Karnataka ಮೇಲ್ಮನೆ ಏರಲು ಮೂರು ಪಕ್ಷದಲ್ಲೂ ಪೈಪೋಟಿ
Team Udayavani, May 21, 2024, 7:30 AM IST
ಬಿಜೆಪಿ
ಬಿಜೆಪಿಯಲ್ಲಿ ಹಾಲಿ ಸದಸ್ಯ ಎನ್.ರವಿಕುಮಾರ್ ಅವರನ್ನು ಮತ್ತೊಂದು ಅವಧಿಗೆ ಆಯ್ಕೆಗೊಳಿಸಬೇಕೆಂಬುದು ಪಕ್ಷದ ವಲಯದಲ್ಲಿ ದೃಢಪಟ್ಟಿದೆ. ಇನ್ನುಳಿದ ಎರಡು ಸ್ಥಾನಗಳನ್ನು ಯಾರಿಗೆ ಕೊಡಬೇಕೆಂಬ ಬಗ್ಗೆ ಪ್ರಾದೇಶಿಕ ಹಾಗೂ ಜಾತಿವಾರು ಚರ್ಚೆ ನಡೆಸಬೇಕಿದೆ. ಇನ್ನೆರಡು ದಿನದಲ್ಲಿ ಈ ಸಂಬಂಧ ಸಭೆ ಸೇರಿ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲು ಬಿಜೆಪಿ ನಿರ್ಧರಿಸಿದೆ. ಮೂರರ ಪೈಕಿ ಒಂದು ಸ್ಥಾನವನ್ನು ಮಾಜಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ನೀಡಬೇಕೆಂಬ ವಾದ ಕರಾವಳಿ ಭಾಗದ ಶಾಸಕರಿಂದ ಕೇಳಿ ಬಂದಿದೆ. ಅದೇ ರೀತಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಗೆ ನೀಡಬೇಕೆಂದು ಒಂದು ವರ್ಗ ಲಾಬಿ ಮಾಡುತ್ತಿದೆ. ಅಂತಿಮವಾಗಿ ಈ ಬಗ್ಗೆ ವರಿಷ್ಠರೇ ತೀರ್ಮಾನ ಕೈಗೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇದೆ. ಆದಾಗಿಯೂ ಈ ಎಲ್ಲ ವಿಚಾರಗಳು ಕೋರ್ ಕಮಿಟಿ ಸಭೆಯಲ್ಲೇ ಇತ್ಯರ್ಥವಾಗಬೇಕಿದ್ದು, ಉತ್ತರ ಕರ್ನಾಟಕ ಭಾಗದಿಂದ ಒಬ್ಬರಿಗಾದರೂ ಅವಕಾಶ ನೀಡಬೇಕಾಗುತ್ತದೆ. ರವಿಕುಮಾರ್ ಹಿಂದುಳಿದ ವರ್ಗಕ್ಕೆ ಸೇರಿರುವುದರಿಂದ ರಘುನಾಥ್ ಮಲ್ಕಾಪುರೆ ಸಹಿತ ಹಿಂದುಳಿದ ವರ್ಗದ ನಾಯಕರು ಮತ್ತೆ ಮೇಲ್ಮನೆ ಪ್ರವೇಶಿಸುವ ಆಸೆ ಕ್ಷೀಣಿಸಲಿದೆ. ರಘು ಕೌಟಿಲ್ಯ, ಮಾಧುಸ್ವಾಮಿ ಕೂಡ ಆಕಾಂಕ್ಷಿಗಳಾಗಿದ್ದಾರೆ.
ಮಹಿಳಾ ಕೋಟಾದಲ್ಲಿ ಒಬ್ಬರಿಗೆ ಅವಕಾಶ ಮಾಡಿಕೊಡಬೇಕೆಂಬ ಪ್ರಬಲ ಆಗ್ರಹವಿದೆ. ಮಾಳವಿಕಾ, ತಾರಾ ಅನುರಾಧಾ, ಶ್ರುತಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಸಹಿತ ಅನೇಕರು ಆಕಾಂಕ್ಷಿಗಳಾಗಿದ್ದಾರೆ.
ಕಾಂಗ್ರೆಸ್
ಪರಿಷತ್ತಿನಲ್ಲಿ ವಿಧಾನಸಭೆ ಸದಸ್ಯ ಬಲದ ಆಧಾರದಲ್ಲಿ ಆಯ್ಕೆಯಾಗುವ ಈ 11 ಸ್ಥಾನಗಳಲ್ಲಿ ಲೆಕ್ಕಾಚಾರದ ಪ್ರಕಾರ 7 ಸ್ಥಾನಗಳು ಕಾಂಗ್ರೆಸ್ ಪಾಲಾಗಲಿವೆ. ಅವುಗಳಿಗೆ ಆಕಾಂಕ್ಷಿಗಳು ಮುಗಿಬಿದ್ದಿದ್ದಾರೆ. ತಮ್ಮ ನಾಯಕರು, ಜಾತಿ, ಪ್ರದೇಶ ಮತ್ತಿತರ ಪ್ರಭಾವ ಬೀರಿ ಅವಕಾಶ ಗಿಟ್ಟಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆದಿದೆ. ಈಗಾಗಲೇ ಅವಧಿ ಮುಗಿದಿರುವ ಕಾಂಗ್ರೆಸ್‌ನ ಅರವಿಂದ ಕುಮಾರ್‌ಅರಳಿ, ಎನ್.ಎಸ್. ಬೋಸರಾಜು, ಕೆ. ಗೋವಿಂದರಾಜು, ಹರೀಶ್ ಕುಮಾರ್ ಜತೆಗೆ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ, ಕೆಪಿಸಿಸಿ ಕಚೇರಿ ಕಾರ್ಯದರ್ಶಿ ಹಾಗೂ ಸುಮಾರು ಕೆಪಿಸಿಸಿಯ 15 ಅಧ್ಯಕ್ಷರೊಂದಿಗೆ ಕೆಲಸ ಮಾಡಿದ ಅನುಭವ ಇರುವ ಎಲ್. ನಾರಾಯಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ (ಆಡಳಿತ) ವಿಜಯ ಮುಳಗುಂದ, ರಮೇಶ್ ಬಾಬು, ಪಕ್ಷದ ಪ್ರಧಾನ ಕಾರ್ಯದರ್ಶಿ ವಿನಯ್ ಕಾರ್ತಿಕ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್. ದ್ವಾರಕಾನಾಥ್, ಕೆಪಿಸಿಸಿ ಮುಖ್ಯ ವಕ್ತಾರ ಎ.ಎನ್. ನಟರಾಜ್‌ಗೌಡ, ಮಹಿಳಾ ಕೋಟಾದಡಿ ಐಶ್ವರ್ಯ ಮಹದೇವ್, ಕವಿತಾ ರೆಡ್ಡಿ, ಕಮಲಾಕ್ಷಿ ರಾಜಣ್ಣ ಮತ್ತಿತರರು ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.
ಜೆಡಿಎಸ್
ಜೆಡಿಎಸ್‌ನಿಂದ ಆಯ್ಕೆಯಾಗಿರುವ ಬಿ.ಎಂ. ಫಾರೂಕ್ ಮರು ಆಯ್ಕೆ ಬಯಸುತ್ತಿದ್ದಾರೆ. ಆದರೆ, ಕಳೆದ ಬಾರಿ ಅವಕಾಶ ಕೊಟ್ಟರೂ ಸಾಧನೆ ಶೂನ್ಯ ಎನ್ನುವ ಮಾತು ಜೆಡಿಎಸ್ ವಲಯದಲ್ಲಿದೆ. ಅಲ್ಲದೆ, ಜವರಾಯಿಗೌಡ ಹಾಗೂ ಕುಪೇಂದ್ರರೆಡ್ಡಿ ಕೂಡ ಆಕಾಂಕ್ಷಿಗಳಾಗಿದ್ದು, ವರಿಷ್ಠರ ಕೃಪೆ ಯಾರ ಮೇಲೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್.ಅಶೋಕ್
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
ಕಸ್ತೂರಿಂಗನ್ ವರದಿ ತಿರಸ್ಕಾರ ಆಗ್ರಹಿಸಿ “ಬೆಂಗಳೂರು ಚಲೋ’
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.