Rain ಕೊಡಗಿನಲ್ಲಿ ಉತ್ತಮ ಮಳೆ: ಅಂಗಡಿ, ಮನೆಗಳಿಗೆ ನುಗ್ಗಿದ ನೀರು
Team Udayavani, May 21, 2024, 12:35 AM IST
ಮಡಿಕೇರಿ: ಮಡಿಕೇರಿ, ಭಾಗಮಂಡಲ, ವೀರಾಜಪೇಟೆ, ಕದನೂರು, ಕಕ್ಕಬ್ಬೆ, ನಾಪೋಕ್ಲು, ಮೂರ್ನಾಡು, ನಂಜರಾ ಯಪಟ್ಟಣ, ಗುಡ್ಡೆಹೊಸೂರು, ಸುಂಟಿಕೊಪ್ಪ, ಕುಶಾಲನಗರ, ಬೈಲುಕುಪ್ಪೆ ಸೇರಿದಂತೆ ಕೊಡಗು ಜಿಲ್ಲೆಯ ಬಹುತೇಕ ಕಡೆ ಉತ್ತಮ ಮಳೆಯಾಗಿದೆ. ಕುಶಾಲನಗರ ಭಾಗದಲ್ಲಿ ಅಂಗಡಿ ಮತ್ತು ಮನೆಗಳಿಗೆ ನೀರು ನುಗ್ಗಿದೆ.
ನಿರಂತರ ಮಳೆಯ ಪರಿಣಾಮ ಮಡಿಕೇರಿ ನಗರದ ರಸ್ತೆಗಳು ಜಲಾವೃತಗೊಂಡವು. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ಮನೆ ಮತ್ತು ಅಂಗಡಿಗಳಿಗೆ ನುಗ್ಗುವ ಆತಂಕ ಸೃಷ್ಟಿಸಿತು. ಸುಂಟಿಕೊಪ್ಪ, ಕುಶಾಲನಗರ, ಬೈಲುಕುಪ್ಪೆ ಭಾಗದಲ್ಲಿ ನಿರಂತರವಾಗಿ ಮಳೆ ಸುರಿದ ಪರಿಣಾಮ ಅಂಗಡಿಗಳು ಮತ್ತು ಮನೆಗಳಿಗೆ ನೀರು ನುಗ್ಗಿದೆ.
ಕುಶಾಲನಗರ ಪುರಸಭೆ ವ್ಯಾಪ್ತಿಯ ಗುಮ್ಮನಕೊಲ್ಲಿ, ವೀರಭೂಮಿ, ಮಂಟಿ ಹಾಗೂ ಅಕ್ಕಪಕ್ಕದ ಬಡಾವಣೆಗಳ ಭಾಗದ ಮಳೆ ನೀರು ಗುಮ್ಮನಕೊಲ್ಲಿ ವಾರ್ಡ್ ನಂಬರ್ ನಾಲ್ಕು ಮತ್ತು ಐದರ ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ. ಕಾಫಿ ಕ್ಯೂರಿಂಗ್ ಸೆಂಟರ್ ಮತ್ತು ಮರದ ಮಿಲ್‌ಗಳಿಗೂ ನೀರು ಹರಿದಿದೆ. ರಸ್ತೆಗಳಲ್ಲಿ ಪ್ರವಾಹದಂತೆ ಬಂದ ನೀರು ಜನರಲ್ಲಿ ಆತಂಕ ಮೂಡಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.