IPL: ಆರ್ಸಿಬಿಯ “ಕಪ್’ ಕನಸು ಕೈಜಾರಿದ್ದೆಲ್ಲಿ?
Team Udayavani, May 24, 2024, 7:02 AM IST
ಬೆಂಗಳೂರು: ಈ ಐಪಿಎಲ್ನ ದ್ವಿತೀಯಾರ್ಧದಲ್ಲಿ ಅಸಾಮಾನ್ಯ ಕಮ್ಬ್ಯಾಕ್ ಮಾಡಿದ್ದ ಆರ್ಸಿಬಿ, ಪ್ಲೇಆಫ್ಗೇರಿ ಹುರುಪು ಹೆಚ್ಚಿಸಿತ್ತು. ಆದರೆ ಬುಧವಾರ, ರಾಜಸ್ಥಾನ್ ವಿರುದ್ಧ ಎಲಿಮಿನೇಟರ್ನಲ್ಲಿ ಸೋತ ಬಳಿಕ ತಂಡ, ಅಭಿಮಾನಿಗಳನ್ನಾವರಿಸಿದ್ದ ಸಂಭ್ರಮ ಒಮ್ಮೆಗೆ ಕರಗಿದೆ. 16 ವರ್ಷಗಳಿಂದ ಕಾಣುತ್ತಿರುವ “ಕಪ್’ ಕನಸು ಈ ಬಾರಿಯೂ ಕೈಜಾರಿದೆ. ಇದು ಇಡೀ ಆರ್ಸಿಬಿ ಬಳಗವನ್ನು ಬೇಸರಗೊಳಿಸಿದೆ.
ಅಸಲಿಗೆ ಪ್ಲೇಆಫ್ ಅರ್ಹತೆಯೇ ದೂರದ ಮಾತಾಗಿದ್ದ ಆರ್ಸಿಬಿ ಪವಾಡ ರೀತಿಯಲ್ಲಿ ನಾಕೌಟ್ ಹಂತಕ್ಕೇರಿತ್ತು. ಎ.25ರಿಂದ ಹೈದರಾಬಾದ್, ಗುಜರಾತ್ (2 ಬಾರಿ), ಪಂಜಾಬ್, ಡೆಲ್ಲಿ ಮತ್ತು ಚೆನ್ನೈ ವಿರುದ್ಧ ಗೆದ್ದು ಸತತ 6 ಗೆಲುವಿನೊಂದಿಗೆ ಪ್ಲೇಆಪ್ಗೆ ಪ್ರವೇಶಿಸಿತ್ತು. ಅದರಲ್ಲೂ ಚೆನ್ನೈ ವಿರುದ್ಧ ಎಲ್ಲ ಲೆಕ್ಕಾಚಾರಗಳನ್ನು ದಾಟಿ ಗೆದ್ದಿದ್ದು ಪವಾಡವೇ ಸರಿ. ಋತುವಿನ ಆರಂಭದಲ್ಲಿ ಶುರುವಾಗಿದ್ದ “ಆರ್ಸಿಬಿಯ ಹೊಸ ಅಧ್ಯಾಯ’ ಎಲಿಮಿನೇಟರ್ನಲ್ಲೇ ಅಂತ್ಯವಾಗಿದೆ.
ಎಲ್ಲಿದೆ ವೈಫಲ್ಯ?:
- ಆರಂಭದಿಂದಲೂ ಆರ್ಸಿಬಿಗೆ ಬೌಲರ್ಗಳ ವೈಫಲ್ಯ ಪ್ರಬಲವಾಗಿ ಕಾಡಿತ್ತು. ರಾಜಸ್ಥಾನ್ ವಿರುದ್ಧದ ಎಲಿಮಿನೇಟರ್ನಲ್ಲೂ ಇದು ಪ್ರತಿಬಿಂಬಿತವಾಯಿತು.
- ಕೂಟದಲ್ಲಿ ತಂಡದ ಬ್ಯಾಟಿಂಗ್ ಬಹುತೇಕ ವಿರಾಟ್ ಕೊಹ್ಲಿ ಮೇಲೆ ಅವಲಂಬಿತವಾಗಿತ್ತು. ಕಡೆಕಡೆಗೆ ರಜತ್ ಪಾಟೀದಾರ್, ದಿನೇಶ್ ಕಾರ್ತಿಕ್, ವಿಲ್ ಜ್ಯಾಕ್ಸ್ ನೆರವಿಗೆ ನಿಂತರು.
- ತಂಡದಲ್ಲಿ ಧೋನಿ ರೀತಿಯ ಫಿನಿಶರ್ಗಳ, 4,5,6ನೇ ಕ್ರಮಾಂಕದಲ್ಲಿ ಸ್ಫೋಟಕವಾಗಿ ಆಟವಾಡಬಲ್ಲ ಬ್ಯಾಟರ್ಗಳ ಕೊರತೆಯಿದೆ.
- ತಂಡದ ಕ್ಷೇತ್ರರಕ್ಷಣೆ ನಿರೀಕ್ಷಿತ ಮಟ್ಟದಲ್ಲಿಲ್ಲ. ಇದರಿಂದ ರನ್ ಸೋರಿಹೋಗಿದೆ.
- ತಂಡದ ಪ್ರಮುಖರಾದ ಗ್ಲೆನ್ ಮ್ಯಾಕ್ಸ್ವೆಲ್, ನಾಯಕ ಫಾ ಡು ಪ್ಲೆಸಿಸ್, ವೇಗಿಗಳಾದ ಮೊಹಮ್ಮದ್ ಸಿರಾಜ್, ಅಲ್ಜಾರಿ ಜೋಸೆಫ್, ಸ್ಪಿನ್ನರ್ ಮಾಯಾಂಕ್ ದಾಗರ್ ವೈಫಲ್ಯ ಕಂಡಿದ್ದಾರೆ.
ಡ್ರೆಸ್ಸಿಂಗ್ ಕೊಠಡಿಯಲ್ಲಿ ಮಡುಗಟ್ಟಿದ ನೋವು:
ರಾಜಸ್ಥಾನ್ ವಿರುದ್ಧದ ಪಂದ್ಯದ ಬಳಿಕ ಆರ್ಸಿಬಿ ಡ್ರೆಸ್ಸಿಂಗ್ ರೂಮ್ ಮಂಕಾಗಿತ್ತು. ಆರ್ಸಿಬಿ ಬಳಗದಲ್ಲಿ ನೋವೇ ಮಡುಗಟ್ಟಿತ್ತು. ಸೋಲಿನ ಬಳಿಕ ಡ್ರೆಸ್ಸಿಂಗ್ ರೂಮ್ನಲ್ಲಿ ಆರ್ಸಿಬಿ ಆಟಗಾರರು ಬೇಸರದಲ್ಲಿರುವ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
T20 Asia Cup: ಬಾಂಗ್ಲಾ ವಿರುದ್ದ ಅಂಡರ್ 19 ವನಿತಾ ಏಷ್ಯಾಕಪ್ ಚಾಂಪಿಯನ್ ಆದ ಭಾರತ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
IND-W vs WI: ವನಿತೆಯರ ಏಕದಿನ ಮುಖಾಮುಖಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.