Sagara ತಾಳಗುಪ್ಪ,ಕಾರ್ಗಲ್; ಬಿರುಗಾಳಿ ಮಳೆಗೆ ಅಪಾರ ಹಾನಿ
Team Udayavani, May 23, 2024, 10:58 PM IST
ಸಾಗರ: ಗುರುವಾರ ಮಧ್ಯಾಹ್ನ ತಾಲೂಕಿನ ವಿವಿಧ ಭಾಗಗಳಲ್ಲಿ ಮಳೆಯೊಂದಿಗೆ ಬೀಸಿದ ಬಿರುಗಾಳಿಗೆ ಅಪಾರ ನಷ್ಟ ಉಂಟಾಗಿದೆ. ತಾಳಗುಪ್ಪ ಭಾಗದಲ್ಲಿ ಮಳೆ, ಗಾಳಿ ಅಬ್ಬರಕ್ಕೆ ಹಲವು ಮರ ಧರೆಗುರುಳಿವೆ. ತಾಳಗುಪ್ಪ ಬಳಿಯ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ಹಲವು ವಿದ್ಯುತ್ ಕಂಬ, ಮರ ಮುರಿದ ಬಿದ್ದ ಪರಿಣಾಮ ಒಂದು ಗಂಟೆಗೂ ಹೆಚ್ಚುಕಾಲ ವಾಹನ ಸವಾರರು ರಸ್ತೆಯಲ್ಲೇ ನಿಂತು ಪರದಾಡಬೇಕಾಯಿತು.
ತಾಳಗುಪ್ಪದ ಮರತ್ತೂರಿನ ಮಹಾಗಣಪತಿ ಟ್ರೇಡರ‍್ಸ್‌ನ ಮಾಡಿನ ಕಬ್ಬಿಣದ ಟ್ರಸ್ ಬಿರುಗಾಳಿಗೆ ಸಿಲುಕಿ ಹಾರಿ ಹೋಗಿದೆ. ಮಾಡಿನ ಕಬ್ಬಿಣದ ಕಂಬಿಗಳು ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ಬೆಂಕಿ ಕಾಣಿಸಿಕೊಂಡು ಜನರಲ್ಲಿ ಆತಂಕವನ್ನು ಉಂಟುಮಾಡಿತ್ತು. ಮಿಲ್‌ನಲ್ಲಿದ್ದ ಅಕ್ಕಿ, ಭತ್ತ ನೀರಿಗೆ ಆಹುತಿಯಾಗಿದ್ದು ಲಕ್ಷಾಂತರ ರೂಪಾಯಿ ಹಾನಿಯಾಗಿದೆ.
ಕಾರ್ಗಲ್ ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಶೆಟ್ಟಿಕ್ಯಾಂಪ್ ಬಳಿ ಇರುವ ಶೈನಿ ಥಾಮ್ಸನ್ ಎಂಬುವವರ ಹೊಸ ಮನೆಯ ಮೇಲ್ಛಾವಣಿಯ ಅರ್ಧ ಭಾಗ ಬಿರುಗಾಳಿಗೆ ಹಾರಿ ಹೋಗಿದೆ. ಮನೆಯ ಗೋಡೆ ಕೂಡ ಕುಸಿದು ಅಪಾರ ಹಾನಿಯುಂಟಾಗಿದೆ. ತಾಲೂಕಿನ ಬೇರೆ ಬೇರೆ ಭಾಗಗಳಲ್ಲಿಯೂ ಹಾನಿ ಉಂಟಾಗಿರುವ ಮಾಹಿತಿಯಿದ್ದು, ತಾಲೂಕು ಆಡಳಿತ ಹಾನಿಯ ಪ್ರಮಾಣವನ್ನು ಅಂದಾಜಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.