![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, May 22, 2024, 3:52 PM IST
ಹೊಸದಿಲ್ಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ನಿಯಮಿತ ಜಾಮೀನು ಅರ್ಜಿ ಸಲ್ಲಿಸುವ ಕುರಿತು ಜಾರ್ಖಂಡ್‌ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಸುಪ್ರೀಂ ಕೋರ್ಟ್ ಬುಧವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇದರ ಬೆನ್ನಲ್ಲೇ ಜಾರಿ ನಿರ್ದೇಶನಾಲಯ ಮಾಡಿದ ತನ್ನ ಬಂಧನವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸೊರೇನ್ ಹಿಂಪಡೆದಿದ್ದಾರೆ.
ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಸತೀಶ್ ಚಂದ್ರ ಶರ್ಮ ಅವರ ರಜಾಕಾಲದ ಪೀಠ ಸೊರೇನ್ ಅವರ ವಕೀಲ ಕಪಿಲ್ ಸಿಬಲ್ ಅವರಿಗೆ ಮನವಿಯನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿತು. ನ್ಯಾಯಾಲಯವು ಪ್ರಕರಣದ ವಿವರಗಳಿಗೆ ಹೋದರೆ ಅದು ಮಾಜಿ ಮುಖ್ಯಮಂತ್ರಿಗೆ “ಹಾನಿಕಾರಕ” ಎಂದು ಎಚ್ಚರಿಸಿದೆ.
“ನಿಮ್ಮ ನಡವಳಿಕೆಯು ಬಹಳಷ್ಟು ಹೇಳುತ್ತದೆ. ನಿಮ್ಮ ಕಕ್ಷಿದಾರರು ಪ್ರಾಮಾಣಿಕತೆಯೊಂದಿಗೆ ಬರುತ್ತಾರೆ ಎಂದು ನಾವು ನಿರೀಕ್ಷಿಸಿದ್ದೇವೆ ಆದರೆ ನೀವು ವಸ್ತು ಸಂಗತಿಗಳನ್ನು ಹತ್ತಿಕ್ಕಿದ್ದೀರಿ,ನಿಮ್ಮ ನಡವಳಿಕೆಯು ಕಳಂಕರಹಿತವಾಗಿಲ್ಲ ”ಎಂದು ಪೀಠವು ಸಿಬಲ್‌ಗೆ ತಿಳಿಸಿದೆ.
”ಸೊರೇನ್ ಅವರು ಬಂಧನದಲ್ಲಿದ್ದಾರೆ ಮತ್ತು ನ್ಯಾಯಾಲಯಗಳಲ್ಲಿ ಸಲ್ಲಿಸಲಾಗುತ್ತಿರುವ ಅರ್ಜಿಗಳ ಬಗ್ಗೆ ಅವರಿಗೆ ಯಾವುದೇ ಜ್ಞಾನವಿಲ್ಲ” ಎಂದು ಸಮರ್ಥಿಸಲು ಸಿಬಲ್ ಪ್ರಯತ್ನಿಸಿದರು.
Pariksha Pe Charcha: ಸಾರ್ಟ್‌ಫೋನ್‌ಗಿಂತಲೂ ನೀವು ಸಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
Andhra Pradesh: ಚಿಕ್ಕಮ್ಮನ ಮೇಲೆರಗಿದ ಮಗನನ್ನೇ ಕೊಚ್ಚಿ ಕೊಂದ ತಾಯಿ!
ಹೆಚ್ಚು ವರದಕ್ಷಿಣೆ ನೀಡಲಿಲ್ಲವೆಂದು ಸೊಸೆಗೆ HIV ಸೋಂಕಿನ ಇಂಜೆಕ್ಷನ್ ನೀಡಿದ ಅತ್ತೆ ಮಾವ
Valentine’s Day: ಹಳೇ ಗೆಳೆಯನಿಗೆ 100ಪಿಜ್ಜಾ ಆರ್ಡರ್ ಮಾಡಿದ ಯುವತಿ: ಆದರೆ ಟ್ವಿಸ್ಟ್ ಇದೆ
You seem to have an Ad Blocker on.
To continue reading, please turn it off or whitelist Udayavani.