Shirva ಮರಳು ಅಕ್ರಮ ಸಾಗಾಟ: ಟಿಪ್ಪರ್ ವಶ
Team Udayavani, May 21, 2024, 12:08 AM IST
ಶಿರ್ವ: ಕಟಪಾಡಿ- ಶಿರ್ವ-ಬೆಳ್ಮಣ್ ಮುಖ್ಯ ರಸ್ತೆಯ ಪದವು ಜಂಕ್ಷನ್ ಬಳಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್‌ಅನ್ನು ಶಿರ್ವ ಠಾಣಾಧಿಕಾರಿ ಸಕ್ತಿವೇಲು ಇ. ರವಿವಾರ ವಶಕ್ಕೆ ಪಡೆದಿದ್ದಾರೆ.
ಶಿರ್ವ ಪೊಲೀಸರು ರವಿವಾರ ಬೆಳಗ್ಗೆ ಪದವು ಜಂಕ್ಷನ್ ಬಳಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ವೇಳೆ ಬೆಳ್ಮಣ್ ಕಡೆಯಿಂದ ಶಿರ್ವ ಕಡೆಗೆ ಬರುತ್ತಿದ್ದ ಟಿಪ್ಪರನ್ನು ಪೊಲೀಸರು ನಿಲ್ಲಿಸಲು ಸೂಚಿಸಿದಾಗ ಅದರ ಚಾಲಕ ಟಿಪ್ಪರ್‌ನಿಂದ ಇಳಿದು ಓಡಲು ಪ್ರಯತ್ನಿಸಿದ್ದ. ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ಟಿಪ್ಪರ್ ಮಾಲಕ ಅಶ್ವಥ್ ಸೂಚನೆಯಂತೆ ಟಿಪ್ಪರ್‌ನಲ್ಲಿದ್ದ ಮರಳನ್ನು ದ.ಕ. ಜಿಲ್ಲೆಯ ಅಡ್ಡೂರು ಬಳಿಯ ಗುರುಪುರ ನದಿಯಿಂದ ತನಗೆ ಪರಿಚಯವಿಲ್ಲದ ವ್ಯಕ್ತಿಯೊಂದಿಗೆ ಸೇರಿ 3 ಯುನಿಟ್ ಮರಳನ್ನು ಕಳವು ಮಾಡಿ ಟಿಪ್ಪರ್‌ಗೆ ತುಂಬಿಸಿ ಮಾರಾಟ ಮಾಡಲು ಸಾಗಾಟ ನಡೆಸುತ್ತಿರುವುದಾಗಿ ತಿಳಿಸಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್‌ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.