Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ


Team Udayavani, May 20, 2024, 3:12 PM IST

7-uv-fusion

ಪ್ರೇಕ್ಷಣೀಯ ಸ್ಥಳಗಳು ತನ್ನೊಳಗಿನ ವೈವಿಧ್ಯತೆಯಿಂದ ಎಲ್ಲರ ಕಣ್ಮನ ಸೆಳೆಯುತ್ತದೆ. ಪ್ರವಾಸಿ ತಾಣಗಳ  ಸೌಂದರ್ಯವನ್ನು ನೋಡಲು ಎರಡು ಕಣ್ಣುಗಳು ಸಾಲದು. ನಮ್ಮ ನಾಡಿನಲ್ಲಿ ಸಾಕಷ್ಟು  ಪ್ರೇಕ್ಷಣೀಯ ಸ್ಥಳಗಳಿವೆ. ಅದು ಮಾನವ ಸೃಷ್ಟಿಯಾಗಿದ್ದಿರಬಹುದು, ಇರದೆಯೂ ಇರಬಹುದು.

ಇಂತಹ ಸ್ಥಳಗಳು ಸಾವಿರಾರು ಜನರ ಮನಸ್ಸನ್ನು ಸೆಳೆಯುತ್ತದೆ. ಪ್ರಕೃತಿ ಸೃಷ್ಟಿಯಾಗಿರುವ ನದಿ, ಹೊಳೆ, ಜಲಪಾತಗಳು ನಮಗೆ ನೋಡಲು ಸಿಕ್ಕಂತ ವರವಾಗಿದೆ. ಆ ನೀರಿನ ರಭಸ, ಗಂಭೀರವಾದ ಸದ್ದು, ಹಾಲ್ನೊರೆಯಂತಹ ಬಣ್ಣ ಆಹಾ! ಭೂಮಿಯ ಮೇಲಿನ ಸ್ವರ್ಗ ವೀಕ್ಷಣೆಯೆಂದರೆ ತಪ್ಪಾಗಲ್ಲ.

ಆದರೆ ಆ ಪ್ರವಾಸಿ ತಾಣಗಳ ಸೌಂದರ್ಯತೆ ಹಾಳು ಮಾಡಬಾರದೆಂದು ಎಚ್ಚರಿಸುವ ನಾಮಫ‌ಲಕಗಳನ್ನು ಕಾಣುತ್ತೇವೆ. ಹೀಗಿದ್ದರೂ ಮೂಡರಂತೆ ವರ್ತಿಸುವ  ಕೆಲವರು ಇಂತಹ ಸ್ಥಳಗಳನ್ನು ಹಾಳು ಮಾಡುತ್ತಿದ್ದಾರೆ.

ಪ್ಲಾಸ್ಟಿಕ್‌ಗಳನ್ನು ಹಾಕಿ ಮಣ್ಣಿನ ಮಾಲಿನ್ಯವನ್ನು ಉಂಟು ಮಾಡುತ್ತಾರೆ. ಅರೆಬರೆಯಾಗಿ ಆಹಾರವನ್ನು ತಿಂದು ಮೀನುಗಳಿಗೆ ಹಾಕುತ್ತಾರೆ. ಮಾನವರು ತಿನ್ನುವ ಹಲವು ಆಹಾರಗಳನ್ನು ಮೀನುಗಳಿಗೆ ಅರಗಿಸಿಕೊಳ್ಳುವ ಸಾಮರ್ಥ್ಯವಿರುವುದಿಲ್ಲ. ಹಾಗೆಯೇ  ಜಲಪಾತದ ತಂಪಾದ ನೀರಿನ ಹನಿಗಳಿಂದ ಸೋಪು, ಶಾಂಪುವಿನಿಂದ  ಸ್ನಾನ ಮಾಡುತ್ತಾರೆ.

ರಾಸಾಯನಿಕ ಅಂಶಗಳು ಒಳಗೊಂಡಿರುವ ಈ ವಸ್ತುಗಳಿಂದ ನೀರಿನೊಳಗೆ ವಾಸವಾಗಿರುವ ಮೀನುಗಳಿಗೆ ಹಾನಿಯನ್ನು ಉಂಟುಮಾಡುತ್ತದೆ. ಹೀಗೆ ಮುಂದುವರೆದರೆ ಮತ್ಸ್ಯ ವರ್ಗವೇ ಅಳಿವಿನಂಚಿಗೆ ತಲುಪಲು ಮಾನವರೇ ಕಾರಣವಾಗುತ್ತಾನೆ.

ಒಂದು ರೀತಿಯಾಗಿ ನೋಡಿದರೆ ಸಾಮಾಜಿಕ ಜಾಲತಾಣದ ಅತಿಯಾದ ಬಳಕೆಯೇ ಮೇಲ್ನೋಟಕ್ಕೆ  ಕಾರಣವೆನ್ನಬಹುದು. ದೃಶ್ಯಗಳನ್ನು ಸೆರೆ ಹಿಡಿಯುವ ಮೂಲಕ ಇತರ ಜನರಿಗೆ ತಲುಪಿಸುತ್ತಾರೆ. ಸ್ಥಳದ  ಶ್ರೇಷ್ಠತೆಯನ್ನು ಹೆಚ್ಚಿಸುತ್ತಾರೆ. ಅದನ್ನು ನೋಡಿ ಬರುವ ಮಾನವರು ನೋಡುವ ಬದಲಿಗೆ ಮಾಲಿನ್ಯ ಮಾಡುವುದೇ ಹೆಚ್ಚು.  ಒಟ್ಟಾರೆಯಾಗಿ ಈ ಸುಂದರ ಪ್ರಕೃತಿಯ ವರವಾದ ಇಂಥ ಸ್ಥಳಗಳನ್ನು ಸ್ವಾರ್ಥಿಯಾದ ಮಾನವ ನಾಶಮಾಡುತ್ತಿದ್ದಾನೆ.

ಇದೇ ಪರಿಸ್ಥಿತಿ ಮುಂದುವರೆದರೆ ಮುಂದೊಂದು ದಿನ ಪ್ರವಾಸಿ ತಾಣಗಳು ನೋಡಲು ಸಿಗುವುದೇ ಕಷ್ಟಕರವಾಗಬಹುದು.  ಮಾನವರಿಗೆ ಇಂಥ ಕೃತ್ಯಗಳನ್ನು ಮಾಡಬಾರದೆಂಬ ಮನವರಿಕೆ ಮೂಡಬೇಕಾಗಿದೆ. ತಮ್ಮಂತೆ ಇತರ ಜಲಚರಗಳಿಗೆ ಬದುಕುವ ಅರ್ಹತೆ ಇದೆ ಎಂಬ ಸತ್ಯ ಮನವರಿಕೆಗೆಯಾಗಬೇಕು. ನಮ್ಮೀ ಪ್ರಕೃತಿಯ ಸೌಂದರ್ಯ ಕಾಪಾಡಲು ಮಾನವರೇ ಮುಂದಾಗಬೇಕು. ಪ್ರವಾಸಿ ತಾಣಗಳನ್ನು ಸ್ವಚ್ಛವಾಗಿಡುವ ಜವಾಬ್ದಾರಿ ನಮ್ಮದ್ದಾಗಿದೆ. ಹಾಗಾಗಿ ಇನ್ನಾದರೂ ಪ್ರವಾಸಿ ತಾಣಗಳನ್ನು ಶುಚಿಯಿಂದಿರಿಸಿ.

-ತೃಪ್ತಿ ಗುಡಿಗಾರ್‌

ಎಂ. ಪಿ. ಎಂ. ಕಾಲೇಜು

ಕಾರ್ಕಳ

ಟಾಪ್ ನ್ಯೂಸ್

Janapada-Academy

Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

ವಕ್ಫ್  ನೋಟಿಸ್‌ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ

Vijayapura-waqf

Waqf Notice: ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಹೋರಾತ್ರಿ ಧರಣಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

Congress: ಸುಳ್ಳು ಗ್ಯಾರಂಟಿಗೆ 3 ರಾಜ್ಯ ನಾಶ: ಪ್ರಧಾನಿ ಮೋದಿ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

PM Modi: ಜನರ ಸಮಸ್ಯೆ ವಿಷಯ ಮಾತಾಡಲಿ: ಮಲ್ಲಿಕಾರ್ಜುನ ಖರ್ಗೆ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ

Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

21

UV Fusion: ಅನುಭವಗಳ ಜಗತ್ತಿನಲ್ಲಿ ಕಾಲೇಜು ದಿನಗಳು

19

UV Fusion: ಕುಟ್ಟಿ ತೆಯ್ಯಂ ಮಕ್ಕಳ ರೂಪದಲ್ಲಿ ಧೈವ

18

UV Fusion: ಇತಿಹಾಸದಲ್ಲಿ ಮರೆಯಾದ ಭೈರಾದೇವಿಯ ಸಾಮ್ರಾಜ್ಯ

17

UV Fusion: ಕಪ್ಪತಗುಡ್ಡ ಕಾಪಾಡಿಕೊಳ್ಳೊಣ

16

UV Fusion; ಅಳಿವಿನ ಕಡೆ ಸಾಗುತಿದೆ ಹಬ್ಬಗಳ ಸಂಸ್ಕೃತಿಯ ಮೆರುಗು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Janapada-Academy

Janapada Academy: ಚಿನ್ನಪ್ಪ ಗೌಡಗೆ ಜೀಶಂಪ, ಬೇವಿನಕಟ್ಟಿಗೆ ಗದ್ದಗಿಮಠ ತಜ್ಞ ಪ್ರಶಸ್ತಿ

High-Court

Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್‌ ಸೂಚನೆ

current

Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು

mob

WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್‌ ಅಧಿಕಾರಿ ದೂರು

AANE 2

Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.