![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, May 24, 2024, 11:24 PM IST
ಮಂಗಳೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 36.34 ಲ.ರೂ. ಪಡೆದು ವಂಚಿಸಿರುವ ಬಗ್ಗೆ ಮಂಗಳೂರಿನ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿಯೋರ್ವರು ಉದ್ಯೋಗಕ್ಕಾಗಿ Indeed.com ಎಂಬ ವೆಬ್‌ಸೈಟ್ ನಲ್ಲಿ ತಮ್ಮ ಬಯೋಡೇಟಾ ಅಪ್‌ಲೋಡ್ ಮಾಡಿದ್ದರು. ಫೆ.16ರಂದು ಯಾರೋ ಅಪರಿಚಿತರು ಆಸ್ಟ್ರೇಲಿಯಾದಲ್ಲಿರುವ Darrell Lea Confectionery co. ಕಂಪೆನಿ ಹೆಸರಿನಲ್ಲಿ ಇ-ಮೇಲ್ ಮೂಲಕ ಜಾಬ್ ಅಪ್ಲಿಕೇಷನ್ ಕಳುಹಿಸಿದ್ದರು. ನೀವು ಉದ್ಯೋಗಕ್ಕೆ ಆಯ್ಕೆಯಾಗಿದ್ದು ಶಿಕ್ಷಣದ ದಾಖಲಾತಿ, ಪಾಸ್‌ಪೋರ್ಟ್, ಪೊಟೋ, ಜಾಬ್ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ ಕಳುಹಿಸುವಂತೆ ತಿಳಿಸಿದರು. ಇದನ್ನು ಸತ್ಯವೆಂದು ನಂಬಿದ ದೂರುದಾರರು ತಮ್ಮ ಬಯೋಡೇಟಾವನ್ನು ಇ-ಮೇಲ್ ಮಾಡಿದ್ದರು.
ಆರೋಪಿಗಳು ಅವರಿಗೆ ಆಫರ್ ಲೆಟರ್, ಒಪ್ಪಂದ ಲೆಟರ್, ನೇಮಕಾತಿ ಲೆಟರ್, ವೀಸಾ ಕನ್‌ಫರ್ಮೇಷನ್ ಲೆಟರ್ ಕಳುಹಿಸಿ ಮೊಬೈಲ್‌ಗೆ ಕರೆ ಮಾಡಿ ವೀಸಾ ಕನ್ಫರ್ಮೇಶನ್ ಫಾರ್ಮ್ ಶುಲ್ಕ, ವೆರಿಫಿಕೇಶನ್ ಶುಲ್ಕ ಮತ್ತು ಇತರ ಶುಲ್ಕ ಪಾವತಿಸಬೇಕೆಂದು ತಿಳಿಸಿದರು. ಅನಂತರ ಎ.4ರಿಂದ ಮೇ 6ರವರೆಗೆ ಹಂತ ಹಂತವಾಗಿ 36,34,000 ರೂ. ವರ್ಗಾಯಿಸಿಕೊಂಡು ವಂಚಿಸಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಲಕ್ಷಾಂತರ ರೂ. ವರ್ಗಾವಣೆ
ಮಣಿಪಾಲ: ಮೊಬೈಲ್‌ಗೆ ಆಧಾರ್ ಕಾರ್ಡ್ ಬಗ್ಗೆ ಬಂದ ಸಂದೇಶಕ್ಕೆ ಕ್ಲಿಕ್ ಮಾಡಿದ ಬಳಿಕ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ವರ್ಗಾವಣೆಗೊಂಡ ಘಟನೆ ನಡೆದಿದೆ.
ಮಣಿಪಾಲದ ಆಶಾಲತಾ ಆರ್. ಅವರ ಮೊಬೈಲ್‌ಗೆ ಮೇ 20ರಂದು ಆಧಾರ್ ಕಾರ್ಡ್‌ನ ಬಗ್ಗೆ ಸಂದೇಶ ಬಂದಿತ್ತು. ಅನಂತರ ಕೆಲವೇ ಕ್ಷಣದಲ್ಲಿ ಅವರ ಬ್ಯಾಂಕ್ ಉಳಿತಾಯ ಖಾತೆಯಿಂದ ಮತ್ತು ಆರ್‌ಡಿ ಖಾತೆಯಿಂದ ಅಪರಿಚಿತರು 2,55,892 ರೂ.ಗಳನ್ನು ಅಕ್ರಮವಾಗಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಆನ್‌ಲೈನ್ ವಂಚನೆಯ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.