Ballari: 55 ಕೆಜಿ ಗಾಂಜಾ ಸಹಿತ ಐವರ ಬಂಧನ
ಆಂಧ್ರದಿಂದ ಗಾಂಜಾ ಬರುತ್ತಿತ್ತು...
Team Udayavani, May 22, 2024, 2:38 PM IST
ಬಳ್ಳಾರಿ: ಜಿಲ್ಲೆಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ 55 ಗಾಂಜಾ ವಶಪಡಿಸಿಕೊಂಡು, ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್ಪಿ ರಂಜಿತ ಕುಮಾರ ಬಂಡಾರು ಹೇಳಿದರು.
ನಗರದ ಎಸ್ಪಿ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 27.50 ಲಕ್ಷ ರೂ. ಮೌಲ್ಯದ 55 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಮೊದಲಿಗೆ ಇಲ್ಲಿನ ಬೈಪಾಸ್ ರಸ್ತೆಯ ಜಾಗೃತಿ ನಗರ ಬ್ರಿಡ್ಜ್ ಸಮೀಪ ಗಾಂಜಾ ಮಾರಾಟ ಮಾಡುತ್ತಿದ್ದ ಕೌಲಬಜಾರ್ ನಿವಾಸಿಗಳಾದ ಮೊಹಮದ್ ಮುಜಾಕೀರ್, ಎಸ್.ರಿಜ್ವಾನ್ ಇಬ್ಬರನ್ನು ಬಂಧಿಸಿ ತನಿಖೆ ನಡೆಸಿದ ವೇಳೆ ಆಂಧ್ರದ ಮೂಲದಿಂದ ಗಾಂಜಾ ಬರುತ್ತಿತ್ತು ಎಂದು ತಿಳಿಸಿದ್ದಾರೆ.
ಕರ್ನೂಲ್ ಜಿಲ್ಲೆಯ ಆರ್.ಅಮೀರ್ , ಆಲೂರಿನ ಬಿ.ಅರವಿಂದ್ ಸೂರ್ಯ ನಾರಾಯಣ ಅವರನ್ನು ವಶಕ್ಕೆ ಪಡೆದು ವಿಚಾರಿಸಿದಾಗ, ಸಂತೆ ಕೂಡ್ಲೂರು ಗ್ರಾಮದ ಆರೋಪಿ ಎಸ್.ರವಿ ಬಂಧಿಸಿದ ವೇಳೆ ಆತನ ಮನೆಯಲ್ಲಿ 55 ಕೆ.ಜಿ ಗಾಂಜಾ ದೊರೆತಿದೆ ಎಂದರು. ಜಿಲ್ಲೆಯಲ್ಲಿ ಗಾಂಜಾ ಬೆಳೆಯುತ್ತಿಲ್ಲ ಆದರೆ, ಆಂಧ್ರದ ಕರ್ನೂಲ್ ಹಾಗೂ ಆದೋನಿ ಜಿಲ್ಲೆಗಳಿಂದ ತರಲಾಗುತ್ತಿದೆ ಎಂಬ ಮಾಹಿತಿಯಿದೆ.
ನಗರದಲ್ಲಿ ಯುವಕರು ಹಾಗೂ ವಿವಿಧ ಕೆಲಸಗಳಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇತ್ತೀಚೆಗೆ ಜಿಲ್ಲೆಯಲ್ಲಿ ಸರಗಳ್ಳತನ ಪ್ರಕರಣಗಳು ದಾಖಲಾಗಿವೆ ಅವುಗಳ ಮೇಲೆ ಕ್ರಮವಹಿಸಲಾಗುವುದು. ಈ ಗಾಂಜಾ ಕುರಿತು ಕೌಲಬಜಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳಿಗೆ ನಗದು ಬಹುಮಾನ ವಿತರಿಸಲಾಗಿದೆ ಎಂದರು.
ಆರು ಅಧಿಕಾರಿಗಳ ಮೇಲೆ ಪ್ರಕರಣ
ಇತ್ತೀಚೆಗೆ ಜಿಂದಾಲ್‌ನಲ್ಲಿ ಮೂವರು ಮೃತಪಟ್ಟ ಪ್ರಕರಣದಲ್ಲಿ ಸೇಫ್ಟಿ ಮ್ಯಾನೆಜರ್, ಸೂಪರ್‌ವೈಸರ್ ಸೇರಿದಂತೆ ಒಟ್ಟು ಆರು ಅಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Kampli; ದರ ಕುಸಿತ: ಭತ್ತ ನೆಲಕ್ಕೆ ಚೆಲ್ಲಿ ರೈತರ ಪ್ರತಿಭಟನೆ
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Sandur By Election; ಕುಟುಂಬ ಸಮೇತ ಮತದಾನ ಮಾಡಿದ ಸಂಸದ ತುಕಾರಾಂ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.