Goa; ಪ್ರವಾಸಿ ತಾಣಗಳಲ್ಲಿ ಈಗ ದೇಶೀಯ ಪ್ರವಾಸಿಗರದ್ದೇ ಹವಾ!
ಟ್ರಾಫಿಕ್ ಜಾಮ್..!ವಾಹನ ಸವಾರರ ಪರದಾಟ
Team Udayavani, May 20, 2024, 6:15 PM IST
ಪಣಜಿ: ಶಾಲಾ ರಜಾ ದಿನದ ಹಿನ್ನೆಲೆಯಲ್ಲಿ ಪ್ರವಾಸಿಗರು ತಮ್ಮ ಮಕ್ಕಳೊಂದಿಗೆ ಕುಟುಂಬ ಸಮೇತರಾಗಿ ಗೋವಾಕ್ಕೆ ಆಗಮಿಸುತ್ತಿದ್ದು ಗೋವಾದ ಬಹುತೇಕ ಪ್ರವಾಸಿ ತಾಣಗಳು ಪ್ರವಾಸಿಗರ ಗರ್ದಿಯಿಂದ ಕೂಡಿರುವ ದೃಶ್ಯ ಕಂಡುಬರುತ್ತಿದೆ. ಸದ್ಯ ಗೋವಾದಲ್ಲಿ ದೇಶೀಯ ಪ್ರವಾಸಿಗರದ್ದೇ ಹವಾ ಎಂಬಂತಾಗಿದೆ.
ಗೋವಾದಲ್ಲಿ ಕಳೆದ ಕೆಲ ದಿನಗಳಿಂದ ವಿದೇಶಿ ಪ್ರವಾಸಿಗರ ಆಗಮನದಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡುಬಂದಿದೆ. ಆದರೆ ದೇಶೀಯ ಪ್ರವಾಸಿಗರು ಮಾತ್ರ ಈ ಕೊರತೆಯನ್ನು ನೀಗಿಸಿದಂತೆ ಕಂಡುಬರುತ್ತಿದೆ. ಗೋವಾದ ಬಹುತೇಕ ಎಲ್ಲ ಪ್ರವಾಸಿ ತಾಣಗಳಲ್ಲಿ ದೇಶೀಯ ಪ್ರವಾಸಿಗರು ಹೆಚ್ಚಾಗಿ ತುಂಬಿರುವ ದೃಶ್ಯ ಕಂಡು ಬರುತ್ತಿದೆ.
ಗೋವಾದ ಕಲಂಗುಟ್, ಮೀರಾಮಾರ್, ದೋನಾಪಾವುಲ್, ಶಿಕೇರಿ, ಮೋರಜಿ ಸೇರಿದಂತೆ ಪ್ರಮುಖ ಬೀಚ್ಗಳು ಪ್ರವಾಸಿಗರ ಗರ್ದಿಯಿಂದ ಕೂಡಿದೆ. ಸದ್ಯ ಶಾಲಾ ರಜಾ ದಿನದ ಹಿನ್ನೆಲೆಯಲ್ಲಿ ಪ್ರವಾಸಿಗರ ಗರ್ದಿ ಕಂಡುಬರುತ್ತಿದೆ.
ಟ್ರಾಫಿಕ್ ಜಾಮ್…!
ಸದ್ಯ ಗೋವಾಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಎಲ್ಲ ರಸ್ತೆಗಳು ಕೂಡ ಟ್ರಾಫಿಕ್ ಜಾಮ್ನಿಂದ ಕೂಡಿರುವ ದೃಶ್ಯ ಕಂಡುಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Power cut shock:ಅದಾನಿ ಕಂಪೆನಿಗೆ ಬಾಂಗ್ಲಾ ಪಾವತಿ ಶುರು
WhatsApp ನಲ್ಲಿ ಧರ್ಮ ಆಧರಿತ ಗುಂಪು: ಕೇರಳ ಐಎಎಸ್ ಅಧಿಕಾರಿ ದೂರು
Elephants; ಮಧ್ಯಪ್ರದೇಶ ಬಳಿಕ ಒಡಿಶಾದಲ್ಲಿ 7 ತಿಂಗಳಿನಲ್ಲಿ 50 ಆನೆಗಳ ಸಾವು
ವಕ್ಫ್ ನೋಟಿಸ್ಗೆ ಬಿಜೆಪಿ ಆಕ್ರೋಶ; ರಾಜ್ಯಾದ್ಯಂತ ಮುಖಂಡರು, ಕಾರ್ಯಕರ್ತರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.