Mysore: ಒಂದೇ ಕುಟುಂಬದ ನಾಲ್ವರು ಸಾವು; ಅನಿಲ ಸೋರಿಕೆ ಶಂಕೆ
Team Udayavani, May 22, 2024, 11:48 AM IST
ಮೈಸೂರು: ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಇಲ್ಲಿನ ಯರಗನಹಳ್ಳಿ ಎಂಬಲ್ಲಿ ಸಂಭವಿಸಿದೆ.
ಪತಿ, ಪತ್ನಿ ಇಬ್ಬರು ಮಕ್ಕಳು ಮಲಗಿದ್ದಲ್ಲಿಯೇ ಸಾವನಪ್ಪಿದ್ದು, ಅನಿಲ ಸೋರಿಕೆಯಿಂದ ಮೃತಪಟ್ಟಿರೋ ಶಂಕೆ ವ್ಯಕ್ತವಾಗಿದೆ.
ಕುಮಾರಸ್ವಾಮಿ(45), ಪತ್ನಿ ಮಂಜುಳ(39)ಮಕ್ಕಳಾದ ಅರ್ಚನಾ(19), ಸ್ವಾತಿ(17) ಮೃತಪಟ್ಟವರು.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಮೈಸೂರು : ಅನಿಲ ಸೋರಿಕೆಯಿಂದ ನಾಲ್ವರು ದುರ್ಮರಣ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾತನಡಿ, ಮೈಸೂರಿನ ಯರಗನಹಳ್ಳಿಯಲ್ಲಿ ಘಟನೆ ನಡೆದಿದೆ. ಮೃತಪಟ್ಟ ನಾಲ್ವರು ಚಿಕ್ಕಮಗಳೂರು ಜಿಲ್ಲೆಯ ಸಕ್ಕರಾಯನ ಪಟ್ಟಣ ಗ್ರಾಮದವರು ಎಂದರು.
ಈ ಕುಟುಂಬ ಮೈಸೂರಿನಲ್ಲಿ ಸುಮಾರು ಮೂವತ್ತು ವರ್ಷಗಳಿಂದ ವಾಸವಿದ್ದಾರೆ. ಇಲ್ಲೆ ಸ್ವಂತ ಮನೆಯಲ್ಲಿ ವಾಸ. ಇಸ್ತ್ರೀ ಕೆಲಸ ಮಾಡಿಕೊಂಡು ಕುಮಾರಸ್ವಾಮಿ ಅವರು ಕುಟುಂಬದಲ್ಲಿ ಜೀವನ ನಡೆಸುತ್ತಿದ್ದರು. ಅವರ ಸಂಬಂಧಿಕರ ಮದುವೆಗೆ ಚಿಕ್ಕಮಗಳೂರಿಗೆ ಹೋಗಿ ಸೋಮವಾರ ಸಂಜೆ ವಾಪಸ್ ಬಂದು ರಾತ್ರಿ ಮನೆಯಲ್ಲಿ ಮಲಗಿದ್ದರು. ಅವರ ಸಂಬಂಧಿಕರು ಕರೆ ಮಾಡಿದರೂ ಸ್ವೀಕರಿಸಿರಲಿಲ್ಲ ಎಂದು ಮಾಹಿತಿ ನೀಡಿದರು.
ಸೋಮವಾರ ರಾತ್ರಿ ಮನೆಯಲ್ಲಿ ಮಲಗಿದ್ದವರು ಬುಧವಾರ ಬೆಳಗಿನ ಜಾವಾ ಆದರೂ ಎದ್ದಿರಲಿಲ್ಲ. ಇವತ್ತು ಮನೆಯ ಅಕ್ಕಪಕ್ಕದವರಿಗೆ ಕುಮಾರಸ್ವಾಮಿ ಇದ್ದಾರ ಎಂಬುದರ ಬಗ್ಗೆ ಕೇಳಿದ್ದಾರೆ. ಆಗ ಅಕ್ಕಪಕ್ಕದವರಿಗೆ ಮನೆಯಲ್ಲಿ ಇದ್ದಾರ ಎಂಬುದರ ಬಗ್ಗೆ ನೋಡಲು ಹೇಳಿದ್ದಾರೆ. ಸ್ಥಳೀಯರು ಬಾಗಿಲು ಬಡಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹೇಳಿದರು.
ತಕ್ಷಣ ಸ್ಥಳೀಯರು ನಮಗೆ ಮಾಹಿತಿ ನೀಡಿದರು. ಆ ಕೂಡಲೇ ನಾವು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ ಎಂದ ಅವರು, ಅದು 10*20 ಅಡಿ ಇರುವ ಚಿಕ್ಕ ಮನೆ. ಮನೆಯ ಹಿಂಬಾಗ ಹಾಗೂ ಮುಂಭಾಗ ಮಾತ್ರ ಕಿಟಕಿ ವ್ಯವಸ್ಥೆ ಇರುವುದು. ಬಟ್ಟೆ, ಇಸ್ತ್ರಿ ಪೆಟ್ಟಿಗೆ, ಗ್ಯಾಸ್ ಬಳಸುತ್ತಿದ್ದರು. ಸೋಮವಾರ ರಾತ್ರಿ ಮನೆಗೆ ಬಂದವರು ಎರಡು ಕಿಟಕಿ ಬಂದ್ ಮಾಡಿ ಮಲಗಿದ್ದರು ಎಂದು ವಿವರಿಸಿದರು.
ಮುಂದುವೆರೆದು, ರೂಂನಲ್ಲಿ ಗಂಡ-ಹೆಂಡತಿ ಹಾಗೂ ಹಾಲ್ ನಲ್ಲಿ ಮಕ್ಕಳಿಬ್ಬರು ಮಲಗಿದ್ದರು. ಈ ವೇಳೆ ಸೋರಿಕೆ ಅನಿಲದಿಂದ ಎಲ್ಲರೂ ಮೃತಪಟ್ಟಿದ್ದಾರೆ. ಎಲ್ಲರ ಕಿವಿ, ಮೂಗು, ಬಾಯಲ್ಲಿ ರಕ್ತ ಸೋರಿಕೆಯಾಗಿತ್ತು. ಗ್ಯಾಸ್ ಸ್ಮೆಲ್ ಬರುತ್ತಿತ್ತು ಎಂದರು.
ಮನೆಯ ಹಿಂದೆ ಕಿಟಕಿ ತೆಗೆದು ನೋಡಿದಾಗಲೂ ಸ್ಮೆಲ್ ಬರುತ್ತಿತ್ತು. ಫೈರ್ ಡಿಪಾರ್ಟ್ಮೆಂಟ್, ಎಫ್ಎಸ್ಐಲ್ ಬಂದು ಬಾಗಿಲು ತೆರೆದರು. ಆಗ ಗ್ಯಾಸ್ ಸ್ಮೆಲ್ ಬರುತ್ತಿತ್ತು. ಆಗ ಎಲ್ಲಾ ಬಾಗಿಲು ತೆರೆದು ನಂತರ ಒಳಗೆ ಹೋಗಿ ನೋಡಿದೆವು ಎಂದು ಮಾಹಿತಿ ನೀಡಿದರು.
ಮನೆಯಲ್ಲಿ ಮೂರು ಸಿಲಿಂಡರ್ ಇದೆ. ಗ್ಯಾಸ್ ಬಳಸಿ ಐರನ್ ಮಾಡುತ್ತಿದ್ದರು. ಹೀಗಾಗಿ ಮೂರು ಸಿಲಿಂಡರ್ ಇತ್ತು ಎಂದು ವಿವರಿಸಿದ ಅವರು ಮೇಲ್ನೋಟಕ್ಕೆ ಒಂದು ಸಿಲಿಂಡರ್ ಮಾತ್ರ ಲೀಕ್ ಆಗಿದೆ. ಉಳಿದ ಎರಡು ಸಿಲಿಂಡರ್ ಖಾಲಿ ಇತ್ತು ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.