Vijayapura;ದೌರ್ಜನ್ಯದಿಂದ ನೊಂದು ದಯಾ ಮರಣಕ್ಕೆ ಮನವಿ ಸಲ್ಲಿಸಿದ ನಾಲ್ವರ ಕಟುಂಬ

ಪೊಲೀಸರು ರಕ್ಷಣೆ ಕೊಡುತ್ತಿಲ್ಲ... ಸಿಎಂ, ಗೃಹ ಸಚಿವ, ಡಿಸಿ-ಎಸ್ಪಿಗೆ ಮನವಿ

Team Udayavani, May 20, 2024, 10:22 PM IST

1-wqewewqe

ವಿಜಯಪುರ : ಆಸ್ತಿ ವಿಷಯವಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರಿಂದ ಪತಿಯ ಸಹೋದರರು ದೌರ್ಜನ್ಯ ನಡೆಸುತ್ತಿದ್ದಾರೆ. ನಮ್ಮ ಮೇಲೆ ಮಾರಣಾಂತಿಕ ಹಲ್ಲೆ ನಡೆದರೂ ದೂರು ದಾಖಲಿಸಿಕೊಂಡು ರಕ್ಷಣೆ ಕೊಡುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಕಾರಣ ಕುಟುಂಬದ ನಾಲ್ವರಿಗೆ ದಯಾಮರಣ ನೀಡುವಂತೆ ಮಹಿಳೆಯೊಬ್ಬರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರು ಪ್ರತಿನಿಧಿಸುವ ಬಬಲೇಶ್ವರ ವಿಧಾನಸಭೆ ಕ್ಷೇತ್ರದ ದೂಡಿಹಾಳ ಗ್ರಾಮದ ಲಕ್ಷ್ಮಿಬಾಯಿ ಲಕ್ಷ್ಮಣ ಕುಮಟಗಿ ಎಂಬ ಮಹಿಳೆಯೇ ಕುಟುಂಬ ನಾಲ್ವರು ಸದಸ್ಯರಿಗೆ ದಯಾ ಮರಣಕ್ಕೆ ಅವಕಾಶ ಕೋರಿ ಮನವಿ ಮಾಡಿದ್ದಾರೆ.

ಸೋಮವಾರ ಪತಿ ಹಾಗೂ ಹೈಸ್ಕೂಲ್ ಓದುತ್ತಿರುವ ಇಬ್ಬರು ಮಕ್ಕಳೊಂದಿಗೆ ವಿಜಯಪುರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿಗೆ ತೆರಳಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬರೆದಿರುವ ಮನವಿ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.

ನನ್ನ ಪತಿ ಲಕ್ಷ್ಮಣ ಮುಗ್ಧನಿದ್ದು, 7 ಹಾಗೂ 8ನೇ ತರಗತಿ ಓದುತ್ತಿರುವ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಅವರ ಭವಿಷ್ಯ ರೂಪಿಸಲು ನಾನು ಹೆಣಗುತ್ತಿದ್ದೇನೆ. ನನ್ನ ಪತಿಯ ಮೂವರು ಸಹೋರರು ಸೇರಿದಂತೆ ಕುಟುಂಬದ ಜಂಟಿ ಖಾತೆಯಲ್ಲಿ 14 ಎಕರೆ ಜಮೀನಿದ್ದು, ನಮ್ಮ ಪಾಲಿನ ಜಮೀನು ಕೃಷಿ ಮಾಡಲು ಬಿಡುತ್ತಿಲ್ಲ ಎಂದು ದೂರಿದ್ದಾರೆ.

ನಮಗೆ ಗಂಡು ಮಕ್ಕಳಿಲ್ಲ, ಇಬ್ಬರು ಹೆಣ್ಣು ಮಕ್ಕಳು ಮಾತ್ರವಿದ್ದು, ಆಸ್ತಿ ಕೊಡುವುದಿಲ್ಲ ಎಂದು ನನ್ನ ಪತಿಯ ಸಹೋದರರು ಪದೇ ಪದೇ ಜಮೀನಿಗೆ ಬಂದು ದೈಹಿಕ ಹಾಗೂ ಮಾನಸಿಕ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ವಿವರಿಸಿದ್ದಾರೆ.

ತಮ್ಮ ಪತಿ ಲಕ್ಷ್ಮಣ ಇವರ ಸಹೋದರರು ಹಾಗೂ ಅವರ ಕುಟುಂಬ ಸದಸ್ಯರಾದ ವಿಠ್ಠಲ ಕುಮಟಗಿ, ಭರಮಪ್ಪ, ಶಿವಪ್ಪ, ಭೌರವ್ವ, ಇಂದರವ್ವ, ಶ್ರೀಶೈಲ, ಅಯ್ಯಪ್ಪ, ಬೀರಪ್ಪ, ಶಾಂತವ್ವ ಅಸಂಗಿ, ಲಕ್ಷ್ಮೀ ಮರನೂರು, ಸದು ದಳವಾಯಿ, ಮಾಳಪ್ಪ ವಾಲೀಕಾರ, ಅಶೋಕ ವಾಲೀಕಾರ ಇವರ ಹೆಸರಿಂದ ತಮ್ಮ ಕುಟುಂಬದ ಮೇಲೆ ರ್ದರ್ಜನ್ಯ ನಡೆಯುತ್ತಿದೆ ಎಂದು ಲಕ್ಷ್ಮೀಬಾಯಿ ವಿವರಿಸಿದ್ದಾಳೆ.

ಕಳೆದ ವರ್ಷ ನನ್ನ ಹಾಗೂ ನನ್ನ ಪತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಮನೆಯಲ್ಲಿ ನಗದು ಹಾಗೂ ಚಿನ್ನಾಭರಣ ದೋಚಿದ್ದರು. 2023 ಫೆಬ್ರವರಿ 17 ರಂದು ವಿಜಯಪುರ ಬಿಎಲ್‍ಡಿಇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದೆವು ಎಂದು ಫೋಟೋ ಬಿಡುಗಡೆ ಮಾಡಿದ್ದಾಳೆ.

ಆಗ ಬಬಲೇಶ್ವರ ಠಾಣೆಗೆ ತೆರಳಿ ದೂರು ನೀಡಿದ್ದರೂ, ಪೊಲೀಸರು ಆರೋಪಿಗಳನ್ನು ಬಂಧಿಸಲಿಲ್ಲ. ಅಲ್ಲದೇ ಸದರಿ ಕೃತ್ಯಕ್ಕೆ ಸಾಕ್ಷಿಯಾಗಿದ್ದ ನನ್ನ ತಾಯಿ ನೀಲಮ್ಮ ಕಡ್ಲಿಮಟ್ಟಿ ಇವರ ಮೇಲೂ ಹಲ್ಲೆ ನಡೆಸಿದ್ದು, ಸರ್ಕಾರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ವಿವರಿಸಿದ್ದಾರೆ.

ನನ್ನ ಇಬ್ಬರು ಹೆಣ್ಣು ಮಕ್ಕಳು ಶೈಕ್ಷಣಿಕ ಭವಿಷ್ಯಕ್ಕಾಗಿ ವಿಜಯಪುರದ ಖಾಸಗಿ ಶಾಲೆಗಳಿಗೆ ಸೇರಿಸಿದ್ದು, ತೋಟದ ವಸ್ತಿಯಲ್ಲಿ ನಾನು ಹಾಗೂ ನನ್ನ ಪತಿ ಮಾತ್ರ ಇರುತ್ತೇವೆ. ಹೀಗಾಗಿ ನಿರ್ಜನ ಪ್ರದೇಶದಲ್ಲಿ ವಾಸ ಇರುವ ನಮ್ಮ ಮೇಲೆ ಹಗಲು ವೇಳೆಗಿಂತ ರಾತ್ರಿ ವೇಳೆ ಹೆಚ್ಚಾಗಿ ದೌರ್ಜನ್ಯಗಳು ನಡೆಯುತ್ತಿವೆ ಎಂದಿ ವಿವರಿಸಿದ್ದಾರೆ.

ಇದಾದ ಬಳಿಕ ನಾನು ಆಸ್ತಿ ವಿಷಯವಾಗಿ ಕಾನೂನು ಹೋರಾಟಕ್ಕಾಗಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲ ಮುಂದಾಗುತ್ತಲೇ ಮತ್ತೆ ನಮ್ಮ ಕುಟುಂಬದ ಮೇಲೆ ಹಲ್ಲೆ ನಡೆಸಲಾಗುತ್ತಿದೆ. ವಿದ್ಯಾರ್ಥಿನಿಯರಾಗಿರುವ ನನ್ನ ಇಬ್ಬರು ಮಕ್ಕಳಿಗೆ ಹಾಗೂ ನಮಗೆ ರಕ್ಷಣೆ ಇಲ್ಲವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.

ಮೇ 11 ರಂದು ಜಮೀನಿನಲ್ಲಿ ಕೆಲಸ ಮಾಡುವಾಗ ಟ್ರ್ಯಾಕ್ಟರ್‍ನಿಂದ ನಮ್ಮ ಭಾಗದ ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು ನಾಶ ಮಾಡಿ, ನನ್ನ ಮೆಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಈ ಬಾರಿ ಪೊಲೀಸರು ನಾನು ದೂರು ಸ್ವೀಕರಿಸಿದರೂ, ಪ್ರಕರಣ ದಾಖಲಿಸದೇ ಬೆದರಿಸಿ ಕಳಿಸಿದ್ದಾರೆ ಎಂದು ಆರೋಪಿಸಿದ್ದಾಳೆ.

ಇಡೀ ಪ್ರಕರಣದಲ್ಲಿ ಪೊಲೀಸರು ಹಣ- ರಾಜಕೀಯ ಪ್ರಭಾವಕ್ಕೆ ಮಣಿದು ನಮಗೆ ರಕ್ಷಣೆ ನೀಡುತ್ತಿಲ್ಲ. ಆರ್ಥಿಕ ಶಕ್ತಿ, ರಾಜಕೀಯ ಪ್ರಭಾವ ಇಲ್ಲದ ನಮ್ಮ ಕುಟುಂಬಕ್ಕೆ ನಮ್ಮ ದಾಯಾದಿಗಳಿಂದ ಆಗುತ್ತಿರುವ ದೌರ್ಜನ್ಯ ಸಹಿಲು ಸಾಧ್ಯವಾಗುತ್ತಿಲ್ಲ. ಕಾರಣ ಪ್ರಾಥಮಿಕ-ಪೌಢ ಶಾಲೆಯಲ್ಲಿ ಓದುತ್ತಿರುವ ಇಬ್ಬರು ಮಕ್ಕಳೊಂದಿಗೆ ನನಗೆ ಹಾಗೂ ನನ್ನ ಪತಿ ಸೇರಿ ಕುಟುಂಬದ ನಾಲ್ವರಿಗೆ ದಯಾ ಮರಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ.

ದಯಾ ಮರಣ ಕೋರಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಬರೆದಿರುವ ಮನವಿಯನ್ನು ರಾಜ್ಯದ ಗೃಹ ಸಚಿವರು, ಮಾನವ ಹಕ್ಕುಗಳ ಆಯೋಗ, ಪೊಲೀಸ್ ಇಲಾಖೆ ಡಿಜಿಪಿ, ಐಜಿಪಿ, ಎಸ್ಪಿ, ಡಿಎಸ್ಪಿ ಅವರಿಗೆ ಮನವಿ ಸಲ್ಲಿಸಿದ್ದಾಗಿ ಲಕ್ಷ್ಮಿಬಾಯಿ ಹೇಳಿದ್ದಾರೆ.

ಟಾಪ್ ನ್ಯೂಸ್

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Kaalapatthar Movie: ಕಾಲಾಪತ್ಥರ್‌ನಲ್ಲಿ ಬಾಂಡ್ಲಿ ಸದ್ದು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Cycling velodrome: ಸಾಕಾರದತ್ತ ರಾಜ್ಯದ ಮೊದಲ ಸೈಕ್ಲಿಂಗ್‌ ವೆಲೋಡ್ರೋಮ್‌

Arrested: ವಿಜಯಪುರ ಪೊಲೀಸರ ಯಶಸ್ವಿ ಕಾರ್ಯಾಚರಣೆ: ಅಂತರಾಜ್ಯ ನಾಲ್ವರು ಕಳ್ಳರ ಬಂಧನ

Arrested: ವಿಜಯಪುರ ಪೊಲೀಸರ ಯಶಸ್ವಿ ಕಾರ್ಯಾಚರಣೆ: ಅಂತರಾಜ್ಯ ನಾಲ್ವರು ಕಳ್ಳರ ಬಂಧನ

Vijayapura; ಯತ್ನಾಳ ಭಾವಚಿತ್ರವಿದ್ದ ಬೆಂಬಲಿಗರ ಬ್ಯಾನರ್ ಹರಿದ ಕಿಡಿಗೇಡಿಗಳು

Vijayapura; ಯತ್ನಾಳ ಭಾವಚಿತ್ರವಿದ್ದ ಬೆಂಬಲಿಗರ ಬ್ಯಾನರ್ ಹರಿದ ಕಿಡಿಗೇಡಿಗಳು

dw

Muddebihal: ಬೈಕ್ ವ್ಹೀಲಿಂಗ್ ನಾಲ್ವರು ಯುವಕರ ಬಲಿ

Yathanal

Ganesh Festival: ಪ್ರಸಾದಕ್ಕೆ ಪರವಾನಗಿ: ಹಿಂದೂ ಹಬ್ಬಗಳ ಹತ್ತಿಕ್ಕುವ ಪ್ರಯತ್ನ: ಯತ್ನಾಳ್‌

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

19

Ganesh Chaturthi: ನೆನಪಿನ ಬುತ್ತಿಯಾದ ಗಣೇಶ ಹಬ್ಬ

18

Ganesh Chaturthi: ಸ್ವರ್ಣ ಗೌರಿ ಮತ್ತು ವಿಘ್ನ ವಿನಾಯಕನಿಗೊಂದು ನಮನ

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Anna Movie: ಅನ್ನಂ ಪರಬ್ರಹ್ಮ ಸ್ವರೂಪಂ!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

Tommy movie: ಟಾಮಿ ಅವನು ಮತ್ತು ಆರ್‌ಎಕ್ಸ್‌!

22

Ganesh Chaturthi: ಗಣೇಶ ಬಂದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.