Dabangg!; ಬಂಧನಕ್ಕಾಗಿ 4 ಮಹಡಿ ಏರಿ ವಾರ್ಡ್‌ಗೇ ನುಗ್ಗಿದ ಪೊಲೀಸ್ ಜೀಪ್!
ಹೃಷಿಕೇಶದ ಏಮ್ಸ್ ಆಸ್ಪತ್ರೆಯಲ್ಲಿ ವೈದ್ಯೆಗೆ ಲೈಂಗಿಕ ಕಿರುಕುಳ ನೀಡಿದವ ಸೆರೆ... ಏನಿದು ಪ್ರಕರಣ ?
Team Udayavani, May 24, 2024, 6:40 AM IST
ಡೆಹ್ರಾಡೂನ್: ಉತ್ತರಾ ಖಂಡದ ಹೃಷಿಕೇಶ ಏಮ್ಸ್ ಆಸ್ಪತ್ರೆಯ ವಾರ್ಡ್‌ನೊಳಗೆ “ದಬಾಂಗ್’ ಸಿನೆಮಾರೀತಿಯಲ್ಲಿ ಪೊಲೀಸರು ಜೀಪ್ ನುಗ್ಗಿ ಸಿದ್ದು, ರೋಗಿಗಳ ವಾರ್ಡ್‌ನಿಂದಲೇ ಆರೋಪಿಯನ್ನು ಬಂಧಿಸಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ.
ಎಮರ್ಜೆನ್ಸಿ ವಾರ್ಡ್‌ಗೆ ಪೊಲೀಸರಿದ್ದ ಬಿಳಿ ಬಣ್ಣದ ಎಸ್‌ಯುವಿ ನುಗ್ಗಿ ಬರುತ್ತಿದ್ದಂತೆ ಸಿಬಂದಿ, ರೋಗಿಗಳು ಮಲಗಿದ್ದ ಸ್ಟ್ರೆಚರ್‌ಗಳನ್ನು ಸರಿಸಿ ದಾರಿ ಮಾಡಿಕೊಟ್ಟರು. ಪೊಲೀಸರು ನೆರೆದಿದ್ದ ಜನರನ್ನು ಸರಿಸಿ ಜೀಪ್ ಮುಂದೆ ಹೋಗಲು ಅನುವು ಮಾಡಿದ್ದಾರೆ.
ಆಸ್ಪತ್ರೆಯ ಆಪರೇಷನ್ ಥಿಯೇಟರ್ ಒಳಗೆ ಮಹಿಳಾ ವೈದ್ಯರಿಗೆ ಲೈಂಗಿಕ ಕಿರುಕುಳ ನೀಡಿ ಪೀಡಿಸುತ್ತಿದ್ದವನ ಸೆರೆಗಾಗಿ ಈ ಸಿನಿ ಮೀಯ ಕಾರ್ಯಾಚರಣೆ ನಡೆಸಲಾಗಿದೆ. ಆಸ್ಪತ್ರೆಯ ಶುಶ್ರೂಷಕ ಅಧಿಕಾರಿ ಸತೀಶ್ ಕುಮಾರ್ ಮಹಿಳಾ ವೈದ್ಯರಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಲಾ ಗಿದೆ. ಆತನ ಬಂಧನಕ್ಕೆ ಆಗ್ರಹಿಸಿ ಆಸ್ಪತ್ರೆ ಹೊರಗೆ ತೀವ್ರ ಪ್ರತಿಭಟನೆ ನಡೆದಿತ್ತು.
4 ಮಹಡಿ ಏರಿದ ಜೀಪು!
ಪ್ರತಿಭಟನಕಾರರು ಆಕ್ರೋಶಭರಿತ ರಾಗಿದ್ದ ಕಾರಣ ಆರೋಪಿಯನ್ನು ಅವರ ನಡುವಿನಿಂದ ಕರೆದೊಯ್ಯುವ ಬದಲು ಪೊಲೀಸರು ಆಸ್ಪತ್ರೆ ಒಳಕ್ಕೆ ಜೀಪ್ ಸಹಿತ ಬಂದು ಬಂಧಿಸಿದ್ದಾರೆ. ಆರೋಪಿಯು ಎಮರ್ಜೆನ್ಸಿ ವಾರ್ಡ್‌ನಲ್ಲಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಇಳಿಜಾರು ಹಾದಿಯಲ್ಲಿ ಆಸ್ಪತ್ರೆಯ 4ನೇ ಮಹಡಿಗೆ ಜೀಪ್ ಮೂಲಕ ಸಾಗಿ ಆತನನ್ನು ಬಂಧಿಸಿದ್ದಾರೆ.
ಪೊಲೀಸರ ನಡೆಗೂ ಟೀಕೆ
ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪೊಲೀಸರ ನಡೆಯ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ. ತುರ್ತು ನಿಗಾ ವಿಭಾಗದ ಒಳಗೆ ಪೊಲೀಸ್ ಜೀಪ್ ಜತೆ ಬರುವ ಮೂಲಕ ಪೊಲೀಸರು ರೋಗಿಗಳಿಗೆ ಗಾಬರಿ ಉಂಟುಮಾಡಿದ್ದಾರೆ ಮತ್ತು ಅಲ್ಲಿದ್ದ ಎಲ್ಲರನ್ನೂ ಭಯಭೀತರನ್ನಾಗಿಸಿದ್ದಾರೆ ಎಂದು ಆಕ್ಷೇಪ ವ್ಯಕ್ತವಾಗಿದೆ.
ಏನಿದು ಪ್ರಕರಣ ?
ಏಮ್ಸ್ ಶುಶ್ರೂಷಕ ಅಧಿಕಾರಿ ಸತೀಶ್ ಕುಮಾರ್‌ನಿಂದ ವೈದ್ಯೆಗೆ ಲೈಂಗಿಕ ಕಿರುಕುಳ
ಅನುಚಿತ ಸಂದೇಶ ಕಳುಹಿಸಿ ಮಾನಸಿಕ ವಾಗಿಯೂ ಹಿಂಸಿಸಿದ ಆರೋಪ
ವೈದ್ಯೆ ದೂರು ನೀಡಿ 3 ದಿನ ಕಳೆದರೂ ಎಫ್ಐಆರ್ ದಾಖಲಾಗದ್ದಕ್ಕೆ ಆಕ್ರೋಶ
ಆರೋಪಿಯ ವಜಾ ಹಾಗೂ ಬಂಧನಕ್ಕೆ ಆಗ್ರಹಿಸಿ ರೆಸಿಡೆಂಟ್ ವೈದ್ಯರ ಪ್ರತಿಭಟನೆ
ಪ್ರತಿಭಟನೆ ಬಳಿಕ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 354, 506ರಂತೆ ಕೇಸು ದಾಖಲು
ಪ್ರತಿಭಟನೆ ತೀವ್ರವಾಗಿದ್ದ ಕಾರಣ ಆಸ್ಪತ್ರೆ ಒಳಗೇ ಆರೋಪಿಯ ಬಂಧನಕ್ಕೆ ಚಿಂತನೆ
4ನೇ ಮಹಡಿಯಲ್ಲಿದ್ದ ಆರೋಪಿ ಸತೀಶ್ ಕುಮಾರ್ ಬಂಧನಕ್ಕೆ ಪೊಲೀಸರ ಸಾಹಸ
ಇಳಿಜಾರಿನಲ್ಲಿ ಜೀಪ್ ಚಲಾಯಿಸಿ ತುರ್ತು ವಿಭಾಗದಲ್ಲಿದ್ದ ಆರೋಪಿ ಸೆರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra; ಇನ್‌ಸ್ಟಾದಲ್ಲಿ 56 ಲಕ್ಷ ಫಾಲೋವರ್ಸ್ ಇದ್ರು ಸಿಕ್ಕಿದ್ದು ಕೇವಲ 155 ಮತ!!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Shanghai: ಎಐ ಆಧಾರಿತ ರೋಬೋಟ್‌ನಿಂದ 12 ರೋಬೋಗಳ ಕಿಡ್ನಾಪ್!
Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Police Raid: ಮಾದಕವಸ್ತು, ಅಕ್ರಮ ಮದ್ಯಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.