ಓಟಿಟಿಗೆ ಲಗ್ಗೆ ಇಡಲಿದೆ ಪೃಥ್ವಿರಾಜ್ ʼಆಡುಜೀವಿತಂʼ: ಈ ದಿನ ಸ್ಟ್ರೀಮಿಂಗ್ ಆಗೋದು ಪಕ್ಕಾ?
Team Udayavani, May 22, 2024, 6:39 PM IST
ಕೊಚ್ಚಿ: ಪೃಥ್ವಿರಾಜ್ ಸುಕುಮಾರನ್ ಅಭಿನಯದ ʼಆಡುಜೀವಿತಂʼ ಈ ವರ್ಷ ಮಾಲಿವುಡ್ ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾಗಳಲ್ಲಿ ಒಂದು.
ಬ್ಲೆಸ್ಸಿ ನಿರ್ದೇಶನದ ನೈಜ ಕಥಾಹಂದರದ ಈ ಸಿನಿಮಾ ಇದೇ ವರ್ಷದ ಮಾ.28 ರಂದು ರಿಲೀಸ್ ಆಗಿತ್ತು. ಕೇರಳ ಮಾತ್ರವಲ್ಲದೆ ಸಿನಿಮಾಕ್ಕೆ ಇತರೆ ಕಡೆಯಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು. 60 ದಿನಗಳ ಕಾಲ ಥಿಯೇಟರ್ ಯಶಸ್ವಿಯಾಗಿ ಪ್ರದರ್ಶನ ಕಂಡ ಬಳಿಕ ಇದೀಗ ಓಟಿಟಿ ಸ್ಟ್ರೀಮಿಂಗ್ ಗೆ ರೆಡಿಯಾಗಿದೆ.
ನಜೀಬ್ ಹೆಸರಿನ ವ್ಯಕ್ತಿ ಸೌದಿ ಅರೇಬಿಯಾಗೆ ಕೆಲಸ ಅರಸಿ ಹೋಗುತ್ತಾರೆ. ಅಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಹಲವು ವರ್ಷಗಳ ತೊಂದರೆ ಬಳಿಕ ಅವರು ದೇಶಕ್ಕೆ ಮರಳುವ ಕಥೆಯನ್ನು ಭಾವನಾತ್ಮಕವಾಗಿ ನೈಜ ರೀತಿಯಲ್ಲೇ ತೋರಿಸಲಾಗಿದೆ.
ಪೃಥ್ವಿರಾಜ್ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತವಾಗಿತ್ತು. ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ 150 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.
ಇದೀಗ ಓಟಿಟಿ ಇದೇ ಮೇ.26 ರಿಂದ ಸಿನಿಮಾ ಡಿಸ್ನಿ + ಹಾಟ್ ಸ್ಟಾರ್ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಮಲಯಾಳಂ, ತಮಿಳು, ಹಿಂದಿ, ತೆಲುಗು ಮತ್ತು ಕನ್ನಡದಲ್ಲಿ ಸಿನಿಮಾ ಸ್ಟ್ರೀಮ್ ಆಗಲಿದೆ ಎಂದು ʼಓಟಿಟಿ ಪ್ಲೇʼ ವರದಿ ಮಾಡಿದೆ.
ಆದರೆ ಅಧಿಕೃತವಾಗಿ ಸಿನಿಮಾ ತಂಡ ಇನ್ನಷ್ಟೇ ಈ ಬಗ್ಗೆ ಅಪ್ಡೇಟ್ ನೀಡಬೇಕಿದೆ. ಬಹುತೇಕ ಇದೇ ದಿನ ಸಿನಿಮಾ ಓಟಿಟಿಗೆ ಬರುವುದಾಗಿ ಹೇಳಲಾಗುತ್ತಿದೆ.
ಓಟಿಟಿಯಲ್ಲಿ ಸಿನಿಮಾದ ಅವಧಿ ಇನ್ನಷ್ಟು ಹೆಚ್ಚಾಗಿರಲಿದೆ ಎನ್ನಲಾಗಿದೆ. 3 ಗಂಟೆ 30 ನಿಮಿಷದ ಅವಧಿ ಇರಲಿದೆ ಎನ್ನಲಾಗಿದೆ.
ಪೃಥ್ವಿರಾಜ್ ಜೊತೆ ಸಿನಿಮಾದಲ್ಲಿ ಅಮಲಾ ಪೌಲ್, ಕೆಆರ್ ಗೋಕುಲ್ , ಜಿಮ್ಮಿ ಜೀನ್-ಲೂಯಿಸ್ ನಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನನ್ನ ನಾಯಿಗಳಿಗೆ ಕ್ರಾಸಿಂಗ್ ಮಾಡಿಸಬೇಕು.. ಸೋನು ನ್ಯೂ ಇಯರ್ ರೆಸಲ್ಯೂಷನ್ ಏನೇನು ಗೊತ್ತಾ?
BBK11: ನೀವೆಷ್ಟು ಕಳಪೆ ಕೊಟ್ರು ನನ್ನ ಮಗಳು ನಮಗೆ ಉತ್ತಮನೇ- ಚೈತ್ರಾ ತಾಯಿ ಭಾವುಕ ನುಡಿ
BBK11: ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಬಿರುಗಾಳಿ ಎಂದ ಉಗ್ರಂ ಮಂಜು ತಂದೆ
BBK11: ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳ ಪೋಷಕರು ಎಂಟ್ರಿ; ತಾಯಿ ನೋಡಿ ತ್ರಿವಿಕ್ರಮ್ ಕಣ್ಣೀರು
BBK11: ಮಂಜುಗೆ ದುರಹಂಕಾರ ನಿರ್ವಹಣೆಯ ಕಷಾಯ ಕುಡಿಸಿದ ಭವ್ಯ.! ಇಬ್ಬರ ನಡುವೆ ಟಾಕ್ ವಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.