿಂದಾಗಿ ಕೆಲವು ದಿನಗಳ ಕಾಲ ಚಿತ್ರೀಕರಣಕ್ಕೆ ಬ್ರೇಕ್‌ ನೀಡಲಾಗಿತ್ತು. ಈಗ ಮತ್ತೆ ಚಿತ್ರೀಕರಣಕ್ಕೆ ತಂಡ ಸಿದ್ಧವಾಗುತ್ತಿದೆ. ಮಿಲನಾ ಪ್ರಕಾಶ್‌ ಈ ಚಿತ್ರದ ನಿರ್ದೇಶಕರು. ಈ ಹಿಂದೆ ದರ್ಶನ್‌ ಜೊತೆ ತಾರಕ್‌ ಮಾಡಿದ ಪ್ರಕಾಶ್‌ ಈ ಬಾರಿ ಡೆವಿಲ್‌ ಮಾಡುತ್ತಿದ್ದಾರೆ.

ಕೆಲವು ದಿನಗಳ ಹಿಂದಷ್ಟೇ ಮೇಕಿಂಗ್‌ ವಿಡಿಯೋ ಬಿಡುಗಡೆ ಮಾಡಿತ್ತು ತಂಡ. ಚಿತ್ರದ ಟೀಸರ್‌ನಲ್ಲಿ ದರ್ಶನ್‌ ಹೊಸ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. “ನಮ್ಮ ಮನೆಯಲೊಂದು ಪುಟ್ಟ ಪಾಪು ಇರುವುದು. ಫೋಟೋ ತೆಗೆದರೆ ಅದಕೆ ಬಲು ಕೋಪ ಬರುವುದು. ಫೋಟೋ ತೆಗೆದ ಪಾಪು ಕೈಯ ಮುರಿದು ಬಿಡುವುದು. ಸರ್ಸು ಪಾಪು ಹೆಸರು ಕೇಳಲ್ವ? ಡೆವಿಲ್ ಎಂದು ಹೇಳಿ ದರ್ಶನ್‌ ಅವರು ಜೋರಾಗಿ ನಗುತ್ತಾರೆ. ಈ ಟೀಸರ್‌ ಗಮನ ಸೆಳೆದಿದೆ. ದರ್ಶನ್‌ ಹಾವ-ಭಾವ ಇಷ್ಟ ಆಗಿದೆ. ಅವರ ಲುಕ್‌ ಕೂಡ ಬೇರೆಯದೇ ರೀತಿಯಲ್ಲಿ ಇದೆ.

ಟಾಪ್ ನ್ಯೂಸ್

Hamsa Moily

Bengaluru; ವೀರಪ್ಪ ಮೊಯ್ಲಿ ಅವರಿಗೆ ಪುತ್ರಿ ವಿಯೋಗ; ಹಂಸ ಮೊಯ್ಲಿ ವಿಧಿವಶ

8-health

PCOD (ಪಾಲಿಸಿಸ್ಟಿಕ್‌ ಅಂಡಾಶಯದ ಕಾಯಿಲೆ) ಸಮಸ್ಯೆ ಮತ್ತು ನಿರ್ವಹಣೆ

T20 World Cup: ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ 5 ಪಂದ್ಯಗಳು

T20 World Cup: ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ 5 ಪಂದ್ಯಗಳು

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

During the Lok Sabha election, there was a discussion about caste-wise DCM, but….: hc mahadevappa

Lok Sabha ಚುನಾವಣೆ ವೇಳೆ ಜಾತಿವಾರು ಡಿಸಿಎಂ ಚರ್ಚೆ ನಡೆದಿತ್ತು, ಆದರೆ….: ಮಹಾದೇವಪ್ಪ

7-kodagu

Madikeri: ಜು.1 ರಿಂದ ಭಾರಿ ವಾಹನಗಳ ಸಂಚಾರ ನಿಷೇಧ

2

T20 World Cup: ಭಾರತದ ವಿಶ್ವಕಪ್‌ ಗೆಲುವಿಗೆ 10 ಕಾರಣಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ajagrata producer gave fortuner car gift to the director

Sandalwood; ನಿರ್ದೇಶಕರಿಗೆ ಫಾರ್ಚೂನರ್ ಗಿಫ್ಟ್ ನೀಡಿದ ಅಜಾಗ್ರತ ನಿರ್ಮಾಪಕ

Kannada movie Taj releasing soon

Sandalwood; ಟ್ರೇಲರ್‌ನಲ್ಲಿ ‘ತಾಜ್‌’ ಪ್ರೀತಿ; ಹೊಸಬರ ಚಿತ್ರ ತೆರೆಗೆ ಸಿದ್ಧ

No problem anyone comes in front of Martin…: Producer Uday Mehta

Martin ಮುಂದೆ ಯಾರೇ ಬರಲಿ ನೋ ಪ್ರಾಬ್ಲಂ…: ನಿರ್ಮಾಪಕ ಉದಯ್‌ ಮೆಹ್ತಾ

6

Actor Darshan: ಜೈಲಿನ ಬಳಿ ಯಾರೂ ಬರಬೇಡಿ; ಫ್ಯಾನ್ಸ್‌ಗೆ ದರ್ಶನ್‌ ಮನವಿ

nange allava song

Nange Allava Song; ಸಂಜನಾ ದಾಸ್ ಜತೆಗೆ ಹೆಜ್ಜೆ ಹಾಕಿದ ಸಂಜಿತ್ ಹೆಗ್ಡೆ

MUST WATCH

udayavani youtube

ವಿಧಿಯಾಟಕ್ಕೆ ಬಲಿಯಾದ ಅಂಧರ ಪುಟ್ ಬಾಲ್ ತಂಡದ ಕ್ಯಾಪ್ಟನ್

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

ಹೊಸ ಸೇರ್ಪಡೆ

Hamsa Moily

Bengaluru; ವೀರಪ್ಪ ಮೊಯ್ಲಿ ಅವರಿಗೆ ಪುತ್ರಿ ವಿಯೋಗ; ಹಂಸ ಮೊಯ್ಲಿ ವಿಧಿವಶ

8-health

PCOD (ಪಾಲಿಸಿಸ್ಟಿಕ್‌ ಅಂಡಾಶಯದ ಕಾಯಿಲೆ) ಸಮಸ್ಯೆ ಮತ್ತು ನಿರ್ವಹಣೆ

T20 World Cup: ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ 5 ಪಂದ್ಯಗಳು

T20 World Cup: ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದ್ದ 5 ಪಂದ್ಯಗಳು

ajagrata producer gave fortuner car gift to the director

Sandalwood; ನಿರ್ದೇಶಕರಿಗೆ ಫಾರ್ಚೂನರ್ ಗಿಫ್ಟ್ ನೀಡಿದ ಅಜಾಗ್ರತ ನಿರ್ಮಾಪಕ

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.