Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ
Team Udayavani, May 22, 2024, 12:42 AM IST
ಮಣಿಪಾಲ/ಬೆಂಗಳೂರು: ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದ್ದು, ಸಿಡಿಲಿಗೆ ಮೂವರು ಸೇರಿ ಒಟ್ಟು ನಾಲ್ವರು ಮೃತಪಟ್ಟಿದ್ದಾರೆ. ಹಲವೆಡೆ ಮನೆಗಳು ಕುಸಿದಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.
ಮೊಳಕಾಲ್ಮೂರು ತಾಲೂಕಿನ ನಿಂಗರಾಜ್ (25), ಚಳ್ಳಕೆರೆ ತಾಲೂಕಿನ ಕೂಲಿ ಕಾರ್ಮಿಕ ಮಹಿಳೆ ಲಕ್ಷ್ಮೀ (60), ಹುಬ್ಬಳ್ಳಿ ನಗರದ ಹೊರವಲಯದ ಅರುಣ ಚುರುಮುರಿ (18) ಸಿಡಿಲು ಬಡಿದು ಮೃತಪಟ್ಟಿ ದ್ದಾರೆ. ಮಳೆ-ಗಾಳಿಗೆ ತುಂಡಾಗಿದ್ದ ವಿದ್ಯುತ್ ಲೈನ್ ಸರಿ ಪಡಿಸು ವಾಗ ಶಾಕ್ ಹೊಡೆದು ಚಿಕ್ಕಮಗಳೂರು ತಾಲೂಕಿನ ಜೀವಿತ್ (23) ಅಸುನೀಗಿದ್ದಾರೆ. ಬೆಳಗಾವಿ ಜಿಲ್ಲೆ ಸಂಬರಗಿಯಲ್ಲಿ ಸಿಡಿಲು ಬಡಿದು ಇಬ್ಬರು ಮಹಿಳೆಯರು ಗಾಯಗೊಂಡಿದ್ದಾರೆ.
ದಾವಣಗೆರೆಯಲ್ಲಿ ಮರ ಬಿದ್ದು ಕಾರು ಜಖಂಗೊಂಡಿದೆ. ಜಗಳೂರು ತಾಲೂಕಿನಲ್ಲಿ ಮೂರು ಮನೆಗಳು ಕುಸಿದಿದ್ದು, ಒಂದು ಹಸು ಸಿಡಿಲಿನಿಂದ ಸಾವನ್ನಪ್ಪಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಶಾಲ್ಮಲಾ ನದಿ ತುಂಬಿ ಹರಿಯುತ್ತಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಮಟ್ಟವೂ ಏರಿಕೆಯಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 6 ಮನೆಗಳು ಕುಸಿದಿದ್ದು, ನಾಲ್ಕು ಹಸುಗಳು ಮೃತಪಟ್ಟಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.