![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 25, 2024, 12:26 AM IST
ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ನಿರಂತರವಾಗಿ ದಬ್ಬಾಳಿಕೆಯ ರಾಜಕಾರಣದಲ್ಲಿ ತೊಡಗಿದೆ. ಜಿಲ್ಲೆಯಲ್ಲೂ ಅದೇ ಧೋರಣೆ ಮುಂದುವರಿಸಿದ್ದು, ಶಾಸಕ ಹರೀಶ್ ಪೂಂಜ ಅವರ ಬಂಧನಕ್ಕೆ ಮುಂದಾಗಿರುವುದು ಇದಕ್ಕೆ ನಿದರ್ಶನ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ಪ್ರಕರಣದಲ್ಲಿ ಹರೀಶ್ ಪೂಂಜ ಅವರ ಜತೆ ಬಿಜೆಪಿಯ ರಾಜ್ಯ, ಜಿಲ್ಲಾ ನಾಯಕರು, ಕಾರ್ಯಕರ್ತರು ಸದಾ ಇರಲಿದ್ದಾರೆ ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಹೇಳಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನೇಹಾ ಪಾಟೀಲ್, ಅಂಜಲಿ ಹತ್ಯೆ ಪ್ರಕರಣಗಳು ನಡೆದಿವೆ, ವಿಧಾನಸೌಧದ ಆವರಣದಲ್ಲೇ ಪಾಕಿಸ್ಥಾನ್ ಜಿಂದಾಬಾದ್ ಘೋಷಣೆ ಕೂಗಿದವರ ವಿರುದ್ಧ ಪ್ರಕರಣ ದಾಖಲಿಸಲು ಮೀನಮೇಷ ಎಣಿಸಿದ್ದವರು ಶಾಸಕರನ್ನು ಬಂಧಿಸುವ ಪರಿಸ್ಥಿತಿ ರಾಜ್ಯದಲ್ಲಿದೆ. ಹಿಂದೆ ವಿದ್ಯಾರ್ಥಿಗಳ ಪರವಾಗಿ ನಿಂತದ್ದಕ್ಕೆ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಡಾ| ಭರತ್ ಶೆಟ್ಟಿ ಕೂಡ ಪ್ರಕರಣ ಎದುರಿಸಬೇಕಾಯಿತು ಎಂದರು.
ಪೂಂಜ ಮನೆಯಲ್ಲಿ ಇರುವಾಗ, ಕುಟುಂಬದವರಿರುವ ವೇಳೆಯಲ್ಲಿ ನೋಟಿಸ್ ಕೊಟ್ಟು ಹೋಗುವ ಬದಲು ಪೊಲೀಸರು ಅಲ್ಲೇ ಕುಳಿತಿದ್ದರು. ಹಾಗಾಗಿಯೇ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರು ರಕ್ಷಣೆಗಾಗಿ ಸೇರಿದ್ದರು. ಬಳಿಕ ಸಂಸದರು, ನಾವೆಲ್ಲರೂ ತೆರಳಿ ಪೊಲೀಸರಿಗೆ ಐದು ದಿನ ಕಾಲಾವಕಾಶ ಕೋರಿದ್ದೆವು. ಒಂದು ವೇಳೆ ಅಕ್ರಮ ದಂಧೆಗಳಲ್ಲಿ ತೊಡಗಿರುವವರನ್ನು ಬಂಧಿಸುವುದಾದರೆ ಎಲ್ಲ ಕಡೆಯೂ ಅದನ್ನು ಕೈಗೊಳ್ಳಬೇಕು, ಕೇವಲ ಅದರ ಹೆಸರಲ್ಲಿ ಯಾರನ್ನೋ ಗುರಿಯಾಗಿಸುವುದು ಸರಿಯಲ್ಲ ಎಂದರು.
ಶಶಿರಾಜ್ ಶೆಟ್ಟಿ ಯುವಮೋರ್ಚಾದ ಅಧ್ಯಕ್ಷರಾಗಿರುವವರು, ಅವರ ಮೇಲೆ ಕೇಸ್ ಇದ್ದಿರಬಹುದು. ಹಾಗೆಂದು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅವರಿಲ್ಲ, ಕಾಂಗ್ರೆಸ್ ಒತ್ತಡಕ್ಕೆ ಮಣಿದು ತಹಶೀಲ್ದಾರ್ ಹಾಗೂ ಪೊಲೀಸರು ಅವರನ್ನು ಇದರಲ್ಲಿ ಸಿಲುಕಿಸಲು ಯತ್ನಿಸಿದ್ದರ ವಿರುದ್ಧ ಸಹಜವಾಗಿ ಶಾಸಕ ಪೂಂಜ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಈ ಘಟನೆ ನಮಗೆಲ್ಲರಿಗೂ ಬೇಸರ ತಂದಿದೆ ಎಂದರು.
ಯಾವುದೇ ಪ್ರಕರಣದಲ್ಲಿ ನಾವೆಲ್ಲರೂ ಸಹಕಾರ ನೀಡಲು ಸಿದ್ದರಿದ್ದೇವೆ, ಆದರೆ ಅನವಶ್ಯಕವಾಗಿ ಕಿರುಕುಳ ನೀಡಲು ಮುಂದಾದರೆ ಸುಮ್ಮನಿರುವುದಿಲ್ಲ. ಮುಂಬರುವ ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾವ
ವನ್ನು ನಮ್ಮ ಶಾಸಕರು ಮಾಡಲಿದ್ದಾರೆ ಎಂದವರು ಹೇಳಿದರು.
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ

You seem to have an Ad Blocker on.
To continue reading, please turn it off or whitelist Udayavani.